PLEASE LOGIN TO KANNADANET.COM FOR REGULAR NEWS-UPDATES


 ವಾರ್ತಾ ಇಲಾಖೆಯಿಂದ ಕೊಪ್ಪಳ ನಗರದಲ್ಲಿ ಆಯೋಜಿಸಲಾಗಿರುವ ಅಪೂರ್ವ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮವು ಕರ್ನಾಟಕ ವಿಧಾನಸಭೆಯ ಭವ್ಯ ಇತಿಹಾಸ ಪರಿಚಯಿಸುವಂತಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಹೇಳಿದರು.
  ಕರ್ನಾಟಕ ವಿಧಾನಸಭೆಗೆ ೬೦ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆಯು ನಗರದ ಸಾರ್ವಜನಿಕ ಮೈದಾನದಲ್ಲಿ ಆಯೋಜಿಸಿರುವ ವಿಧಾನಸಭೆ ನಡೆದು ಬಂದ ದಾರಿ ಹಾಗೂ ವಿಧಾನಸೌಧ ನಿರ್ಮಾಣದ ಅಪರೂಪದ ಫೋಟೋಗಳನ್ನೊಳಗೊಂಡ ಅಪೂರ್ವ ಫೋಟೋಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
  ವಾರ್ತಾ ಇಲಾಖೆ ಆಯೋಜಿಸಿರುವ ಅಪರೂಪದ ಛಾಯಾಚಿತ್ರ ಪ್ರದರ್ಶನವು ಕರ್ನಾಟಕ ವಿಧಾನಸಭೆಯ ಇತಿಹಾಸವನ್ನು ಯುವ ಪೀಳಿಗೆಗೆ ಪರಿಚಯಿಸುವಂತಿದೆ.  ಅಲ್ಲದೆ ಇದುವರೆಗೆ ರಾಜ್ಯದ ಸಭಾಧ್ಯಕ್ಷರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳ ಸಮಗ್ರ ವಿವರವನ್ನು ಫೋಟೋ ಸಹಿತ ವೀಕ್ಷಿಸುವ ಸದಾವಕಾಶವನ್ನು ಇಲಾಖೆ ಕಲ್ಪಿಸಿದೆ.  ಕರ್ನಾಟಕ ವಿಧಾನಸಭೆಗೆ ೬೦ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇದುವರೆಗೆ ವಿಧಾನಸಭೆ ನಡೆದು ಬಂದ ದಾರಿಯ ಸಮಗ್ರ ಚಿತ್ರಣ ಇಲ್ಲಿದೆ.  ವಾರ್ತಾ ಇಲಾಖೆಯ ಈ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
  ಕೊಪ್ಪಳ ತಹಸಿಲ್ದಾರ್ ಬಿ.ಎಲ್. ಗೋಠೆ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ., ವಾರ್ತಾ ಇಲಾಖೆಯ ಅವಿನಾಶ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಛಾಯಾಚಿತ್ರ ಪ್ರದರ್ಶನವು ಫೆ. ೧೭ ರಿಂದ ೧೮ ರವರೆಗೆ ಎರಡು ದಿನಗಳ ನಡೆಯಲಿದೆ.

Advertisement

0 comments:

Post a Comment

 
Top