: ಕೊಪ್ಪಳದ ಭಾರತ್ ಗ್ಯಾಸ್ ಏಜೆನ್ಸಿ ಮೂಲಕ ಅನಿಲ ಸಿಲಿಂಡರ್ ಸಂಪರ್ಕ ಹೊಂದಿರುವ ಕೊಪ್ಪಳದ ನಗರ ಮತ್ತು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಐವಿಆರ್‌ಎಸ್ ದೂರವಾಣಿ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಗ್ರಾಹಕರ ತಮ್ಮ ಮೊಬೈಲ್/ಸ್ಥಿರ ದೂರವಾಣಿ ಸಂಖ್ಯೆಯನ್ನು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಬಿಪಿಸಿಎಲ್ ಕಂಪನಿ, ಧಾರವಾಡದ ಟೆರಿಟರಿ ಮ್ಯಾನೇಜರ್ ಅವರ ಸೂಚನೆಯಂತೆ ಕೊಪ್ಪಳದ ಕೆಎಫ್‌ಸಿಎಸ್‌ಸಿ ಭಾರತ್ ಗ್ಯಾಸ್ ಏಜೆನ್ಸಿಯು, ಕೊಪ್ಪಳ ವ್ಯಾಪ್ತಿಯ ನಗರ ಮತ್ತು ಗ್ರಾಮಾಂತರ ಪ್ರದೇಶದ ಅನಿಲ ಗ್ರಾಹಕರಿಗೆ ಐವಿಆರ್‌ಎಸ್ ಕರೆ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದ್ದರಿಂದ ಕೊಪ್ಪಳದ ಭಾರತ್ ಗ್ಯಾಸ್ ವ್ಯಾಪ್ತಿಯ ಎಲ್ಲಾ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಗ್ರಾಹಕರು ತಮ್ಮ ಮೊಬೈಲ್ ಅಥವಾ ಸ್ಥಿರ ದೂರವಾಣಿ ಸಂಖ್ಯೆಯನ್ನು ಮೊದಲಿಗೆ ಒಂದು ಬಾರಿ ನೋಂದಾಯಿಸಿಕೊಳ್ಳಬೇಕು.
ಗ್ರಾಹಕರು ತಮ್ಮ ಮೊಬೈಲ್/ ಸ್ಥಿರ ದೂರವಾಣಿ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಲು, ತಮ್ಮ ಗ್ಯಾಸ್ ಪುಸ್ತಕ ಮತ್ತು ಮತದಾರರ ಗುರುತಿನ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಪಡಿತರ ಚೀಟಿ, ಪಾಸ್ ಪೋರ್ಟ್ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ದಾಖಲೆಯೊಂದಿಗೆ ಗ್ಯಾಸ್ ಏಜೆನ್ಸಿಗೆ ಬಂದು ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅಥವಾ ಗ್ರಾಹಕರು ತಾವು ನೋಂದಣಿ ಮಾಡಬಯಸುವ ಮೊಬೈಲ್‌ನಿಂದ ಖಇಉ ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ೧೫೫೧೭೭ ಎಂದು ಟೈಪ್ ಮಾಡಿ, ಒಂದು ಸ್ಪೇಸ್ ಬಿಟ್ಟು ತಮ್ಮ ಗ್ರಾಹಕ ಸಂಖ್ಯೆಯನ್ನು ಟೈಪ್ ಮಾಡಿ ೫೭೩೩೩ ಕ್ಕೆ ಮೆಸೇಜ್ ಕಳುಹಿಸಿ ತಮ್ಮ ಮೊಬೈಲ್ ಸಂಖ್ಯೆಯನ್ನು ಒಂದು ಬಾರಿ ಮಾತ್ರ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ನಂತರ ತಮ್ಮ ಮೊಬೈಲ್‌ಗೆ ನೋಂದಣಿ ಆದ ಬಗ್ಗೆ ಮೆಸೇಜ್ ಅನ್ನು ಪಡೆಯಬಹುದು. ಗ್ಯಾಸ್ sಸಿಲಿಂಡರ್ ಬುಕ್ಕಿಂಗ್‌ಗೆ ಐವಿಆರ್‌ಎಸ್ ಸಂಖ್ಯೆ ೯೪೮೩೩೫೬೭೮೯ ಗೆ ಕರೆ ಮಾಡಿ ತಮ್ಮ ಗ್ಯಾಸ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಈ ಸೌಲಭ್ಯದಿಂದ ಬುಕ್ಕಿಂಗ್ ಮಾಡಿದ ನಂತರ ಬುಕ್ಕಿಂಗ್ ರೆಫರೆನ್ಸ್ ಸಂಖ್ಯೆಯನ್ನು ತಮ್ಮ ಮೊಬೈಲ್‌ನಲ್ಲಿ ಪಡೆಯಬಹುದಾಗಿದೆ. ಅಲ್ಲದೆ ಸಿಲಿಂಡರ್ ವಿತರಣೆಯ ಬಗ್ಗೆಯೂ ತಮ್ಮ ಮೊಬೈಲ್ ಸಂಖ್ಯೆಗೆ ಸಂದೇಶ ಪಡೆಯಬಹುದಾಗಿದೆ.
ಏರ್‌ಟೆಲ್, ಬಿಎಸ್‌ಎನ್‌ಎಲ್, ವೋಡಾಫೋನ್, ಐಡಿಯಾ, ರಿಲಾಯನ್ಸ್ ಹಾಗೂ ಟಾಟಾ ಕಂಪನಿಯ ನೆಟ್‌ವರ್ಕ್‌ನಲ್ಲಿ ಮಾತ್ರ ಐವಿಆರ್‌ಎಸ್ ಕರೆ ಮೂಲಕ ಬುಕ್ಕಿಂಗ್ ಸೌಲಭ್ಯ ಒದಗಿಸಲಾಗಿದೆ ಎಂದು ಕೊಪ್ಪಳದ ಕೆಎಫ್‌ಸಿಎಸ್‌ಸಿ ಭಾರತ್ ಗ್ಯಾಸ್ ಏಜೆನ್ಸಿಯ ತಿಳಿಸಿದೆ.
0 comments:
Post a Comment