ಪ್ರಸಕ್ತ ಸಾಲಿಗೆ ಕೊಪ್ಪಳ ಜಿಲ್ಲೆಯಲ್ಲಿ ಡೆಸ್ಕ್ ಕೊರತೆಯಿರುವ ಶಾಲೆಗಳಿಗೆ ಡೆಸ್ಕ್‌ಗಳನ್ನು ಪೂರೈಸಲು ಮತ್ತು ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ವಯಂ ಸೇವಕ ಶಿಕ್ಷಕರನ್ನು ಒದಗಿಸಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ತಮ್ಮ ಒಪ್ಪಿಗೆ ಪತ್ರ ನೀಡಿದ್ದಾರೆ ಎಂದು ಡಿಡಿಪಿಐ ಜಿ.ಹೆಚ್. ವೀರಣ್ಣ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಡೆಸ್ಕ್‌ಗಳ ಕೊರತೆ ಇರುವ ೨೩೩ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಒಟ್ಟು ೫೩. ೧೨ ಲಕ್ಷ ರೂ. ಮೌಲ್ಯದ ೧೩೯೮ ಡೆಸ್ಕ್‌ಗಳನ್ನು ಶೇ.೮೦ ರ ಸಹಾಯಧನದೊಂದಿಗೆ ಅಂದರೆ ಕೇವಲ ೧೦. ೬೨ ಲಕ್ಷ ರೂ. ಗಳಿಗೆ ಒದಗಿಸಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಹಿಂದುಳಿದ ಹಾಗೂ ಶಿಕ್ಷಕರ ಕೊರತೆಯಿರುವ ಪ್ರಾಥಮಿಕ ಶಾಲೆಗಳಿಗೆ ಜ್ಞಾನದೀಪ ಸ್ವಯಂ ಸೇವಕ ೫೦ ಜನ ಶಿಕ್ಷಕರನ್ನು ಒದಗಿಸಲು ಸಹ ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಮಂಜೂರಾತಿ ಆದೇಶವನ್ನು ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಡಿಡಿಪಿಐ ಜಿ.ಹೆಚ್. ವೀರಣ್ಣ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ೦೪ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕೊಪ್ಪಳ ಜಿಲ್ಲೆಯನ್ನು ಆಯ್ಕೆ ಮಾಡಿ ಶೇ.೮೦ ರ ಸಹಾಯಧನದಲ್ಲಿ ಡೆಸ್ಕ್‌ಗಳನ್ನು ಒದಗಿಸಲು ಮಂಜೂರಾತಿ ನೀಡಿರುವುದಕ್ಕೆ ಹಾಗೂ ೫೦ ಜನ ಶಿಕ್ಷಕರ ಸೇವೆಯನ್ನು ಒದಗಿಸಲು ಒಪ್ಪಿಗೆಯನ್ನು ನೀಡಿರುವುದಕ್ಕೆ ಜಿಲ್ಲಾಡಳಿತ, ಜಿ.ಪಂ. ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರವಾಗಿ ಡಿಡಿಪಿಐ ಜಿ.ಎಚ್.ವೀರಣ್ಣ ಅವರು ಧರ್ಮಾಧಿಕಾರಿಗಳಿಗೆ ಅಭಿನಂಧನೆ ಸಲ್ಲಿಸಿದ್ದಾರೆ.
0 comments:
Post a Comment