PLEASE LOGIN TO KANNADANET.COM FOR REGULAR NEWS-UPDATES


  ಕರ್ನಾಟಕ ಲೋಕಸೇವಾ ಆಯೋಗದಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿನ ೧೭೫೦ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಫೆ. ೨೩ ಮತ್ತು ೨೪ ರಂದು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ನ್ಯಾಯಸಮ್ಮತ ಹಾಗೂ ಕಟ್ಟುನಿಟ್ಟಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಕೆಪಿಎಸ್‌ಸಿ ಯಿಂದ ಎಸ್.ಡಿ.ಸಿ. ಹುದ್ದೆಗಳಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಇದೇ  ಫೆ. ೨೩ ರಿಂದ ೨೪ ರವರೆಗೆ ಜಿಲ್ಲೆಯ ೨೬ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು ೭೬೩೨ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಲಿದ್ದಾರೆ.  ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಸಲು ಅವಕಾಶ ನೀಡಬಾರದು ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸೂಚನೆ ನೀಡಿದರು.
  ಸ್ಪರ್ಧಾತ್ಮಕ ಪರೀಕ್ಷೆ ಕುರಿತಂತೆ ಅನುಸರಿಸಬೇಕಾದ ಕ್ರಮಗಳು ಹಾಗೂ ಪೂರಕ ಮಾಹಿತಿಯನ್ನು ವಿವರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರೀಕ್ಷಾ ವಿಭಾಗದ ನೋಡಲ್ ಅಧಿಕಾರಿ ಪಂಡಿತ್ ಯಲ್ಲಪ್ಪ ಅವರು ಮಾತನಾಡಿ, ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಜಿಲ್ಲೆಯಲ್ಲಿ ಒಟ್ಟು ೨೬ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಬಾರಿ ಜಿಲ್ಲೆಯಲ್ಲಿ ಒಟ್ಟು ೭೬೩೨ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.  ಕೊಪ್ಪಳದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ೩೬೦, ಸರ್ಕಾರಿ ಪ್ರಥಮ ದರ್ಜೆ ಕಾಲೇಜು-೩೩೬, ಶ್ರೀ ಗವಿಸಿದ್ದೇಶ್ವರ ಆರ್ಟ್ಸ್, ಕಾಮರ್ಸ್ & ವಿಜ್ಞಾನ ಕಾಲೇಜ್- ೩೩೬, ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆ ೩೩೬, ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಡಶಾಲೆ- ೩೩೬, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ-೩೧೨, ಬಿ.ಎನ್.ಆರ್.ಕೆ. ಡಿಎಡ್ ಕಾಲೇಜ್-೨೮೮, ಕಾಳಿದಾಸ ಪ್ರೌಢಶಾಲೆ-೨೪೦, ಎಸ್.ಎಫ್.ಎಸ್. ಪ್ರೌಢ ಶಾಲೆ ೨೪೦, ಭಾಗ್ಯನಗರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು- ೨೪೦, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ-೨೪೦, ಶ್ರೀ ಗವಿಸಿದ್ದೇಶ್ವರ ಎಜ್ಯುಕೇಶನ್ ಕಾಲೇಜ್-೧೯೨, ಶಾರದಾ ಪ್ರಾಥಮಿಕ & ಪ್ರೌಢಶಾಲೆ- ೧೯೨, ಗಂಗಾವತಿಯ ಬೆಥೆಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ-೪೮೦, ಶ್ರೀ ಕೊಟ್ಟುರೇಶ್ವರ ಸಂಯುಕ್ತ ಪಿ.ಯು. ಕಾಲೇಜ್-೩೬೦, ಜನತಾ ಸೇವಾ ಆಂಗ್ಲ ಮಾಧ್ಯಮ ಪ್ರೌಢಶಾಲೆ- ೩೩೬, ಸರ್ಕಾರಿ ಪ್ರೌಢ ಶಾಲೆ (ಕನ್ನಡ ಮಾಧ್ಯಮ) ಮಲ್ಲಾಪುರ-೧೨,  ಲಿಟ್ಲ್‌ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ-೩೧೨, ಎಸ್.ಟಿ. ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆ-೩೧೨, ಸರ್ಕಾರಿ ಪ.ಪೂ. ಬಾಲಕರ ಕಾಲೇಜು- ೩೧೨, ಎಂ.ಎನ್.ಎಂ. ಬಾಲಕಿಯರ ಪಿ.ಯು. ಕಾಲೇಜ-೩೧೨, ಕಲ್ಮಠ ಚನ್ನಬಸವಸ್ವಾಮಿ ಪಿ.ಯು. ಕಾಲೇಜ-೨೮೮, ಹೆಚ್.ಆರ್. ಸರೋಜಮ್ಮ ಪ.ಪೂ. ಬಾಲಕಿಯರ ಕಾಲೇಜು- ೨೬೪, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜ ಪಂಪಾನಗರ-೨೪೦, ಕೆ.ಎಲ್.ಇ. ಸೊಸೈಟಿಸ್ ಪಿ.ಯು. ಕಾಲೇಜ್ ವಡ್ಡರಹಟ್ಟಿ- ೨೪೦, ವಿವೇಕ ಭಾರತಿ ಹೊಸಳ್ಳಿ ರೋಡ ಕನಕಗಿರಿ-೨೧೬ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ವಿವರಿಸಿದರು.  ಸಭೆಯಲ್ಲಿ ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಭಾಗವಹಿಸಿದ್ದರು.

Advertisement

0 comments:

Post a Comment

 
Top