PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳಜೂನ್೨೪-ದೇಶದ ಅಭಿವೃಧ್ಧಿಗೆ ಕಲೆಯಪಾತ್ರ ಮಹಾತ್ತರವಾದುದ್ದು.ಮನುಷ್ಯನಿಗೆ ಜ್ಞಾನಾಭಿವೃದ್ಧಿಯು ವ್ಯಕ್ತಿತ್ವವನ್ನು ವಿಕಾಸಗೊಳಿಸುವುದಲ್ಲದೆ ತನ್ನನ್ನು ತಾನು ಕಂಡುಕೊಳ್ಳಲು ನೆರವಾಗುತ್ತದೆ.ಈ ಕೆಲಸವನ್ನು ರಂಗಭೂಮಿಯು ಯಶಸ್ವಿಗೊಳಿಸುತ್ತದೆ.ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಟಿ.ಜನಾರ್ಧನ್ ಹಾಲ್ಕುರಿಕೆ ಥಿಯೇಟರ್ ಬೂದಗುಂಪಾ ಅಮರಪುರ.ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ಅಯೋಜಿಸಿದ ಆರುತಿಂಗಳ ಅಭಿನಯ ರಂಗಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ರಂಗಭೂಮಿಯು ಸದೃಡ ಸಮಾಜವನ್ನು ಕಟ್ಟಲು ಸಮರ್ಥವಾದ ಮಾದ್ಯಮ .ಇಂಥ ರಂಗ ಚಟುವಟಿಕೆಯು ಕೊಪ್ಪಳ ಜಿಲ್ಲೆಯ ಬೂದುಗುಂಪಾದಲ್ಲಿ ನಡೆಯುತ್ತಿರುವುದು ಶ್ಲಾಘಿನೀಯ. ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಬೂದುಗುಂಪಾ ಗ್ರಾಮದಲ್ಲಿ ರಂಗಭೂಮಿ ಕಟ್ಟುತ್ತಿರುವುದು,ಗ್ರಾಮೀಣ ಭಾಗದ  ಜನರಲ್ಲಿ ಅರಿವು.ಜಾಗೃತಿಮತ್ತು ಸಾಂಸ್ಕೃತಿಕತೆ ಹಾಗು ಪ್ರತಿಭೆಗಳನ್ನು ಹೊರತರಲು ಸಹಾಯವಾಗುತ್ತದೆ.ಅವರಿಗೆ ಸಕಲ ರೀತಿಯಿಂದಲೂ ಸಹಾಯ ಹಸ್ತ ನೀಡುವುದು ಅನಿವಾರ್ಯವಾಗಿದೆ. ಮುಖ್ಯಅಥಿತಿಗಳಾಗಿ ಆಗಮಿಸಿದ ಸೋಮಶೇಖರ್ ಅವರು ಮಾನಾಡುತ್ತಾ. ಸರ್ಕಾರದ ಯೋಜನೆಗಳಲ್ಲಿ ಬುದ್ಧಿಗೆ ಅನುದಾನವಿಲ್ಲ ಅದು ಅಂತರಿಕವಾದುದ್ದು. ಅದನ್ನು ಸಾಂಸ್ಕೃತಿಕ ವಲಯದಿಂದಲೇ ಪಡೆಯಬೇಕು.ಬುದ್ಧಿಗೆ ಜ್ಞಾನಕ್ಕೆ ರಂಗಭೂಮಿಯು ಬೌದ್ಧಿಕ ನೆಲೆಯುನ್ನು ರೂಪಿಸುತ್ತದೆ.ಎಂದರಲ್ಲದೆ ಇವತ್ತು ಸಮಾಜ ಕಲುಷಿತಗೊಂಡಿರುವ ಸಂದರ್ಭದಲ್ಲಿ. ರಂಗಭೂಮಿಯು ಆಹಿಂಸೆ ಬೆಳಕನ್ನು ಚೆಲ್ಲಿ ಎಲ್ಲರನ್ನು ಮಾನವೀಯ ನೆಲೆಗೆ ಸಾಗುವಂತೆ ಮಾಡುತ್ತದೆ ಎಂದರು. ಅಭಿನಯಶಿಬಿರದ ಉದ್ಘಾಟನಾ ಸಮಾರಂಭದ ಅದ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಬಸವರಾಜ್ ಬಾವಿಕಟ್ಟಯವರು ಈ ಹಿಂದೆ ಹಾಲ್ಕುರಿಕೆಶಿವಶಂಕರ್ ಯಡಹಳ್ಳಿಯಲ್ಲಿ ಅವರ ರಂಗಚಟುವಟಿಕೆಯನ್ನು ನೋಡಿದ್ದೇವೆ ಅವರು ಶ್ರಮ ಜೀವಿ ಒಂದೇ ವರ್ಷದಲ್ಲಿ ಯಡಹಳ್ಳಿಯನ್ನು ದೇಶದಾದ್ಯಂತ ಗುರುತಿಸುವಂತೆ ಮಾಡಿದ್ದು ಹಾಲ್ಕುರಿಕೆ ಥಿಯೇಟರ್ ಶಿವಶಂಕರ್ .ಅದೇ ರೀತಿ ಬೂದಗುಂಪಾ ಅಮರಾಪುರವನ್ನು ಕೂಡ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಶಕ್ತಿ ಅವರಲ್ಲಿದೆ. ಅವರಿಗೆ ನಮ್ಮೆಲ್ಲರ ಸಹಕಾರವಿದೆ ಎಂದರು.ಇದೇ ಸಂದರ್ಭದಲ್ಲಿ  ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಟಿ.ಜನಾರ್ದನ್ ಅವರನ್ನು ಬೂದುಗುಂಪಾದ ಯುವಕರಾದ ಗೋವಿಂದರಾಜ್,ರಾಜಾಸಾಹೇಬ್,ಬಸವರಾಜ್ ಹೀರೇಮಠ್,ಹುಲುಗಪ್ಪಬೋವಿ,ಮಂಜುನಾಥ ಜಿನಿನ್,ಸನ್ಮಾನಿಸಿದರು.ಎ.ವಿ ಗುರುರಾಜ್,ದಾಸಪ್ಪಕುದುರಿಮೋತಿ,ಸೈಯದ್ ಕರೀಮ್ ಸಾಬ್,ರಾಮಣ್ಣ ಶ್ಯಾವಿ,ಅಮಜಪ್ಪ ಹಳೇಕುಮುಟ,ಮಂಜುನಾಥ್ ಬಸವರಾಜ್ ಹೀರೇಮಠ್ ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಅಮರೇಶ್ ಕಂಬಾರ ಸ್ವಗತವನ್ನು ಹೇಮಂತ್ ಕುಮಾರ್,ವಂದನಾರ್ಪಣೆ ಮಹೇಶ ಬಡಿಗೇರ ಮಾಡಿದರು.

Advertisement

0 comments:

Post a Comment

 
Top