PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಅ. ೬. ವಾಲ್ಮೀಕಿ ಸಮುದಾಯ ವಯಕ್ತಿಕ ಹಿತಾಸಕ್ತಿ ಮರೆತು ಸಂಘಟಿತರಾದರೆ ಮಾತ್ರ ಸಮಗ್ರ ಏಳ್ಗೆಯಾಗಲು ಸಾಧ್ಯ ಎಂದು ಸಮಾಜದ ಮುಖಂಡ ನಿವೃತ್ತ ಅಧಿಕಾರಿ ಎಂ. ಹೆಚ್. ವಾಲ್ಮೀಕಿ ಮನವಿ ಮಾಡಿದರು.
ಅವರು ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಕುರಿತು ಕರೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಸುಮಾರು ೮೦ ಲಕ್ಷದಷ್ಟಿರುವ ವಾಲ್ಮೀಕಿ ಸಮುದಾಯ ವಾಲ್ಮೀಕಿ, ನಾಯಕ, ಬೇಡ, ಬೇಡರ, ತಳವಾರ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತದೆ, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಹಗಳಲಲಿ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ, ಸರಿಯಾದ ರೀತಿಯಲ್ಲಿ ಸಂಘಟಿತರಾದರೆ ಸರಕಾರದ ಎಲ್ಲಾ ಸೌಲಭ್ಯ ಪಡೆದುಕೊಂಡು ಮುಂದೆ ಬರಲು ಸಾಧ್ಯವೆಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಪರೀಕ್ಷಿತರಾಜ್, ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. ೩ ರಿಂದ ೭.೫ ಗೆ ಹೆಚ್ಚಿಸುವದು ಸೇರಿದಂತೆ ವಿವಿಧ ಬೇಡಿಕೆಗಳು ಕೂಡಲೇ ಈಡೇರಬೇಕು, ಸಮಾಜದ ಜನರಿಗೆ ನಿಜವಾದ ಕಾಳಜಿಯಿಂದ ಮೇಲೆತ್ತಬೇಕು. ಆಳಿಸಿಕೊಳ್ಳುವದನ್ನು ಬಿಟ್ಟು ಒಗ್ಗಾಟ್ಟಾಗಿ ಆಳುವದನ್ನು ಕಲಿಯಬೇಕು ಎಂದರು.
ಹಿರಿಯ ಮುಖಂಡರಾದ ದೇವೇಂದ್ರಪ್ಪ ಡೊಳ್ಳಿನ ಮಾತನಾಡಿ, ನಮ್ಮ ಸಮಾಜ ದೊಡ್ಡ ಸಾಹಸಗಳನ್ನು ಮಾಡಿರುವಂಥಹದ್ದು, ಈಗ ಹೇಡಿಯಂತೆ ಕುಳಿತುಕೊಳ್ಳುವದು ಸರಿಯಲ್ಲ, ಗಟ್ಟಿಯಾಗಿ ಮುನ್ನಗ್ಗಬೇಕು, ಅಂದಾಗ ಮಾತ್ರ ನಮ್ಮ ಸ್ಥಾನ ನಮಗೆ ಸಿಗುತ್ತವೆ ಎಂದರು. 
ಜಿಲ್ಲಾ ನಾಯಕ ನೌಕರ ಸಂಘದ ಅಧ್ಯಕ್ಷ ರಾಜಕುಮಾರ ನಾಯಕ, ಮಾಜಿ ನಗರಸಭೆ ಸದಸ್ಯೆ ಇಂದಿರಾ ಭಾವಿಕಟ್ಟಿ, ಸಮಾಜದ ತಾಲೂಕ ಅಧ್ಯಕ್ಷ ಕೊಟೇಶ ತಳವಾರ, ಜಿಲ್ಲಾ ಯುವ ಮುಖಂಡರಾದ ಪ್ರಭುಗೌಡ ಪಾಟೀಲ, ಬಸವರಾಜ ಬನ್ನಿಕೊಪ್ಪ, ಮಲ್ಲಿಕಾರ್ಜುನ ಕಲ್ಲನವರ, ಲಕ್ಷ್ಮಣ ತಳವಾರ, ಶಾಂತೇಶ ಪೂಜಾರ, ನಾಗರಾಜ ತಳವಾರ, ಶಿವು ತಳವಾರ ಮಂಡಲಗಿರಿ, ಜೋಗದ ಬೆಟ್ಟಪ್ಪ ನಿಂಗಪ್ಪ ಗಂಗಾವತಿ, ಸಂಜೀವಪ್ಪ ಸಂಗಟಿ ಯಲಬುರ್ಗಾ, ಪ್ರಭು ಬೂದಿರೆಡ್ಡೆಪ್ಪ ಕನಕಗಿರಿ, ಮುದಿಯಪ್ಪ ತಿಗರಿ, ರಂಗಪ್ಪ ಬಂಡಿ ಕನಕಗಿರಿ, ಲಕ್ಷ್ಮಣ ಕಲ್ಲನವರ ಇತರರು ಇದ್ದರು. ಮಂಜುನಾಥ ಜಿ. ಗೊಂಡಬಾಳ ಸ್ವಾಗತಿಸಿದರು, ದೇವಪ್ಪ ಕಟ್ಟಿಮನಿ ಸಭೆ ನಿರೂಪಿಸಿದರು, ರುಕ್ಮಣ್ಣ ಶಾವಿ ವಂದಿಸಿದರು.                                      

ಜಿಲ್ಲಾ ನೂತನ ಪದಾಧಿಕಾರಿಗಳು : ಎಂ. ಹೆಚ್. ವಾಲ್ಮೀಕಿ (ಅಧ್ಯಕ್ಷ), ಹನುಮಂತಪ್ಪ ಹ್ಯಾಟಿ (ಗೌರವ ಅಧ್ಯಕ್ಷ), ಶರಣಪ್ಪ ನಾಯಕ ಕೊಪ್ಪಳ ಸ್ಥಾನಿಕ ಪ್ರಧಾನ ಕಾರ್ಯದರ್ಶಿ, ನೀಲಪ್ಪ ಭಾವಿಕಟ್ಟಿ (ಖಜಾಂಚಿ), ಮಂಜುನಾಥ ಜಿ. ಗೊಂಡಬಾಳ (ಜಿಲ್ಲಾ ಕಾರ್ಯದರ್ಶಿ ಮಾದ್ಯಮ-ಸಂಘಟನೆ) ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಉಳಿದ ಎಲ್ಲಾ ಹುದ್ದೆಗಳನ್ನು ಶೀಘ್ರದಲ್ಲಿ ನೇಮಿಸಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

0 comments:

Post a Comment

 
Top