PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ೨೦:  ಕೊಪ್ಪಳ ಸಮೀಪದ ಭಾಗ್ಯನಗರ ಗ್ರಾಮದ ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ಕನಕದಾಸ ಜಯಂತಿಯ ಪ್ರಯುಕ್ತ ಬೆಳಿಗ್ಗೆ ೯:೩೦ಕ್ಕೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.  ನಂತರ ಶಾಲಾ ಮಕ್ಕಳು ಪ್ರಾರ್ಥನೆಗೀತೆ ಹಾಗೂ ಕೆಲವು ಮಕ್ಕಳಿಂದ ಕನಕದಾಸರ ಕುರಿತು ಕಿರುನುಡಿಗಳನ್ನು ವಾಚಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ   ಪ್ರಶಾಂತ ಕುಲಕರ್ಣಿ ವಹಿಸಿದ್ದರು ಹಾಗೂ ಮುಖ್ಯಅತಿಥಿಗಳಾಗಿ ಶ್ರೀಮತಿ ಮಂಗಳಾ ಡಂಬಳ ಇವರು ಆಗಮಿಸಿದ್ದರು.  ಶಾಲೆಯ ಸಹ ಶಿಕ್ಷಕರಾದ ಶಿವರಾಜ್ ಏಣಿ ಇವರು ಮಾತನಾಡಿ ’ದಾಸ ಸಾಹಿತ್ಯವು ತ್ರಿಕಾಲ ಸತ್ಯಗಳನ್ನು ಒಳಗೊಂಡಿರುವ ಅಮೂಲ್ಯ ಕಾವ್ಯವಾಗಿದೆ.  ಹಾಗೂ ಕನಕದಾಸರು ಅಂದಿನ ಸಾಮಾಜಿಕ ಮೌಢ್ಯತೆಗಳನ್ನು, ಅನಿಷ್ಠ ಪದ್ದತಿಗಳನ್ನು ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಅಜ್ಞಾನ, ಅಂದಕಾರ, ಮೇಲು-ಕೀಳು, ತೊಡೆದು ಸಹಬಾಳ್ವೆ, ಅರ್ಪಣ ಮನೋಭಾವಗಳನ್ನು ಜನರಲ್ಲಿ ಬೆಳಸಲು ಪ್ರಯತ್ನಿಸಿದ ಮಹಾನ್ ಕಾಲಜ್ಞಾನಿ’ಯಾಗಿದ್ದಾರೆ.  ಎಂದು ಹೇಳಿದರು.
  ಕು|| ಶಕುಂತಲಾ ಬೆನ್ನಾಳ ಇವರು ದಾಸರ ಕೀರ್ತನೆಗಳುನ್ನು ಹಾಡಿದರು. ಪಿ. ರಾಜೆಶ್ವರಿ ಅವರು ಕಾರ್ಯಕ್ರಮದ  ನಿರೊಪಣೆ ಮಾಡಿದರೆ,  ಶ್ರೀಮತಿ ಗೌರಮ್ಮ ಇವರು ವಂದನಾರ್ಪಣೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top