PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಅ. ೦೪ : ಕಳೆದ ಎರಡು ದಶಕಗಳ ಕಾಲ ಮಾಜಿ ಸಚಿವ ವೈಜನಾಥ ಪಾಟೀಲರು ಹಾಗೂ ಅವರ ಸಂಗಾತಿಗಳ, ಬೆಂಬಲಿಗರು ಹೋರಾಟ ಮಾಡಿದ್ದರಿಂದ ಸಂವಿಧಾನದ ೩೭೧ನೇ ಕಲಂ ತಿದ್ದುಪಡೆಗೊಂಡು ’ಜೆ’ ಕಲಮಾಗಿ ಇಷ್ಟರಲ್ಲಿ ರಾಷ್ಟ್ರಪತಿಗಳ ಅಂಕಿತ ಬೀಳಲಿದೆ.  ಈ ಹಿಂದೆ ಹೈ.ಕ.ದ ಸುತ್ತಲಿನ ವಿದ್ಯಾವಂತರು ತಮ್ಮ ಸಂಬಂಧಿಕರ ಸಹಾಯದಿಂದ ಡಿ.ಎಲ್.ಆರ್.ಸಿ. ಹಾಗೂ ಇನ್ನಿತರ ನೇಮಕಗಳಲ್ಲಿ ಜಿಲ್ಲಾ ಎಂಪ್ಲಾಯ್‌ಮೆಂಟ್ ಕಛೇರಿಗಳಲ್ಲಿ ಹೆಸರು ನೋಂದಾಯಿಸಿ ಸರಕಾರಿ ನೌಕರಿ ಪಡೆದುಕೊಂಡಿರುವುದು ಸೂರ‍್ಯಪ್ರಕಾಶದಷ್ಟು ಸತ್ಯಸಂಗತಿಯಾಗಿದೆ.
ನಾವು ೧೯೫೬ ರಿಂದ ಸರಕಾರಿ ನೌಕರಿ ಪಡೆಯುವಲ್ಲಿ ಹಾಗೂ ಶಿಕ್ಷಣ ಪಡೆಯುವಲ್ಲಿ ಅವಕಾಶದಿಂದ ವಂಚಿತರಾದೆವು.  ಈಗಲೂ ಕೂಡ ಎಚ್ಚೆತ್ತ ಹೊರಗಿನವರು ಹೈ.ಕ. ಜಿಲ್ಲೆಗಳಲ್ಲಿ ನುಸಳಿಕೊಂಡು ಮತ್ತೆ ಹೆಸರು ನೋಂದಣಿ ಮಾಡಿಸಿಕೊಂಡು ಶಿಕ್ಷಣದಲ್ಲಿ, ನೌಕರದಲ್ಲಿ ಮೀಸಲಾತಿ ಪಡೆಯಲು ಹುನ್ನಾರ ನಡೆಸಿದ್ದಾರೆ.  ಆದ್ದರಿಂದ ಹೈ.ಕ. ಜಿಲ್ಲೆಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ಯುವಕರು ಜಾಗೃತರಾಗಿದ್ದು, ಮತ್ತೊಮ್ಮೆ ಅವಕಾಶ ವಂಚಿತರಾಗಬಾರದು.  ಇತರೆ ಸಂಘಟನೆಗಳು ಈ ಕುರಿತು ಜಾಗೃತಿ ಮೂಡಿಸಲಿ ಎಂದು ಹೈ.ಕ. ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಸ್. ಎಸ್. ಪಾಟೀಲ್ ಹಾಗೂ ಕಾರ್ಯದರ್ಶಿ ಅಲ್ಲಮಪ್ರಭು ಬೆಟ್ಟದೂರು ಅವರು ಹೈ.ಕ. ಹೋರಾಟ ಸಮಿತಿ ಪರವಾಗಿ ಮನವಿ ಮಾಡಿದ್ದಾರೆ.

Advertisement

0 comments:

Post a Comment

 
Top