PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ.ಆ.೨೬: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಕೊಡಮಾಡುವ ಡಾ. ಸಿದ್ದಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿಯನ್ನು ಕೊಪ್ಪಳ ಜಿಲ್ಲಾ ಉತ್ಸವದ ಸಾಂಸ್ಕೃತಿಕ ಸಮಾರಂಭದಲ್ಲಿ ನಗರದ ಹಿರಿಯ ಸಮಾಜ ಸೇವಕ ಅಂದಪ್ಪ ಮರೇಬಾಳರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಂದಪ್ಪ ಮರೇಬಾಳರವರು ತಾಲೂಕಿ ನೀರಲಗಿ ಗ್ರಾಮದವರಾಗಿದ್ದು ಕೂಲಿ ಕೆಸಲ ಮಾಡುತ್ತಾ ನಂತರ ಕೊಪ್ಪಳದ ವಾಣಿಜ್ಯೋಧ್ಯಮಿ ಶಾಂತಿಲಾಲ್ ಮೆಹತಾ ರವರ ಅಂಗಡಿಯಲ್ಲಿ ಕೆಲಸ ಮಾಡುತ್ತಾ ತಮ್ಮ ವ್ಯಾಪಾರ ಜೀವನ ಪ್ರಾರಂಭಿಸಿ ಇಂದು ಒಬ್ಬ ವರ್ತಕರಾಗಿ ಕಾರ್ಯನಿರ್ವಹಿಸುವುದಲ್ಲಿದೇ ವರ್ತಕರ ಸಂಘದ ತಾಲೂಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸಮಾಜ ಸಂಘಟನೆಯಲ್ಲಿ, ಕಾಳಿದಾಸ ಶಿಕ್ಷಣ  ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಇವರ ಶ್ರೀಗವಿಸಿದ್ದೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಎರಡು ಬಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಜೆಡಿಎಸ್ ಪಕ್ಷದ ತಾಲೂಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿ ಕೈಲಾದಷ್ಟು ಸೇವೆ ಮಾಡುವಷ್ಟು ಮಟ್ಟಿಗೆ ಬೆಳೆಯುವಲ್ಲಿ ಶಾಂತಿಲಾಲ್ ಜಿ ಮೆಹೆತಾ ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ. ಎಂದು ಹೇಳಿದ ಅವರು ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿಗೆ ಯಾಗಿದೆ ಎಂದ ಅವರು ಸಮಜದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಉತ್ತಮ ಕಾರ್ಯನಿರ್ವಹಿಸಲು ಉತ್ಸಕನಾಗಿದ್ದೇನೆ ಎಂದು ಅಂದಪ್ಪ ಮರೇಬಾಳ ಅವರು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸದ ಶಿವರಾಮೇಗೌಡ ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ್ ಮಲ್ಲನಗೌಡರ, ವಿಠ್ಠಪ್ಪ ಗೋರಂಟ್ಲಿ, ಡಾ. ಕೆ.ಜಿ.ಕುಲಕರ್ಣಿ ನ್ಯಾಯವಾದಿಗಳಾದ ವಿ.ಎಂ.ಭೂಸನೂರಮಠ, ರಾಘವೇಂದ್ರ ಪಾನಘಂಟಿ, ಕಾರ್ಯಕ್ರಮ ಸಂಘಟಕ ಮಹೇಶ ಬಾಬು ಸುರ್ವೆ ಸೇರಿದಂತ ಜೆಡಿಎಸ್ ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮೂದ್ ಹುಸೇನಿ ಅಲ್ಲದೇ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top