PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಅ.೦೭: ಕಳೆದ ೨೦೦೯ ರಿಂದ೨೦೧೩ ರ ವರೆಗೆ ಆವರಿಸಿದ ಭೀಕರ ಬರಗಾಲದ ಹಿನ್ನೆಯಲ್ಲಿ ಪ್ರಾರಂಭಿಸಿದ್ದ ಗೋ-ಶಾಲೆ ಮೇವು ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆಸಿದ್ದು ಸೂಕ್ತ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಒತ್ತಾಯಿಸಿದೆ.

ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ತುಳಸಿ ಮದ್ದಿನೇನಿ ಈ ಅವ್ಯವಹಾರ ನಡೆಸಿದ ಬಗ್ಗೆ ಪ್ರಾದೇಶಿಕ ಆಯುಕ್ತರು ಸ್ಪಷ್ಠ ಪಡಿಸಿದ್ದಾರೆ. ಗೋ-ಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದೇ ಸರಕಾರ ಪ್ರತಿ ಜಾನುವಾರಿಗೆ ನಿಗಧಿಪಡಿಸಿದ ಆಹಾರವೂ ಒದಗಿಸದೇ ಇದ್ದದನ್ನು ಆ ಸಮಯದಲ್ಲಿ ನಮ್ಮ ಸಂಘಟನೆಯೂ ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟಿಸಿದಾಗಲೂ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿಯವರು ಸರ್ವಧಿಕಾರಿಯಂತೆ ವರ್ತಿಸಿದ್ದಲ್ಲದೇ ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಗಡಿಪಾರು ಮಾಡಲು ಆದೇಶಿಸಿದ್ದರು.
ವರ್ಷಗಳು ಕಳೆದರೂ ಗೋ ಶಾಳೆಗಳಿಗೆ ಮೇವು ನೀಡಿದ ರೈತರಿಗೆ ಸುಮಾರು ೧.೫೦ ಕೋಟಿ ರೂ. ಬಾಕಿ ಹಣವನ್ನು ಪಾವತಿಸದೇರೈತರಿಗೆ ಸತಾಯಿಸುತ್ತಿದ್ದು ಸರಕಾರದ ಬೊಕ್ಕಸಕ್ಕೆ  ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ವೆಸಗಿದ್ದು ಸತ್ಯವಾಗಿದ್ದು, ಕೂಡಲೇ ಈ ಕುರಿತು ಸೂಕ್ತ ಸಮಗ್ರ ತನಿಖೆಗೆ ಲೋಕಾಯುಕ್ತ ಅಥವಾ ಸಿಬಿಐ ನೀಡಬೇಕೆಂದು  ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಹೊಳೆಯಾಚೆ, ಕಾರ್ಯದರ್ಶಿ ಭೀಮಸೇನ ಕಲಕೇರಿ, ಕಾರ್ಯಾಧ್ಯಕ್ಷ ನಜೀರಸಾಬ ಮೂಲಿಮನಿ, ಉಪಾಧ್ಯಕ್ಷರಾದ ಶರಣಯ್ಯ ಮಳ್ಳೂರಮಠ, ಫಕೀರಪ್ಪ ಗೊಂದಿಹೊಸಳ್ಳಿ,ಹಸಿರುಸೇನೆ ಸಂಚಾಲಕ ನಿಂಗನಗೌಡ ಗ್ಯಾರಂಟಿ, ರೈತಮುಖಂಡರಾದ ಉಮಾಕಾಂತ, ರೆಡ್ಡಿ, ಕನಕಪ್ಪ ಪೂಜಾರ, ಶಿವಣ್ಣ ಭೀಮನೂರು ಸೇರಿದಂತೆ ಇತರರು ನೇತೃತ್ವದಲ್ಲಿ ರಾಜಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಒತ್ತಾಯಿಸುವ ಮೂಲಕ ನವೆಂಬರ್ ೧೫ ವರೆಗೆ ಗಡುವು ನೀಡಿದ್ದು ತನಿಖೆಗೆ ಆದೇಶದಿದ್ದಲ್ಲಿ ಕೊಪ್ಪಳ ಬಂದ್ ಕರೆ ನೀಡಲಾಗುವುದೆಂದು ಪ್ರಕಟಣೆಯಲ್ಲಿ ಏಚ್ಚರಿಸಲಾಗಿದೆ.

Advertisement

0 comments:

Post a Comment

 
Top