PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ನಗರದ ಕಿನ್ನಾಳ ರಸ್ತೆಯ ಟ್ರೈನಿಂಗ್ ಹಾಲ್‌ನಲ್ಲಿ ಸಾಚಾರ್
sachar committee report awareness programme 

sachar committee report awareness programme  pm 15 point programme



ವರದಿ ಹಾಗೂ ಪ್ರಧಾನಮಂತ್ರಿಗಳ ೧೫ ಅಂಶಗಳ ಕಾರ‍್ಯಕ್ರಮದ ಬಗ್ಗೆ ಕೊಪ್ಪಳ ಜಿಲ್ಲಾಮಟ್ಟದ ಜಾಗೃತಿ ಶಿಬಿರ ಮತ್ತು ವಿಚಾರ ಸಂಕಿರಣವನ್ನು ಕೊಪ್ಪಳದ ಸೇವಾ ಸಂಸ್ಥೆ ಮತ್ತು ದೇವ್ಸ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ‍್ಯಕ್ರಮದಲ್ಲಿ ಸಾಚಾರ್ ವರದಿಯ ಅಂಶಗಳು ಹಾಗೂ ಅದರ ಜಾರಿಗಾಗಿ ಮಾಡಬೇಕಾದ ಹೋರಾಟದ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಿತು. ನಂತರ ಪ್ರಧಾನಮಂತ್ರಿಗಳ ೧೫ ಅಂಶಗಳ ಕಾರ‍್ಯಕ್ರಮದ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.  ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಪೀರ್‌ಬಾಷಾ,ಡಾ.ರೆಹಮಾನ್,ವಿಠ್ಠಪ್ಪ ಗೋರಂಟ್ಲಿ, ಜೆ.ಭಾರದ್ವಾಜ,ಜಾಕೀರ ಕುಕನೂರ,ಬಸವರಾಜ ಸೂಳಿಬಾವಿ ಭಾಗವಹಿಸಿದ್ದರು.  ಸಾಚಾರ್ ವರದಿಯ ಕನ್ನಡ ಅನುವಾದ ಕೃತಿ ಹಾಗೂ ಪ್ರಧಾನ ಮಂತ್ರಿಗಳ ೧೫ ಅಂಶಗಳ ಕಾರ‍್ಯಕ್ರಮದ ಮಾಹಿತಿಯ ಕರಪತ್ರ  ವಿತರಿಸಲಾಯಿತು.
sachar committee report awareness programme  pm 15 point programme
ಇದೇ ಸಂದರ್ಭದಲ್ಲಿ ಸಾಚಾರ್ ವರದಿ ಜಾರಿಗಾಗಿ ಹೋರಾಟ ಸಮಿತಿಯನ್ನು ರಚಿಸಲಾಯಿತು. ಇದಕ್ಕೆ ರಾಜಾಬಕ್ಷಿ ಎಚ್.ವಿಯವರನ್ನು ಜಿಲ್ಲಾ ಸಂಚಾಲಕರನ್ನಾಗಿ ನೇಮಿಸಲಾಯಿತು. ನಾಲ್ಕೂ ತಾಲೂಕುಗಳ ಪ್ರತಿನಿಧಿಗಳನ್ನು ಶೀಘ್ರದಲ್ಲಿಯೇ ಆಯ್ಕೆ ಮಾಡಿ ಹೋರಾಟಕ್ಕೆ ಚಾಲನೆ ನೀಡಲು ನಿರ್ಧರಿಸಲಾಯಿತು. ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ಹೇಗಿರಬೇಕೆಂಬುದರ ಬಗ್ಗೆ ಶಿಬಿರಾರ್ಥಿಗಳೊಂದಿಗೆ ಚರ್ಚಿಸಲಾಯಿತು. 
sachar committee report awareness programme  pm 15 point programme in koppal
sachar committee report awareness programme  pm 15 point programme in koppal
ಕಾರ‍್ಯಕ್ರಮದಲ್ಲಿ ಅಲ್ಲಾಗಿರಿರಾಜ್,ಕಾಟನ್ ಪಾಶಾ, ಮೈಲೈಕ್ ಜಿಲಾನ್ ,ಶೇಖ್ ಶಾಷಾ, ಮುನೀರ್ ಸಿದ್ದಿಖಿ, ಜಿ.ಎಸ್.ಗೋನಾಳ, ಮೈಲಪ್ಪ ಬಿಸರಳ್ಳಿ, ಶಿವಾನಂದ ಹೊದ್ಲೂರ, ನಭಿ ಕುಷ್ಟಗಿ, ಎಸ್.ಎ.ಗಫಾರ್, ಬಾಬು ತಳಕಲ್,ಪೀರಾಹುಸೇನ್ ಹೊಸಳ್ಳಿ, ಷಹಾಬುದ್ದೀನ್ ನೂರಬಾಷಾ, ಕಲೀಮ್ ಖಾನ್ ,ಅಸೀಪ್ ಸರ್ದಾರ್ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು. ಕಾರ‍್ಯಕ್ರಮದ ಒಟ್ಟಾರೆ ಆಶಯದ ಕುರಿತು ಸಂಸ್ಥೆಯ ರಾಜಾಬಕ್ಷಿ ಎಚ್.ವಿ. ಮಾತನಾಡಿದರು. 
ಕಾರ‍್ಯಕ್ರಮಕ್ಕೆ ಸ್ವಾಗತವನ್ನು  ಸೈಯದ್ ಗೌಸ್ ಪಾಶಾ ಕೋರಿದರು.  ಪ್ರಾಸ್ತಾವಿಕವಾಗಿ ಮಾತನಾಡಿದ ಸಿರಾಜ್ ಬಿಸರಳ್ಳಿ ಕಾರ‍್ಯಕ್ರಮ ನಿರೂಪಿಸಿದರೆ ಆರ್.ಎಚ್.ಅತ್ತನೂರ ವಂದನಾರ್ಪಣೆ ಮಾಡಿದರು. 
sachar committee awareness
pm 15 point programmes awareness
sachar report awareness programme  muslim status in india

Advertisement

0 comments:

Post a Comment

 
Top