ಕೊಪ್ಪಳ: ನಿರುದ್ಯೋಗಿ ಹಾಗೂ ಸರ್ಕಾರಿ ಅಂಗವಿಕಲ ನೌಕರರ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿರವರಿಗೆ ಇಂದು ನಗರದ ಪ್ರವಾಸಿ ಮಂದಿರದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ನಿರುದ್ಯೋಗಿ ಅಂಗವಿಕಲರಿಗೆ ನೀಡುವ ರಿಯಾಯತಿ ದರದ ಪಾಸುಗಳ ೧೦೦ಕಿ.ಮೀ ಅಂತರವನ್ನು ರದ್ದುಪಡಿಸಿ ರಾಜ್ಯಾಧ್ಯಂತ ಪ್ರಯಾಣಿಸಲು ಅನುಮತಿ ನೀಡಬೇಕು,ರಿಯಾಯತಿ ದರದ ಬಸ್ಸ್‌ಪಾಸುಗಳನ್ನು ಹೊಂದಿರುವ ಅಂಗವಿಕಲರಿಗೆ ವೊಲ್ವೋ ಬಸ್ಸಿನಲ್ಲಿ ಪ್ರಯಾಣಿಸಲು ಅನುಮತಿ ನೀಡಬೇಕು,ರಿಯಾಯತಿ ದರದ ಬಸ್ಸ ಪಾಸು ಯೋಜನೆಯನ್ನು ಸರ್ಕಾರಿ ಅಂಗವಿಕಲ ನೌಕರರಿಗೂ ವಿಸ್ತರಿಸುವುದು,ವಿಶ್ವಸಂಸ್ಥೆಯ ಪ್ರಶಸ್ತಿಯ ವಿಜೇತೆ ಅಂಧೆ ಅಶ್ವಿನಿ ಅಂಗಡಿಯನ್ನು ಸರ್ಕಾರದ ವತಿಯಿಂದ ಗುರುತಿಸಿ ಗೌರವಿಸುವುದು,ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಮೀಸಲಾದ ಆಸನಗಳು ಅವರಿಗೆ ಲಭ್ಯವಾಗುವಂತೆ ಈಗಾಗಲೇ ಬೆಂಗಳೂರಿನಲ್ಲಿ ಜಾರಿಯಾಗಿದ್ದು ಅದನ್ನು ರಾಜ್ಯದ ಉಳಿದ ಕಡೆಯಲ್ಲಿ ಸಮರ್ಪಕ ರೀತಿಯಲ್ಲಿ ಜಾರಿಗೆಯಾಗುವಂತೆ ಅಧಿಕಾರಿಗಳಿಗೆ ಸೂಚಿಸುವುದು ಎಂದು ಸಚಿವರನ್ನು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಮಾತನಾಡುತ್ತ,ಅಂಗವಿಕಲರ ಎಲ್ಲಾ ಬೇಡಿಕೆಗಳ ಕುರಿತು ಬೆಂಗಳೂರಿಗೆ ತೆರಳಿದ ಬಳಿಕ ಮಾನ್ಯ ಮುಖ್ಯಮಂತ್ರಿಗಳೊಂದಿ ಚರ್ಚಿಸಿ ಈಡೇರಿಸುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಮನಿ,ಜಿಲ್ಲಾದ್ಯಕ್ಷರಾದ ಚನ್ನಬಸಪ್ಪ ಬೆಲ್ಲದ ಮುಂತಾದವರು ಹಾಜರಿದ್ದರು.
ಪೋಟೊ:ವಿವಿಧ ಬೇಡಿಕೆಗಳನ್ನಿ ಈಡೇರಿಸುವಂತೆ ಸಾರಿಗೆ ಸಚಿವರಾದ ರಾಮಲಿಂಗಾರಡ್ಡಿಯವರಿಗೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಇಂದು ಪ್ರವಾಸಿ ಮಂದಿರದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
0 comments:
Post a Comment