ಕೊಪ್ಪಳ, ಜೂ. ೮. ನಗರದ ಶ್ರೀ ಸಹಸ್ರಾಂಜನೇಯ ದೇವಸ್ಥಾನ ಟ್ರಸ್ಟ್ ವತಿಯಿಂದ ೨೩೩೩ ಆಂಜನೇಯ ಮೂರ್ತಿಗಳಿಗೆ ಸೋಮುವಾರ ಜೂ. ೧೦ ರಂದು ಪವಮಾನ ಹೋಮ, ವಿಶೇಷ ಮಂಡಲಪೂಜೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅವರು ನಗರದ ಮಲಿಯಮ್ಮದೇವಿ ದೇವಸ್ಥಾನದ ಹತ್ತಿರ ನಿರ್ಮಾಣಗೊಳ್ಳುತ್ತಿರುವ ಶ್ರೀ ಸಹಸ್ರಾಂಜನೇಯ ದೇವಸ್ಥಾನದ ಮೂರ್ತಿಗಳನ್ನು ಸದ್ಯ ಖ್ಯಾತ ಶಿಲ್ಪ ಕಲಾವಿದರು, ಶ್ರೀ ಆಂಜನೇಯ ಭಕ್ತರಾದ ಪ್ರಕಾಶ ಶಿಲ್ಪಿಯವರ ನೇತೃತ್ವದಲ್ಲಿ ಅವರ ಮಿಟ್ಟಿಕೇರಿ ರಸ್ತೆಯ ಮನೆಯಲ್ಲಿ ೪೮ನೇ ವಿಶೇಷ ಮಂಡಲಪೂಜೆ ನಿಮಿತ್ಯ ಪಂಚಾಮೃತ ಅಭಿಷೇಕ ಹಾಗೂ ಪವಮಾನ ಹೋಮ ನೆರವೇರುವದು, ಸದರಿ ಹೋಮವನ್ನು ಗಿಣಗೇರಿಯ ಪುರೋಹಿತರಾದ ಸುಬ್ಬಣಾಚಾರ್ಯರವರು ಮಾಡುವರು ಎಂದು ಕಾರ್ಯದರ್ಶಿಗಳಾದ ಅಶೋಕ ಬಜಾರಮಠ ಮತ್ತು ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಶೇಖ
ಣ್ಣಾಚಾರ್ಯರು ಕೇವಲ ಒಬ್ಬರಿಗೆ ತಂದೆಯಾಗಿ ಸಾಮಾನ್ಯ ಬದುಕನ್ನು ನಡೆಸದೆ, ಅನೇಕರ ನೋವಿಗೆ ಸ್ಪಂದಿಸಿ, ಪ್ರೀತಿಯ ಭಕ್ತ ಕುಟುಂಬವನ್ನು ಕಟ್ಟಿಕೊಂಡಿದ್ದಾರೆ, ಅವರ ಸ್ಮರಣೆ ಮತ್ತು ಶ್ರೀ ಆಂಜನೇಯನ ಭಕ್ತಿಯ ಸೇವೆಯಲ್ಲಿ ಪ್ರಕಾಶ ಶಿಲ್ಪಿಯವರು ಪ್ರತಿನಿತ್ಯ ಒಂದು ಕಲ್ಲಿನಲ್ಲಿ ಮಾರುತಿಯ ಮೂರ್ತಿ ಕೆತ್ತಿ ಅದಕ್ಕೆ ಮಡಿಯಲ್ಲಿ ಪೂಜೆ ನೆರವೇರಿಸಿದ ನಂತರ ಅಂದಿನ ಊಟ ಮಾಡುವ ಸಂಕಲಪತೊಟ್ಟು ಅಂದಿಗೆ ೪೮ನೇ ಮಂಡಲವಾಗುತ್ತದೆ (೪೮ ದಿನಗಳಿಗೊಂದು ಮಂಡಲ ಅಂಥಹ ೪೮ ಮಂಡಲಗಳು ಪೂರ್ಣ) ೨೩೩೩ ನೇ ದಿನವಾಗುತ್ತದೆ. ಇಡೀ ಮನುಕುಲದಲ್ಲಿಯೇ ಇಂಥಹ ವಿಶಿಷ್ಟವಾದ ಭಕ್ತಿ ಸೇವೆ ಕಾಣಸಿಗದು, ಕಾರಣ ಈ ಮಂಗಲ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಂಡು ಪುನೀತರಾಗಲು ವಿನಂತಿಸಿದ್ದಾರೆ.
0 comments:
Post a Comment