PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ, ಏ.೨೬: ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದ ಸುಳ್ಳು ಭರವಸೆ, ಬಣ್ಣದ ಮಾತುಗಳಿಂದ ಜನತೆಯನ್ನು ಮರುಳು ಮಾಡಿದ್ದಾರೆ. ಇನ್ನಾದರೂ ಜನತೆ ಬದಲಾವಣೆಗೆ ಮುಂದಾಗಿ, ಅವರಿಬ್ಬರಿಗೆ ಕ್ಷೇತ್ರವನ್ನು ಅಗ್ರಿಮೆಂಟ್ ಮಾಡಿಕೋಡದಿರಿ ಕ್ಷೇತ್ರದ ಬದಲಾವಣೆ ಮುಂದಾಗಿ ಎಂದು ಜೆಡಿಎಸ್ ತಾಲೂಕು ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ ಜನತೆಗೆ ಕರೆ ನೀಡಿದರು. 
ಅವರು ಗುರುವಾರ ತಾಲೂಕಿನ ಬಿಕನಳ್ಳ್ಳಿ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಭ್ರಷ್ಟಾಚಾರದಲ್ಲಿ ಬಿಜೆಪಿ, ಅಧಿಕಾರ ವ್ಯಾಮೋಹದಲ್ಲಿ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ತಮ್ಮದೆಯಾದ ದುರುದ್ದೇಶಗಳಿಂದ ಗುರುತಿಸಿಕೊಂಡಿದ್ದು, ಜೆಡಿಎಸ್‌ನ ಕವಲೂರು ಗೌಡ್ರ ಮಾತ್ರ ನಿಶ್ಕಳಂಕಿತ ವ್ಯಕ್ತಿಯಾಗಿದ್ದು, ಹೆಸರಾಂತ ಮನೆತನದಿಂದ ಬಂದವರು ಎಂದು ಅವರು ಸಣ್ಣತನದ ವ್ಯಕ್ತಿತ್ವ ತೋರಿದವರಲ್ಲವೆಂದರು. ಜೆಡಿಎಸ್‌ನಿಂದ ಮಾತ್ರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಅಲ್ಲದೇ ಗೌಡ್ರು ನುಡಿದಂತೆ ನೆಡೆಯುವ ವ್ಯಕ್ತಿಯಾಗಿದ್ದಾರೆ ಎಂದರು.
ಹೊಸಮುಖ, ಹೊಸತನದ ಕ್ಷೇತ್ರದ ಬಗ್ಗೆ ಕಳಕಳಿಯುಳ್ಳವರಿಗೆ ಕವಲೂರು ಗೌಡ್ರರಿಗೆ ನಿಮ್ಮ ಮತ ಮಿಸಲಾಗಿರಲಿ ಎಂದು ಜೆಡಿಎಸ್ ಪಕ್ಷದ ಮುಖಂಡ ಟಿ.ಟಿ. ಪಾಟೀಲ್ ಹೇಳಿದರು. ನಮ್ಮನ್ನು ಓಟ್ ಬ್ಯಾಂಕ್‌ನ್ನಾಗಿಸಿಕೊಂಡ ಕಾಂಗ್ರೆಸ್‌ಗೆ ಮತ್ತು ಬಣ್ಣದ ಮಾತಿನ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಿದ ಸಮಾಜ ಬಾಂಧವರು ಈ ಬಾರಿ ಜೆಡಿಎಸ್ ಸರಳ ಸಜ್ಜನಿಕೆಯ ಕೊಡುಗೈದಾನಿ ಪ್ರದೀಪಗೌಡ್ರಗೆ ಇದೊಂದು ಬಾರಿ ಬೆಂಬಲಿಸಿ ಬಹುಮತದಿಂದ ಜಯಗಳಿಸಲು ತಾವೇಲ್ಲಾ ಆಶೀರ್ವದಿಸಬೇಕೆಂದರು. 
ಇದೇ ವೇಳೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮಾತನಾಡಿ, ಈ ಭಾಗದ ಜನರ ಅಭಿಮಾನ ಮತದಾನವಾಗಿ ಪರಿವರ್ತನೆಗೊಳ್ಳಲಿ ಮತದಾನದ ಮಹತ್ವ ಅರಿತು ಮತದಾನ ಮಾಡಿ ಸುಳ್ಳು ಭರವಸೆ, ಆಮಿಷಗಳಿಗೆ ಓಳಗಾಗಬೇಡಿ ಎಂದು ಕಿವಿ ಮಾತು ಹೇಳಿದರು. 
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಮಾಜಿ ಸಚಿವ ವಿರುಪಾಕ್ಷಪ್ಪ ಅಗಡಿ, ಮಾಜಿ ಜಿ.ಪಂ. ಸದಸ್ಯ ಮೋತಿಲಾಲ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರುಗಳಾದ ಎಂ.ವಿ. ಪಾಟೀಲ್, ನಿಲಕಂಠಯ್ಯ ಹಿರೇಮ ಠ, ನಗರಸಭೆ ಮಾಜಿ ಸದಸ್ಯ ಈರಣ್ಣ ಹಂಚಿನಾಳ ಹಾಗೂ ಹಿರಿಯರಾದ ಹಲಗೇರಿ ಬಸವರಾಜಪ್ಪ, ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ, ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ರಾಜು ಹಲಗೇರಿ, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ.ಹುಸೇನ ಮಾಸ್ಟರ್, ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಎಂ.ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್‌ಖಾನ್, ಹನುಮಂತಪ್ಪ ಹೀರೆಸಿಂದೋಗಿ, ರಮೇಶ ಹದ್ಲಿ, ಶಂಕರ ಗೆ ಜ್ಜಿ, ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಪ್ರಭು ಬಬ್ಲಿ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top