PLEASE LOGIN TO KANNADANET.COM FOR REGULAR NEWS-UPDATES


ಕಿಡದಾಳ : ನಿರುದ್ಯೋಗಿ ಯುವಕರಿಗೆ ಉದ್ಯೋಗವನ್ನು ನೀಡಲು, ಬಿ.ಜೆ.ಪಿ. ಸರಕಾರವು 'ಉದ್ಯಮಿಯಾಗು-ಉದ್ಯೋಗ ನೀಡು' ಎನ್ನುವಂತಹ ಮಹತ್ತರವಾದ ಯೋಜನೆಯನ್ನು

ಜಾರಿಗೊಳಿಸಿ, ಯುವಶಕ್ತಿಯನ್ನು ಕೈಗಾರಿಕೋದ್ಯಮಿಗಳನ್ನಾಗಿಸುವಲ್ಲಿ ಶ್ರಮಿಸಿದೆ. ಅಲ್ಲದೇ ಕೊಪ್ಪಳದಲ್ಲಿಯೂ ಬಸಾಪುರ ಗ್ರಾಮದ ಬಳಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ಧೇಶಕ್ಕಾಗಿ ೧೧೦ ಎಕರೆ ಜಮೀನು ಖರೀದಿಗೆ ಹಣ ಮಂಜೂರಾಗಿದೆ ಎಂದು ಹೇಳಿದರು.
ಕೊಪ್ಪಳದ ಕಿಡದಾಳ ಗ್ರಾಮದಲ್ಲಿ ದಿ. ೨೬ ರಂದು ಹಮ್ಮಿಕೊಳ್ಳಲಾಗಿದ್ದ ಬಿ.ಜೆ.ಪಿ. ಪ್ರಚಾರಾರ್ಥ ಸಭೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಕರಡಿ ಸಂಗಣ್ಣ ಮಾತನಾಡುತ್ತ ಈ ಮೇಲಿನಂತೆ ನುಡಿದರು.
ಗಿಣಗೇರಾ ಗ್ರಾಮದಲ್ಲಿ ಯುವಕರಿಗೆ ವೃತ್ತಿ ಪರತೆಯನ್ನು ಮತ್ತು ಉದ್ಯೋಗದಲ್ಲಿ ಕೌಶಲ್ಯತೆಯನ್ನು ಸ್ಥಾಪಿಸಲು ವೃತ್ತಿ ತರಬೇತಿ ಕೇಂದ್ರ ಮಂಜೂರಾಗಿದೆ ಎಂದು ಹೇಳಿದರು. ಯುವಶಕ್ತಿ ಆರ್ಥಿಕವಾಗಿ ಪ್ರಬಲವಾಗಿ ಸಮುಜಮುಖಿಯಾಗುವತ್ತ ಬಿ.ಜೆ.ಪಿ. ಸರಕಾರದ ಯೋಜನೆಗಳು ಸಹಾ
ಯಕವಾಗಲಿವೆ ಎಂದು ಹೇಳಿದರು. ಅಲ್ಲದೇ ಬಿ.ಜೆ.ಪಿ. ಸರಕಾರದ ಆಡಳಿತದಲ್ಲಿ ಕೊಪ್ಪಳದಲ್ಲಿ ಆದ ಅಭಿವೃದ್ಧಿ ಕೆಲಸಗಳು ಪಾರದರ್ಶಕವಾಗಿದ್ದು, ನಮ್ಮ ಅಭಿವೃದ್ಧಿಪರ ಧೋರಣೆಗಳಿಗೆ ಈ ಸಲವೂ ತಮ್ಮ ಮತ ನೀಡಬೇಕೆಂದು ಅವರು ಕೇಳಿದರು.
ಮಾಜಿ ನಗರಸಭಾ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ ಮಾತನಾಡಿ ಕರಡಿ ಸಂಗಣ್ಣನವರ ಅಧಿಕಾರವಧಿಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಪ್ರಗತಿ ಅತ್ಯುತ್ತಮವಾಗಿದ್ದು, ಅವರು ಅನೇಕ ಯೋಜನೆಗಳನ್ನು ತಂದು ಈ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಈ ಸಲ ಅವರನ್ನು ಬಹುಮತದಿಂದ ಆರಿಸಿ ತರಲು ವಿನಂತಿಸಿದರು.
ಇನ್ನೋರ್ವ ಬಿ.ಜೆ.ಪಿ. ಮುಖಂಡ ರಾಘವೇಂದ್ರ ಪಾನಘಂಟಿ ಮಾತನಾಡಿ, ಬಿ.ಜೆ.ಪಿ. ಸರಕಾರವು ಪ್ರಗತಿದಾಯಕ ಸರಕಾರವಾಗಿದ್ದು, ಕರಡಿ ಸಂಗಣ್ಣನವರು ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮೆಡಿಕಲ್, ಇಂಜಿನಿಯರಿಂಗ್, ತೋಟಗಾರಿಕಾ ಕಾಲೇಜುಗಳು, ಕೇಂದ್ರೀಯ ವಿದ್ಯಾಲಯಕ್ಕೆ ಹಣ ಮಂಜೂರಾತಿ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮಂಜೂರು, ೮೦೦ ಕೊಳವೆ ಬಾವಿಗಳ ಮಂಜೂರಾತಿ, ಹೀಗೆ ಪಟ್ಟಣ ಮತ್ತು ಗ್ರಾಮ್ಯ ಪರಿಸರ ಎರಡಕ್ಕೂ ಅನುಕೂಲವಾಗುವಂತಹ ಜನಪರ ಕೆಲಸಗಳನ್ನು ಮಾಡಿದ್ದಾರೆ. ಇವರನ್ನು ಮತ್ತೊಮ್ಮೆ ಗೆಲ್ಲಿಸಿ ತಂದು ಅಭಿವೃದ್ಧಿಯ ಪಥದತ್ತ ನಾವು ಸಾಗಬೇಕು ಎಂದು ಹೇಳಿ ಬಿ.ಜೆ.ಪಿ. ಪರವಾಗಿ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಬಿ.ಜೆ.ಪಿ. ಮುಖಂಡರಾದ ಸಂಗಪ್ಪ ವಕ್ಕಳದ, ಪೀರಾಹುಸೇನ ಹೊಸಳ್ಳಿ, ಫಕೀರಪ್ಪ ಆರೇರ್, ವಿರೂಪಾಕ್ಷಪ್ಪ ನವೋದಯ, ವಿರೂಪಾಕ್ಷಯ್ಯ ಗದಗಿನಮಠ, ಮರುಳಸಿದ್ಧಪ್ಪ, ನೇಮಿರಡ್ಡಿ, ಮಹಿಳಾ ಘಟಕದ ಹೇಮಲತಾ ನಾಯಕ್, ಶ್ಯಾಮಲಾ ಕೋನಕೋರ, ವೇದಾ ಜೋಶಿ, ಸರೋಜಾ ಬಾಕಳೆ, ಮಾರುತೆಪ್ಪ ಹಲಗೇರಿ, ಮಾಜಿ ಜಿ.ಪಂ. ಸದಸ್ಯ ಸುರೇಶ ಕುಲಕರ್ಣಿ, ಕರಿಯಪ್ಪ ಮೇಟಿ, ನಾಗರಾಜ ಕಿಡದಾಳ, ಹನುಮಂತಪ್ಪ ಚೌಡ್ಕಿ, ಗ್ಯಾನಪ್ಪ ಬಸಾಪುರ, ವೀರಭದ್ರಪ್ಪ ಗದಗ, ಕುಟುಗನಹಳ್ಳಿ ದೇಸಾಯಿ, ಶೇಖರ ಇಂದರಗಿ, ಪರಮೇಶ್ವರಗೌಡ ಪಾಟೀಲ ಮತ್ತಿತರ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ನಂತರ ಬಸಾಪುರ, ಕುಟುಗನಹಳ್ಳಿ ಗ್ರಾಮಗಳಲ್ಲಿಯೂ ಯಶಸ್ವಿ ಮತಯಾಚನೆ ನಡೆಯಿತು.

Advertisement

0 comments:

Post a Comment

 
Top