PLEASE LOGIN TO KANNADANET.COM FOR REGULAR NEWS-UPDATES

ಗಂಗಾವತಿ ೨೫: ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸಿಪಿಐಎಂಎಲ್ ಲಿಬರೆಷನ್ ಪಕ್ಷದ ಅಂಗಸಂಘಟನೆಗಳ ಮುಖಂಡರುಗಳು ಬೆಳ್ತಂಗಡಿ ತಾಲೂಕಿನ ಉಜಿರೆಯ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐಗೆ  ವಹಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಲಾಯಿತು ಎಂದು ಕ್ರಾಂತಿಕಾರಿ ಯುವಜನ ಸಂಘದ ಜಿಲ್ಲಾ  ಸಂಚಾಲಕ ಟಿ. ರಾಘವೇಂದ್ರ  ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಹದಿನೇಳು ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕ್ರೂರ ಕೊಲೆಯ ಪ್ರಕರಣ ನಡೆದು ವರ್ಷವಾದರೂ, ಈ ಅಪರಾಧಗಳನ್ನು ಸಾಬೀತು ಪಡಿಸಲು ಸಾಕಷ್ಟು ಪುರಾವೆಗಳು ದೊರಕ್ಕಿದ್ದರೂ ಪೋಲೀಸರು ಅತ್ಯಾಚಾರದ ಪ್ರಕರಣವನ್ನು ಸಹ ದಾಖಲಿಸಲು ನಿರಾಕರಿಸಿರುವುದು ಮತ್ತು ತನಿಖೆಯಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸದಿರುವುದನ್ನು ಸಿಪಿಐಎಂಎಲ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ (ಎಐಪಿಡಬ್ಲ್ಯೂ), ಎಐಎಸ್‌ಎ, ಆರ್‌ವೈಎ, ಎಐಎಎಲ್‌ಎ ಮತ್ತು ಎಐಸಿಸಿಟಿಯು ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. 
ಧರ್ಮಸ್ಥಳದ ಪ್ರಭಾವಶಾಲಿ ಆಡಳಿತ ಮತ್ತು ಇತರ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ಪೋಲೀಸರು ವರ್ತಿಸುತ್ತಾ ಕರ್ತವ್ಯ ನಿರ್ವಹಿಸುವುದರಲ್ಲಿ ವಿಫಲರಾಗಿದ್ದಾರೆ, ಕಾನೂನು ಮತ್ತು ಸಾರ್ವಜನಿಕರಿಗೆ ದ್ರೋಹ ಬಗೆದಿದ್ದಾರೆ. ಆರೋಪಿಗಳು ಮತ್ತು ಅನುಮಾನಿತರನ್ನು ಬಂಧನಕ್ಕೊಳಪಡಿಸದೆ, ವಿಚಾರಣೆ ಮಾಡದೆ ಅವರನ್ನು ರಕ್ಷಿಸುತ್ತಿದ್ದಾರೆ. ಸೌಜನ್ಯಳ ಪರ ನ್ಯಾಯಕ್ಕಾಗಿ ಹೋರಾಡುತ್ತಿ ರುವವರ ಮೇಲೆ ಹಲ್ಲೆ ನಡೆಯುತ್ತಿದ್ದರೂ ಪೋಲೀಸರು ಮಧ್ಯಪ್ರವೇಶಿಸುತ್ತಿಲ್ಲ. ಅಷ್ಟಲ್ಲದೆ, ತಪ್ಪ್ಪಿತಸ್ಢರನ್ನು ಸೆರೆಹಿಡಿಯಲು ಲಭ್ಯವಿರುವ ಪುರಾವೆಗಳನ್ನು ಧ್ವಂಸ ಮಾಡುವುದು ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದರಲ್ಲಿ ಪೋಲೀಸರು ಮತ್ತು ಧರ್ಮಸ್ಥಳದ ಆಡಳಿತ ಮೇಲುಗೈ ಸಾಧಿಸಿದ್ದಾರೆ. ಪೋಲೀಸರು ನ್ಯಾಯ ಒದಗಿಸುವುದರಲ್ಲಿ ವಿಫಲವಾಗಿರುವುದರಿಂದ, ಬಲಿಷ್ಠ ಶಕ್ತ್ತಿಗಳು ಆರೋಪಿ ಸ್ಥಾನದಲ್ಲಿರು ವುದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತೇವೆ.
ಈ ಪ್ರಕರಣವನ್ನು ಫಾಸ್ಟ್ ಟ್ರಾಕ್ ಕೋರ್ಟ್‌ನಲ್ಲಿ(ಶೀಘ್ರಗತಿ ನ್ಯಾಯಾಲಯದಲ್ಲಿ) ನಡೆಸಿ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ನೀಡ ಬೇಕೆಂದು ಒತ್ತಾಯಿಸುತ್ತೇವೆ. ಕರ್ತವ್ಯ ಪಾಲನೆಯಲ್ಲಿ ವಿಫಲವಾಗಿರುವ ಪೋಲೀಸರನ್ನು ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸುತ್ತೇವೆ. ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರೇ ಒಪ್ಪಿದಂತೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದಿವೆ ಎಂದು ಹೇಳಲ್ಪಡುವ ೪೦ ಕ್ಕಿಂತಲೂ ಹೆಚ್ಚಿನ ಅಸಹಜ ಮರಣಗಳ ಬಗ್ಗೆಯೂ ಸಿಬಿಐ ತನಿಖೆ ಪ್ರಾರಂಭಿಸಬೇಕು. ಇದೇ ದಶಕದಲ್ಲಿ ಧರ್ಮಸ್ಥಳದ ಸುತ್ತಮುತ್ತ ನಡೆದಿವೆ ಎಂದು ಹೇಳಲ್ಪಡುವ ೪೪೦ಕ್ಕಿಂತಲೂ ಹೆಚ್ಚಿನ ಅಸಹಜ ಮರಣಗಳ ಬಗ್ಗೆಯೂ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತೇವೆ.
ಸೌಜನ್ಯ ಪ್ರಕರಣದಲ್ಲಿ ಮತ್ತು ಈ ಮಾರ್ಮಿಕ ಅಸಹಜ ಮರಣಗಳ ಪ್ರಕರಣಗಳಲ್ಲಿ ಇಡೀ ಧರ್ಮಸ್ಥಳದ ಆಡಳಿತವನ್ನು ನಿಸ್ಪಕ್ಷಪಾತವಾದ ತನಿಖೆಗೆ ಒಳಪಡಿಸಬೇಕು. ಧರ್ಮಸ್ಥಳದ ಆಡಳಿತಕ್ಕೆ ಸಂಬಂಧಪಟ್ಟ ಯಾರೊಬ್ಬರೂ ಕಾನೂನು ಮತ್ತು ಸಂವಿಧಾನದ ಚೌಕಟ್ಟಿಗೆ ಹೊರತಾದವರಲ್ಲ. ತನಿಖೆಗೆ ಒಳಪಡುವುದು, ಒಳಪಡದಿರುವುದು ಭಕ್ತರ ಅಥವಾ ಮಠಗಳ ಭಾವನೆಗೆ ಸಂಬಂಧಪಟ್ಟದ್ದಲ್ಲ, ಅದು ಕಾನೂನು ಮತ್ತು ಕಾನೂನು ಕ್ರಮಗಳಿಗೆ ಸಂಬಂಧಪಟ್ಟ ವಿಷಯವಾಗಿ ಇರಬೇಕು. ಈ ತನಿಖೆಯನ್ನು ಧಾರ್ಮಿಕ ನಂಬಿಕೆಯ ವಿಚಾರವಾಗಿ ಬದಲಾಯಿಸುವುದು ಅಥವಾ ಭಕ್ತಾದಿಗಳ ಅಮಾಯಕತೆಯನ್ನು, ಭಕ್ತಿಭಾವನೆಗಳನ್ನು ತಮ್ಮನ್ನು ರಕ್ಷಿಸಿಕೊಳ್ಳಲು ದುರ್ಬಳಕೆ ಮಾಡುವುದು ನ್ಯಾಯಸಮ್ಮತವಲ್ಲ. ಇದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕುಮ್ಮಕ್ಕು ನೀಡುತ್ತ್ತಿರುವುದು ಕಾನೂನು ಪ್ರಕ್ರಿಯೆ ಯನ್ನು ಅಡ್ಡಿಪಡಿಸುವುದೇ ಆಗಿದೆ.ಕೂಡಲೇ ತಾವು ಕ್ಯಾಬಿನೇಟ್ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ಹಕ್ಕೊತ್ತಾಯಗಳು
ಸೌಜನ್ಯ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು
ಶೀಘ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ
ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಅಸ್ವಾಭಾವಿಕ ಮರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಿ
ಧರ್ಮಸ್ಥಳದ ಆಡಳಿತ ಜವಾಬ್ದಾರಿಯನ್ನು ಸರ್ಕಾರವು ಹೊರಬೇಕು 
ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿರುವ ಅಧಿಕಾರಿಗಳನ್ನು ವಜಾ ಮಾಡಿ 

ಈ ಸಂದರ್ಭದಲ್ಲಿ ಎಐಸಿಸಿಟಿಯು ಜಿಲ್ಲಾಧ್ಯಕ್ಷರಾದ ಬಸನಗೌಡ ಸುಳೇಕಲ್, ಕೆಜಿಎಲ್‌ಯು’ನ ಎಂ.ವಿರುಪಾಕ್ಷಪ್ಪ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಮುಖಂಡರಾದ ಗಂಗಮ್ಮ, ಅಖಿಲ ಭಾರತ ವಿದ್ಯಾರ್ಥಿ ಸಂಘದ ಮುಖಂಡರಾದ ಶಿವಮೂರ್ತಿ, ಹಗೇದಾಳ ವೀರೇಶ, ಸಾಬರೆಡ್ಡಿ, ಮಲ್ಲಯ್ಯ, ಮತ್ತಿತರು ಧರಣಿಯಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top