PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ: ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರು ಒಗ್ಗಟ್ಟಾಗಿ ಮುಂದಿನ ತಿಂಗಳ ಜರುಗುವ ಸಕಾರಿ ನೌಕರರ ಸಂಘದ ಚುನಾವಣೆಯನ್ನು ಎದುರಿಸುವಂತೆ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ಮಂಗಳವಾರ ಸಂಜೆ ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕ ನೌಕರರ ಸಭೆಯಯನ್ನ ಉದ್ದೇಶಿಸಿ ಮಾತನಾಡುತ್ತ ಮುಂದಿನ ಜರುಗುವ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಎನ್.ಪಿ.ಎಸ್.ನೌಕರರು ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಬೇಕಾಗಿದೆ,ಈ ಹಿಂದಿನ ನೌಕರರ ಸಂಘದ ಕಾರ್ಯಕಾರಿಣಿ ಸಮಿತಿಯಲ್ಲಿ ನೂತನ ಪಿಂಚಣಿ ಯೋಜನೆಗೆ ಒಳಪಡುವ ನೌಕರ ಯಾರೊಬ್ಬರೂ ಕೂಡಾ ಪ್ರತಿನಿಧಿಗಲಾಗದಿದ್ದರಿಂದ ಸಂಘದಲ್ಲಿ ಪಿಂಚಣಿ ಯೋಜನೆಯ ಬಗ್ಗೆ ಚರ್ಚೆಯಾಗಿಲ್ಲ.ಆದ್ದರಿಂದ ಮುಂದಿನ ದಿನಗಳಲ್ಲಿ ಪಿಂಚಣಿ ಯೋಜನೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ನಾವೆಲ್ಲರೂ ಒಂದುಗೂಡಿ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿದಾಗ ಪರಿಹಾರ ಸಾಧ್ಯ ಎಂದು ಹೇಳಿದರು.
ಜಿಲ್ಲಾಧ್ಯಕ್ಷರಾದ ಬಾಳಪ್ಪ ಕಾಳೆ ಮಾತನಾಡಿ,ನಮ್ಮ ಸಂಘವು ನೊಂದಾಯಿತ ಸಂಘವಾಗಿದ್ದು ಸಂಘವನ್ನು ಬಲಪಡಿಸಬೇಕಾದರೇ ಸಂಘದ ಸದಸ್ಯೆತ್ವವನ್ನು ಪಡೆದು ಸಂಘ ಕಾರ್ಯಗಳಲ್ಲಿ ಭಾಗವಯಿಸಬೇಕು,ಎಲ್ಲಾ ನೌಕರರ ಸಹಕಾರ ಅಗತ್ಯವಿದ್ದು ಸಂಘವನ್ನು ರಾಜ್ಯ ಮಟ್ಟದಲ್ಲಿ ಬಲಪಡಿಸುವ ಚಿಂತನೆಯಿದ್ದು ಎಲ್ಲರೂ ಸಲಹೆ-ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.           ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕ ಅಧ್ಯಕ್ಷರಾದ ದೇವಪ್ಪ ಒಂಟಿಗಾರ ಮಾತನಾಡುತ್ತ,ಯಾವುದೆ ಸೌಲಭ್ಯವನ್ನು ಪಡೆಯಬೇಕಾದರೆ ಅದು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ,ಅದು ಸಂಘಟನೆ-ಸಂಘದಿಂದ ಸಾಧ್ಯ.ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನೂತನ ಪಿಂಚಣಿ ಯೋಜನೆ ಒಳಪಡುವ ನೌಕರರ ಸಂಘದ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಅವರ ಗೆಲುವಿಗಾಗಿ ನಾವೇಲ್ಲರೂ ಶ್ರಮಿಸಬೇಕಾಗಿ ಎಂದು ಮನವಿ ಮಾಡಿದರು.                     ಸಭೆಯಲ್ಲಿ ಸಂಘದ ತಾಲೂಕ ಕಾರ್ಯದರ್ಶಿ ಮಹೇಶಗೌಡ ಪಾಟೀಲ,ಉಪಾಧ್ಯಕ್ಷರಾದ ಮಲ್ಲಿಕಾರ್ಜುನ,  ಜಿಲ್ಲಾ ಸಂಘದ ನಿರ್ದೇಶಕರಾದ ಯೋಗನರಸಿಂಹಗೌಡ,ಪ್ರಮೋದ ರೆಡ್ಡಿ,ಬಿ.ಎಸ್.ಹೊಸಮನಿ,ನಿರ್ದೇಶಕರಾದ ಅಂಭಣ್ಣ,ಚಳ್ಳಪ್ಪ,ಮಂಜುನಾಥ ಕೊಪ್ಪಳ,ತಿಪ್ಪಣ್ಣ,ಕೋಟ್ರಬಸಯ್ಯಾ,ಗವಿಸಿದ್ದಪ್ಪ,ಹರೀಶ,ಮಲ್ಲಪ್ಪ ಗುಡದಣ್ಣನವರ,ಚಂದ್ರಶೇಖರ,ಕನಕಪ್ಪ ತಳವಾರ,ಮೈಬೂಬಸಾಬ ಚಿಲವಾಡಗಿ,ಚಂದ್ರಶೇಖರ,ಬಸವರಾಜ ಕಮಲಾಪೂರ,ದೇವೇಂದ್ರ ಕೊಳ್ಳೂರು,ಈರಣ್ಣ ದಾನನವರ,ವೀರೇಂದ್ರ ಯಾವಗಲ್, ಹುಲುಗಪ್ಪ ಭಂಜತ್ರಿ,ಮಲ್ಲಿಕಾರ್ಜುನ ಲಾಡಿ,ಮಲ್ಲೇಶ ಮುಂತಾದ ಎನ್.ಪಿ.ಎಸ್.ನೌಕರರು ಹಾಜರಿದ್ದರು.  
     



Advertisement

0 comments:

Post a Comment

 
Top