ಕೊಪ್ಪಳ : 371ಜೆ ತಿದ್ದುಪಡಿಯೊಂದಿಗೆ ನಮ್ಮ ಹೋರಾಟ ಅಂತ್ಯವಾಗಲ್ಲ. ಹೋರಾಟ ಸಮಿತಿಯ ವಿಸರ್ಜನೆ ಇಲ್ಲ.
ಮುಂದಿನ ದಿನಗಳಲ್ಲಿ ಹೈ.ಕ. ಹೋರಾಟ ಸಮಿತಿ ಕಾವಲು ನಾಯಿಯಾಗಿ ಕೆಲಸ ಮಾಡಲಿದೆ ಎಂದು ಅಲ್ಲಮಪ್ರಭು ಬೆಟ್ಟದೂರ ಹೇಳಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ವಿಜಯೋತ್ಸವ ಆಚರಿಸುವ ಸಮಯ ಇದಲ್ಲ. ನಮ್ಮ ಮುಂದೆ ಹಲವಾರು ಸವಾಲುಗಳಿವೆ. ಅಭಿವೃದ್ದಿ ಮಂಡಳಿ ಕೇವಲ ಗುಲ್ಬರ್ಗಾ ಕ್ಕೆ ಸಿಮೀತವಾಗಬಾರದು. ಜಿಲ್ಲಾ ಕೇಂದ್ರಗಳಲ್ಲಿಯೂ ಕಚೇರಿಗಳನ್ನು ತೆರೆಯಬೇಕು. ಹಲವಾರು ದಶಕಗಳ ಸುದೀರ್ಘ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಅನುಷ್ಠಾನದಲ್ಲಿ ಯಾವುದೇ ವ್ಯತ್ಯಯ, ವ್ಯತ್ಯಾಸವಾಗದಂತೆ ಕಾಯುವ ಕೆಲಸ ಸಮಿತಿ ಮಾಡುತ್ತದೆ ಎಂದರು.
ಈ ಸಲದ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸೋಣ. ಇಲ್ಲಿಯವರೆಗೆ ನಾವು ಅಂದು ಕರಾಳ ದಿನ ಎಂದು ಆಚರಣೆ ಮಾಡುತ್ತಿದ್ದೆವು . ನಿಗಮ,ಮಂಡಳಿ ಮತ್ತು ಅಕಾಡೆಮಿಗಳ ನೇಮಕದಲ್ಲಿ ಸ್ಥಳಿಯರಿಗೆ ಪ್ರಾತಿನಿಧ್ಯ ಸಿಗಬೇಕು. ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ ನಮ್ಮ ಹೈದ್ರಾಬಾದ್ ಕರ್ನಾಟಕದವರನ್ನು ಪರಿಗಣಿಸಬೇಕು ಎಂದು ಹೇಳಿದರು.
ಹೋರಾಟ ಸಮಿತಿ ಜಿಲ್ಲಾಧ್ಯಕ್ಷರ ಎಚ್.ಎಸ್.ಪಾಟೀಲ್ ಮಾತನಾಡಿದರು.
ಹೋರಾಟ ಸಮಿತಿ ಜಿಲ್ಲಾಧ್ಯಕ್ಷರ ಎಚ್.ಎಸ್.ಪಾಟೀಲ್ ಮಾತನಾಡಿದರು.
0 comments:
Post a Comment