PLEASE LOGIN TO KANNADANET.COM FOR REGULAR NEWS-UPDATES

೧೪ ನೇ ದಿನದಲ್ಲಿ ಮುಂದುವರೆದ ಹಿಂದೂಸ್ಥಾನ ಕೊಕೊ ಕೋಲಾ ಬೆವರೆಸೆಸ್ ಕಾಂಟೆಕ್ಟ್ ವರ್ಕ್ಸ ಯೂನಿಯನ್ ಅನಿರ್ಧಿಷ್ಠ ಧರಣಿ ಸತ್ಯಾಗ್ರಹ ಅಂತ್ಯಗೊಳಿಸಲು ದಿನಾಂಕ ೦೭/೦೬/೨೦೧೩ ರಂದು ಸಭೆ ಕರದಿದ್ದ ಸಹಾಯಕ ಕಾರ್ಮಿಕ ಆಯಕ್ತರಾದ ಸಿದ್ದಲಿಂಗಪ್ಪನವರು ಮತ್ತು ಜಿಲ್ಲಾ ಕಾರ್ಮಿಕ ಅದಿಕಾರಿಗಳಾದ ಕೆ.ಮುಸಿಯಪ್ಪ ರವರು ನೇತೃತ್ವದಲ್ಲಿ ನಡೆದ ಸಭೆಯು ವಿಫಲಗೊಂಡಿದೆ 
ಹಿಂದೂಸ್ಥಾನ ಕೊಕೊ ಕೋಲಾ ಬೆವರೆಜೆಸ್ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಸಂಘಟನೆಯ ಜಂಟಿ ಸಭೆ ಬೆಳಿಗ್ಗೆ ೧೧ ಗಂಟೆಗೆ ಪ್ರಾರಂಭವಾಗಿ ೪ ಗಂಟೆಗೆ ಮುಕ್ತಾಯವಾಯಿ
ತು. ಕಾರ್ಮಿಕ ಅಧಿಕಾರಿಗಳು ಆಡಳಿತ ಮಂಡಳಿಗೆ ಸಲಹೆ ನೀಡಿ ನಾಳೆಯಿಂದಲೇ ಕೆಲಸದಿಂದ ತೆಗೆದು ಹಾಕಿರುವ ಇಬ್ಬರು ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಮತ್ತು ಇಂದಿನಿಂದ ಅನಿರ್ಧಿಷ್ಠ ಧರಣಿ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಬೇಕೆಂದು ಸಲಹೆ ನೀಡಿದರು. ಆಡಳಿತ ಮಂಡಳಿಯು ೧೦ ದಿನಗಳ ವೆರೆಗೆ ಕೆಲಸಕ್ಕೆ ತೆಗೆದುಕೊಳ್ಳುವ ಕುರಿತು. ಸ್ಪಷ್ಠವಾದ ತಿರ್ಮಾನ ಹೇಳುವುದಿಲ್ಲ ಎಂದು ಪಟ್ಟು ಹಿಡದಿದ್ದರಿಂದ ಕಾರ್ಮಿಕರ ಬೇಡಿಕೆಗಳು ಇತ್ಯರ್ಥವಾಗಲಿಲ್ಲ.
ಮುಖ್ಯವಾಗಿ ಕಾರ್ಮಿಕರನ್ನು ಖಾಯಂಗೊಳಿಸುವುದು ವೇತನ ಹೆಚ್ಚಳ ಇತರ ಸೌಲಭ್ಯಗಳ ಕುರಿತು ಇಂದೆ ಚರ್ಚೆಯಾಗಬೇಕು ಇತ್ಯಾರ್ಥ ಪಡಿಸಬೇಕೆಂದು ಪಟ್ಟು ಹಿಡಿದಾಗ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಈ ಬೇಡಿಕೆಗಳ ಕುರಿತು ಸಬೆ ಕರೆಯುವುದಾಗಿ ತಿಳಿಸಿದರು. ಸುದೀರ್ಘವಾಗಿ ೫ ಗಂಟೆಗೆಗಳ ವೆರೆಗೆ ನಡೆದ ಚರ್ಚೆಯು ಸಫಲವಾಗದ ಕಾರಣ ಕಾರ್ಮಿಕರ ಅಧಿಕಾರಿಗಳು ಆಡಳಿತ ಮಂಡಳಿಯ ಪರ ವಿರುದ್ದ ತುಂಬಾ ಅಸಮಾದಾನ ವ್ಯಕ್ತಪಡಿಸಿದರು. ಮತ್ತು ೧೦ ದಿನಗಳ ವರೆಗೆ ಧರಣಿಯನ್ನು ಸ್ಥಗಿತಗೊಳಿಸುವಂತೆ ಕಾರ್ಮಿಕ ಸಂಘಟನೆಗೆ ತಿಳಿಸಿದಾಗ ಇದಕ್ಕೆ ಒಪ್ಪದ ಕಾರ್ಮಿಕರು ಧರಣಿಯನ್ನು ಮುಂದುವರೆಸುವುದುದಾಗಿ ಅಧಿಕಾರಿಗಳಿಗೆ ತಿಳಿಸಿ ಕಾರ್ಮಿಕರು ಸಭೆಯಿಂದ ಹೊರಬಂದರು. 
ಹಿರಿಯ ಪತ್ರಕರ್ತರಾದ ವೀಠ್ಠಪ್ಪ ಗೋರಂಟ್ಲಿ ಅವರು ಮಾತನಾಡಿ ಕಾರ್ಮಿಕರಿಗೆ ಸಂಘ ಕಟ್ಟಿಕೊಳ್ಳುವುದು ಮತ್ತು ಹಕ್ಕುಗಳನ್ನು ಕೇಳುವುದೇ ಅಪರಾಧ ಎನ್ನುವಂತೆ ಕಾರ್ಮಿಕರನ್ನು ಅಮಾನತ್ತುಗೊಳಿಸಿರುವುದು. ಕಾನೂನು ಬಾಹಿರವಾಗಿದೇ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಆಗ ಅಧಿಕಾರಿಗಳು ಆಡಳಿತ ಮಂಡಳಿಯವರಿಗೆ ಯಾವ ಮುನ್ಸುಚನೆ ನಿಡದೆ ಏಕಾಕ ಏಕಿ ಕೆಲಸದಿಂದ ಅಮನಾತ್ತುಗೊಳಿಸಿರುವುದು ಕಾನೂನಿಗೆ ವಿರುದ್ದವಾಗಿದೆ ಎಂದು ಎಚ್ಚರಿಸಿದರು. 
ಟಿ.ಯು.ಸಿ.ಐನ ರಾಜ್ಯಾಧ್ಯಕ್ಷರಾದ ಡಿ.ಹೆಚ್ ಪೂಜಾರ ದಿ ೨೫-೦೯-೨೦೧೦ ರಂದು ಬೆಂಗಳೂರಿನಲ್ಲಿ  ನಡೇದ ಸಭೆಯ ನಡುವಳಿಕಯಂತೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಮತ್ತು ನಿರಂತರವಾಗಿ ಕಾರ್ಮಿಕರಿಗೆ ಕಿರುಕುಳ ಕೊಡುವ ಆಡಳಿತ ಮಂಡಳಿಯ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಟಿ.ಯು.ಸಿ.ಐ ಜಿಲ್ಲಾಧ್ಯಕ್ಷರಾದ ಬಸವರಾಜ ನರೆಗಲ್ಲರವರು ಎಮ್.ಎನ್.ಸಿ ಕಂಪನಿಯವರು ಇಲ್ಲಿನ ನೆಲ, ಜಲ, ಸಂಪತ್ತನ್ನು ಕಬಳಿಸುತ್ತಾ ಕಾರ್ಮಿಕರನ್ನು ಅಮಾನತ್ತುಗೊಳಿಸುವ ಸರ್ವಾಧಿಕಾರಿ ನೀತಿಯನ್ನು ಕೈಬಿಡದಿದ್ದರೆ ಸಂಘಟನೆಯು ಹೋರಾಟದ ತಿವ್ರಗತಿಯನ್ನು ಬದಲಾಯಿಸಬೇಕಾಗುತ್ತದೆ ಎಂದು ತಿಳಿಸಿದರು. 
ಈ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎನ್.ರಾಘವೇಂದ್ರ ಸಹಕಾರ್ಯದರ್ಶಿ ಚನ್ನಪ್ಪ, ಮರಿಯಪ್ಪ, ಅಬ್ದುಲಸಾಬ, ಶರಣಪ್ಪ ಅಸೂಟಿ ಇನ್ನೂ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.    

Advertisement

0 comments:

Post a Comment

 
Top