PLEASE LOGIN TO KANNADANET.COM FOR REGULAR NEWS-UPDATES

  ಗ್ರಾಮ ಪಂಚಾಯತಿಗಳ ವಾರ್ಷಿಕ ಜಮಾಬಂದಿ ಕಾರ್ಯ ಕೊಪ್ಪಳ ತಾಲೂಕಿನಲ್ಲಿ ಆಗಸ್ಟ್ ೧೭ ರಿಂದ ೨೧ ರವರೆಗೆ ನಡೆಯಲಿದ್ದು, ಪ್ರತಿ ೦೩ ಗ್ರಾಮ ಪಂಚಾಯತಿಗಳಿಗೆ ಒಬ್ಬರು ತಾಲೂಕು ಮಟ್ಟದ ಅಧಿಕಾರಿಯನ್ನು ಜಮಾಬಂದಿಗಾಗಿ ನಿಯೋಜಿಸಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
  ಕೊಪ್ಪಳ ತಾಲೂಕಿನಲ್ಲಿ ಆಗಸ್ಟ್ ೧೭ ರಂದು ಅಳವಂಡಿ, ಕಾತರಕಿ-ಗುಡ್ಲಾನೂರ, ಲೇಬಗೇರಿ, ಇರಕಲ್ಲಗಡ, ಗೊಂಡಬಾಳ, ಹಟ್ಟಿ, ಮುನಿರಾಬಾದ್ ಡ್ಯಾಂ, ಕಿನ್ನಾಳ, ಓಜನಹಳ್ಳಿ, ಬಂಡಿಹರ್ಲಾಪುರ, ಹೊಸಹಳ್ಳಿ, ಮತ್ತು ಶಿವಪುರ ಗ್ರಾಮ ಪಂಚಾಯತಿಗಳಲ್ಲಿ ಜಮಾಬಂದಿ ನಡೆಯಲಿದೆ.  ಆ. ೧೯ ರಂದು ಬೆಟಗೇರಿ, ಕೋಳೂರು, ಬಹದೂರಬಂಡಿ, ಚಿಕ್ಕಬೊಮ್ಮನಾಳ, ಹಾಸಗಲ್, ಹಿರೇಬಗನಾಳ, ಭಾಗ್ಯನಗರ, ಕಲ್‌ರತಾವರಗೇರಾ, ಮತ್ತೂರ, ಗುಳದಳ್ಳಿ, ಹಿಟ್ನಾಳ ಮತ್ತು ಕವಲೂರು.  ಆ. ೨೧ ರಂದು ಬೋಚನಹಳ್ಳಿ, ಬಿಸರಳ್ಳಿ, ಬೂದಗುಂಪಾ, ಗಿಣಗೇರಿ, ಹಿರೇಸಿಂದೋಗಿ, ಹಲಗೇರಿ, ಕುಣಿಕೇರಿ, ಅಗಳಕೇರಾ, ಹುಲಗಿ, ಇಂದರಗಿ ಮತ್ತು ಮಾದಿನೂರ ಗ್ರಾಮ ಪಂಚಾಯತಿಗಳಲ್ಲಿ ಜಮಾಬಂದಿ ನಡೆಯಲಿದೆ.
  ಅಳವಂಡಿ, ಬೆಟಗೇರಿ, ಬೋಚನಹಳ್ಳಿ ಗ್ರಾ. ಪಂ. ಗೆ ಜಮಾಬಂದಿಗಾಗಿ ಅಕ್ಷರದಾಸೋಹ ಸಹಾಯಕ ನಿರ್ದೇಶಕರನ್ನು ನಿಯೋಜಿಸಲಾಗಿದೆ.  ಅದೇ ರೀತಿ ಕಾ-ಗುಡ್ಲಾನೂರ, ಕೋಳೂರು, ಬಿಸರಳ್ಳಿ- ತಾ.ಪಂ. ಸಹಾಯಕ ಲೆಕ್ಕಾಧಿಕಾರಿ.  ಲೇಬಗೇರಿ, ಬಹದೂರಬಂಡಿ, ಬೂದಗುಂಪಾ- ವಲಯ ಅರಣ್ಯಾಧಿಕಾರಿ.  ಇರಕಲ್ಲಗಡಾ, ಚಿಕ್ಕಬೊಮ್ಮನಾಳ, ಗಿಣಗೇರಿ- ಕೈಗಾರಿಕಾ ವಿಸ್ತೀರ್ಣಾಧಿಕಾರಿ.  ಗೊಂಡಬಾಳ, ಹಾಸಗಲ್, ಹಿರೇಸಿಂದೋಗಿ- ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರು.  ಹಟ್ಟಿ. ಹಿರೇಬಗನಾಳ, ಹಲಗೇರಿ- ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು.  ಮುನಿರಾಬಾದ್ ಡ್ಯಾಂ, ಭಾಗ್ಯನಗರ, ಕುಣಿಕೇರಿ- ತಾಲೂಕು ಬಿಸಿಎಂ ವಿಸ್ತರಣಾಧಿಕಾರಿ.  ಕಿನ್ನಾಳ, ಕಲ್‌ತಾವರಗೇರಾ- ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ.  ಓಜನಹಳ್ಳಿ, ಮತ್ತೂರ, ಅಗಳಕೇರಾ- ತಾಲೂಕು ಸಮಾಜ ಕಲ್ಯಾಣಾಧಿಕಾರಿ.  ಬಂಡಿಹರ್ಲಾಪುರ, ಗುಳದಳ್ಳಿ, ಹುಲಿಗಿ- ಸಮೂಹ ಸಂಪನ್ಮೂಲ ಅಧಿಕಾರಿ.  ಹೊಸಹಳ್ಳಿ, ಹಿಟ್ನಾಳ, ಇಂದರಗಿ- ರೇಷ್ಮೆ ಕೃಷಿ ವಿಸ್ತರಣಾಧಿಕಾರಿ.  ಶಿವಪುರ, ಕವಲೂರ, ಮಾದಿನೂರ ಗ್ರಾಮ ಪಂಚಾಯತಿಗಳ ಜಮಾಬಂದಿ ಕಾರ್ಯಕ್ಕೆ ತಾಲೂಕು ಜಲಾನಯನ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ  ತಿಳಿಸಿದ್ದಾರೆ.

Advertisement

0 comments:

Post a Comment

 
Top