ಕೊಪ್ಪಳ : ಇತ್ತೀಚೆಗೆ ಯಲಬುರ್ಗಾ ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಶ್ರೀ ವಿನಾಯಕ ಗ್ರಾಮೀಣಾಭೀವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯವತಿಯಿಂದ ವಿನಾಯಕ ಪಬ್ಲಿಕ್ ಸ್ಕೂಲ್ನ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದ ಉದ್ಘಾಟನೆಯನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ನೆರವೇರಿಸಿ ಮಾತನಾಡಿ, ಜಗತ್ತಿನಲ್ಲಿ ಎಲ್ಲಾ ದಾನಕ್ಕಿಮತಲೂ ವಿದ್ಯಾಧಾನ ಮೇಲು ಅಂತಹ ಕಾರ್ಯಕ್ಕೆ ಕೈಹಾಕಿರು ಶ್ರೀ ವಿನಾಯಕ ಗ್ರಾಮೀಣಾಭೀವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯವವರಿಗೆ ಒಳ್ಳೆಯದಾಗಲಿ ಬಗವಂತ ಅವರಿಗೆ ಇಂತಹ ಕಾರ್ಯಕ್ಕೆ ಇನ್ನಷ್ಟು ಶಕ್ತಿ ನೀಡಲಿ ಎಂದು ಆಶಿರ್ವದಿಸಿದರು. ಅಧ್ಯಕ್ಷತೆಯನ್ನು ಬಾಳಪ್ಪ ಯಲಿಜಗೋಳೇದ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ನಾನು ಪಾಟೀಲ, ಅಶೋಕ ಗಿರಡ್ಡಿ, ಆಗಮಿಸಿದ್ದರು,
ಈ ಸಂದರ್ಭದಲ್ಲಿ ಊರಿನ ಗಣ್ಯರಾದ ಬಿ. ಎಂ. ಕಮತರ, ರುದ್ರ ಪ್ಪಮೇಟಿ, ಶಿವಣ್ಣ ಯಾಳಗಿ, ಜಗದೀಶ ಕಮತರ, ಮುಂತಾದವರು ಉಪಸ್ಥಿತರಿದ್ದರು, ಹನಮಂತ ನರೆಗಲ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಜಗದೀಶ ಚಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತಣ್ಣ ಹಿರೆಹೊಳಿ ನಿರೂಪಿಸಿದರು. ಮಾರುತಿ ಮರಡಿ ಸ್ವಾಗತಿಸಿದರು. ರಾಜಶೇಖರ ಕಟ್ಟಿ ವಂದಿಸಿದರು.
0 comments:
Post a Comment