ಕೊಪ್ಪಳ,೩೧ : ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಇತ್ತೀಚಿಗೆ ರಚಿಸಲಾಯಿತು. ವಿದ್ಯಾರ್ಥಿಗಳಿಂದ ಚುನಾಯಿಸಲ್ಪಟ್ಟ ಶಾಲಾ ಪ್ರತಿನಿಧಿಗಳು 'ಸಂಸತ್ತು ರಚನೆ' ಕಾರ್ಯಕ್ರಮದ ದಿನ ಪ್ರತಿಜ್ಞಾವಿಧಿಯೊಂದಿಗೆ ಅಧಿಕಾರ ಸ್ವೀಕರಿಸಿದರು.
ಶಾಲಾ ವಿದ್ಯಾರ್ಥಿ ಪ್ರತಿನಿಧಿಗಳಾಗಿ ಓಮರ್ ಮತ್ತು ಜ್ಯೋತಿ ಕೋರಿ ಆಯ್ಕೆಯಾದರೆ, ಶಾಲಾ ರಾಷ್ಟ್ರಪತಿಯಾಗಿ ಕಿರಣ ಮತ್ತು ಪ್ರಧಾನಮಂತ್ರಿಯಾಗಿ ಪಾರ್ವತಿ ನಾಲ್ವಾಡ, ಉಪರಾಷ್ಟ್ರಪತಿಯಾಗಿ ಸ್ವಪ್ನಿಲ್ ಮತ್ತು ಸ್ಪೀಕರ್ ಆಗಿ ಮುಂಜಿರಾ ಖಾನಂ ಆಯ್ಕೆಯಾಗಿ, ಅಧಿಕಾರ ಸ್ವೀಕರಿಸಿದರು.
ಶಿಸ್ತಿನ ಮಂತ್ರಿಯಾಗಿ ಭಾರ್ಗವಿ, ಸಾಮಾನ್ಯ ಜ್ಞಾನದ ಮಂತ್ರಿಯಾಗಿ ಹರೀಶ, ಪ್ರವಾಸೋದ್ಯಮ ಮಂತ್ರಿಯಾಗಿ ಜೀನಲ್, ಶಿಕ್ಷಣ ಮಂತ್ರಿಯಾಗಿ ರಚಿತಾ, ಆರೋಗ್ಯ ಮಂತ್ರಿಯಾಗಿ ಸಹನಾ ಮಹೇಶ, ಕ್ರೀಡಾ ಮಂತ್ರಿಯಾಗಿ ರಾಕೇಶ ಗೌಡ, ಪರಿಸರ ಸ್ನೇಹಿ ಮಂತ್ರಿಯಾಗಿ ಶಾಲಿನಿ, ಸಾಂಸ್ಕೃತಿಕ ಮಂತ್ರಿಯಾಗಿ ವಿನಾಯಕ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿಯಾಗಿ ರಾಜೇಶ, ವಿದ್ಯಾರ್ಥಿ ಕಲ್ಯಾಣ ಮಂತ್ರಿಯಾಗಿ ಅರ್ಚನಾ ಶರ್ಮಾ, ನೀರಾವರಿ ಮಂತ್ರಿಯಾಗಿ ಕಿರಣ ಹುರಕಡ್ಲಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಅಬ್ದುಲ್ ವಹೀದ್ ಆಯ್ಕೆಯಾಗಿ, ಅಣಕು ಸಂಸತ್ತಿನ ಪ್ರದರ್ಶನ ಮಾಡಿದರು.
0 comments:
Post a Comment