PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜೂನ್ -೮, ಕೊಪ್ಪಳದ ಗುನ್ನಳ್ಳಿ ಗ್ರಾಮದಲ್ಲಿ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಕೊಪ್ಪಳದ ನೂತನ ಶಾಕರಾದ ಕೆ. ರಾಘವೇಂದ್ರ ಹಿಟ್ನಾಳರವರು ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಪ್ಲೂರೈಡ್ ಮುಕ್ತ ನೀರನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರತಿಯೊಂದು ಗ್ರಾಮಕ್ಕೆ ಶುದ್ದ ಕುಡಿಯುವ ನೀರಿನ ಘಟಕಗಳ

ನ್ನು ಪ್ರಾರಂಬಿಸಲಾಗುವದು. ಬರುವ ದಿನಗಳಲ್ಲಿ ಶೀಘವೇ ೫೦ ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ಪ್ರಾರಂಬಿಸಲಾಗುವದು ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ದೈನಂದಿಕ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಶೌಚಾಲಯ, ಆಸ್ಪತ್ರೆಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವದು. ಸಿಂಗಟಾಲೂರ ಏತನೀರಾವರಿ ಯೋಜನೆ ಹೆಚ್ಚಿನ ಆದ್ಯತೆ ಕೊಟ್ಟು ಶೀಘ್ರವೇ ಕಾಲುವೆಗಳ ಕಾರ್ಯಾರಂಭ ಮಾಡಲಾಗುವದೆಂದು ಹೇಳಿದರು.
ಈ ಸಂದರ್ಬದಲ್ಲಿ ಹೆಚ.ಎಲ್. ಹಿರೇಗೌಡರ, ಈಶಪ್ಪ ಮಾದಿನೂರ, ಹನಮರಡ್ಡಿ ಹಂಗನಕಟ್ಟಿ, ಯಂಕನಗೌಡರ, ಗಾಳೆಪ್ಪ ಪೂಜಾರ, ಸುರೇಶ ದಾಸರಡ್ಡಿ, ಗುರು ಬಸವರಾಜ ವಕೀಲರು, ಅಂದಾನ ಸ್ವಾಮಿ, ಗುನ್ನಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.


ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಿ ಪಾಲಕರಿಗೆ ಶಾಸಕರಿಂದ ಕರೆ
ಕೊಪ್ಪಳ ಜೂನ-೮, ಕೊಪ್ಪಳದ ವರ್ತಟ್ಟನಾಳ ಗ್ರಾಮ ಪಂಚಾಯತಿ ಹಾಗೂ ಎಸ್.ಡಿ.ಎ.ಸಿ ಒತಿಯಿಂದ ಏರ್ಪಡಿಸಿದ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಕೊಪ್ಪಳ ನೂತನ ಶಾಸಕರಾದ ರಾಘವೇಂದ್ರ ಹಿಟ್ನಾಳ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಿಗೆ ಹೆಚ್ಚಿನ ಶಿಕ್ಷಣವನ್ನು ಕೊಡಲು ಪಾಲಕರು ಶ್ರಮಿಸಬೇಕು. ಆಧುನಿಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಾನ್ಯತೆ ಇದ್ದು ಪ್ರತಿಯೊಬ್ಬರು ಶಿಕ್ಷಣವನ್ನು ಕಡ್ಡಾಯವಾಗಿ ಪಡೆದುಕೊಂಡು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವಂತರಾಗಬೇಕು. ಶಿಕ್ಷಣವೇ ಆರೋಗ್ಯವಂತ  ಸಮಾಜವನ್ನು ನಿರ್ಮಾಣ ಮಾಡುತ್ತೇವೆ. ಆದ ಕಾರಣ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಬೇಕೆಂದು ಕರೆ ನೀಡಿದರು. 
ಈ ಸಂದರ್ಬದಲ್ಲಿ ಹೆಚ.ಎಲ್. ಹಿರೇಗೌಡರ, ಈಶಪ್ಪ ಮಾದಿನೂರ, ಹನಮರಡ್ಡಿ ಹಂಗನಕಟ್ಟಿ, ಯಂಕನಗೌಡರ, ಗಾಳೆಪ್ಪ ಪೂಜಾರ, ಸುರೇಶ ದಾಸರಡ್ಡಿ, ಗುರು ಬಸವರಾಜ ವಕೀಲರು, ಅಂದಾನ ಸ್ವಾಮಿ, ವರ್ತಟ್ಟನಾಳ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು

Advertisement

0 comments:

Post a Comment

 
Top