ಕೊಪ್ಪಳ : - ಭಾಗ್ಯನಗರದ ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ದಿ:೨೭ರಂದು ಬೆಳೆಗ್ಗೆ ೧೧:೦೦ ಘಂಟೆಗೆ ಶ್ರೀಕೃಷ್ಣ ಜನ್ಮಾಷ್ಟಾಮಿಯ ನಿಮಿತ್ಯ ಶ್ರೀಕೃಷ್ಣ - ರಾಧಾರವರ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಜಿ.ಕೆ. ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಸಂತ ಪೂಜಾರ ಲೇಖಕರು & ಉಪನ್ಯಾಸಕರು ಅತಿಥಿಗಳಾಗಿ ಹೊನ್ನೂರಸಾಬ ಭೈರಾಪೂರ ಅಧ್ಯಕ್ಷರು ಗ್ರಾಮ ಪಂ. ಭಾಗ್ಯನಗರ. ಶ್ರೀನಿವಾಸ ಹ್ಯಾಟಿ. ಸದಸ್ಯರು ತಾ|| ಪಂ. ಕೊಪ್ಪಳ. ಹಾಗೂ ರಾಜಶೇಖರ್ ಪಾಟೀಲ ಹಿರಿಯ ಉಪನ್ಯಾಸಕರು ಸ.ಪ.ಪೂ.ಕಾಲೇಜ್. ಭಾಗ್ಯನಗರ.
ಕಾರ್ಯಕ್ರiದ ಮುಖ್ಯ ವಿಶಷ
: ನರ್ಸರಿ ತರಗತಿಯ ಮಕ್ಕಳು ಕೃಷ್ಣ ಮತ್ತು ರಾಧೆಯವರ ವೇಷಭೂಷಣಗಳನ್ನು ಧರಿಸಿ ಕಾರ್ಯಕ್ರಮದಲ್ಲಿನ ಎಲ್ಲರ ಕಣ್ಮನ ಸೇಳೆದು ಕಾರ್ಯಕ್ರಮಕ್ಕೆ ವಿಶೇಷ ಮೇರಗು ತಂದು ಕೊಟ್ಟರು.
ಮುಖ್ಯ ಅತಿಥಿಗಳಾದ ವಸಂತ ಪೂಜಾರರು ಕೃಷ್ಣನ ಹುಟ್ಟು-ಬೆಳವಣಿಗೆ-ಆ ಭಗವಂತನು ಭೂಮಿಗೆ ಬಂದ ಕಾರಣ ಎಲ್ಲವನ್ನೂ ಸವಿವರವಾಗಿ ಮಕ್ಕಳಿಗೆ ಹಾಗೂ ಪಾಲಕ ಪೂಷಕರಿಗೆ ಮನ ತಲುಪುವಂತೆ ಮಕ್ಕಳ ಭಾಷೆಯಲ್ಲಿ ತಿಳಿಸಿಕೊಟ್ಟರು. ಕೃಷ್ಣನ ನೆನೆದರೆ ಕಷ್ಟವೊಂದಿಷ್ಠಿಲ್ಲ ಎಂಬಂತೆ ಶ್ರೀಮನ್ ಭಗವಂತನ ನಾಮ ಸಂಕೀರ್ತನೆ .
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ದಾನಪ್ಪ ಜಿ.ಕೆ ಇವರು ಕಾರ್ಯಕ್ರಮವನ್ನುದ್ದೇಶಿಸಿ ಸಂಸ್ಥೆಯಲ್ಲಿ ನಡೆಯುವ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ, ಧಾರ್ಮಿಕ ಸಕಲ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾದ ಎಲ್ಲಾ ಪಾಲಕ-ಪೋಷಕರು ಪ್ರೋತ್ಸಾಹ-ಬೆಂಬಲ ಸದಾ ನಮ್ಮ ಜೊತೆಗೆ ಇರಲಿ ಎಂದು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿವರಾಜ ಏಣಿ. ಸಹ ಶಿಕ್ಷಕರು. ಸ್ವಾಗತವನ್ನು ಮಂಜುಳಾ ದೇವರಮನಿ. ವಂದನಾರ್ಪಣೆಯನ್ನು ಮಂಗಳಾ ಡಂಬಳ ಇವರುಗಳು ವಹಿಸಿಕೊಂಡಿದ್ದರು.
0 comments:
Post a Comment