PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಯುವಕರು ದುಷ್ಚಟಗಳಿಗೆ ಮಾರುಹೋಗದೇ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಬಾಲ್ಯದಿಂದ ಕ್ರೀಡೆಯಲ್ಲಿ ಬಾಗವಹಿಸುವದರಿಂದ ಉತ್ತಮ  ಕ್ರೀಡಾಪಟುಗಳಾಗಿ ಹೊರಬರಲು ಸಾಧ್ಯವಾಗುತ್ತದೆ ಎಂದು ಸೈಯದ್ ಚಾರಿಟೇಬಲ್ ಟ್ರಷ್ಟನ ಅಧ್ಯಕ್ಷರಾದ ಕೆ.ಎಂ ಸೈಯದ್ ಹೇಳಿದರು. ಅವರು ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರ ಹಾದರಮಗ್ಗಿಯಲ್ಲಿ ನಡೇದ ವಿಶ್ವವಿಕಲಚೇತನರ ದಿನಾಚರಣೆ ನಿಮಿತ್ಯ ಶ್ರೀ ಸುಭಾಷ ಚಂದ್ರ ಬೋಸ್  ವಿಕಲಚೇತನರ ಕಲಾ ಕ್ಷೇಮಾಭಿವೃದ್ದಿ ಸಂಘದವರು ಏರ್ಪಡಿಸಿದ ಅಂಗವಿಕಲರ ಕ್ರಿಡಾ ಕೂಟದ ಜ್ಯೋತಿ ಬೆಳಗಿಸಿ ಮಾತನಾಡುತ್ತಾ ಗ್ರಾಮಾಂತರ ಪ್ರದೇಶಗಳಲ್ಲಿ ಉತ್ತಮ ಕ್ರೀಡಾ ಪಟುಗಳಿದ್ದು ಅಂತಹ ಪ್ರತಿಬಾನ್ವಿತ ಕ್ರೀಡಾ ಪಟುಗಳಿಗೆ ಮಾರ್ಗದರ್ಶನ ಸೂಕ್ತವಾದ ತರಬೆತಿ ಅವಶ್ಯವಾಗಿದೆ. ಎಂದು ಹೇಳಿ ಯಾವುದೆ ಗ್ರಾಮದಲ್ಲಿ ನೀರಿನ ಅವಶಕತೆ ಇದ್ದರೆ ನಮ್ಮ ಸಂಸ್ಥೆಯಿಂದ ಕುಡಿಯುವ ನೀರಿಗಾಗಿ ಉಚಿತ ಬೋರವೆಲ್ ಹಾಕಿಸಿ ಕೊಡಲಾಗುವುದು ಎಂದ ಹೇಳಿದರು.   
ಮಾಜಿ ಗ್ರಾಮ ಪಂಚಯತ ಸದಸ್ಯ ಬಸವರಾಜ ಅಂಗಡಿ ಗುಂಡು ಎಸೆಯುವ ಮೂಲಕ ಕ್ರೀಡೆಗೆ ಚಾಲನೆ ನೀಡಿದರು. 
ಗ್ರಾಮದ ಹಿರಿಯರಾದ ದೊಡ್ಡನಗೌಡ ಪೋಲಿಸಪಾಟೀಲ ಅಧ್ಯಕ್ಷತೆ ವಹಿಸಿ ಶ್ರಿ ಸುಬಾಷ್ ಚಂದ್ರ ಬೋಸ್ ವಿಕಲಚೇತನರ ಕ್ಷೆಮಾಭಿವೃದ್ಧಿ ಸಂಘದ ನಾಮಪಲಕ ಉದ್ಘಾಟಿಸಿದರು. 
ಮುಖ್ಯ ಅತಿಥಿಗಳಾಗಿ ರಘು ಪಟ್ಟಣಶೆಟ್ಟಿ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ನೋಡದೇ ಪ್ರತಿಯೊಬ್ಬರು ಕ್ರೀಡಾ ಮನೋಬಾವನೆ ರೂಡಿಸಿಕೊಂಡು ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಬೇಕೆಂದರು.      

ಈ ಸಂದರ್ಭದಲ್ಲಿ ಗ್ರಾ. ಪಂ ಸದಸ್ಯ ಶಿದ್ದಪ್ಪ ಹೂರಿಜೋಳ, ಮೈಲಪ್ಪ ದೇವರಮನಿ, ರಾಜು ಹುರಕಡ್ಲಿ, ಜಗದಯ್ಯ ಸಾಲಿಮಠ, ಶಿದ್ದನಗೌಡ ಹಿರೇಗೌಡರ,  ಮಲ್ಲಿಕಾರ್ಜುನ ವೈ ಪೂಜಾರ, ಮಂಜುನಾಥ ಹೋಸಕೇರೆ, ತಿಮ್ಮಣ್ಣ ವಡ್ಡರ್, ಹುಲಗಪ್ಪ ಕಾಗಿ, ಪ್ರತಾಪ ನವಲಿ, ಶಂಕ್ರಯ್ಯ ಕೊಳೂರು, ಸಿದ್ದಲಿಂಗಯ್ಯ ಗೋರ್ಲೆಕೊಪ್ಪ, ಅಳವಂಡಿ, ಗಂಗಮ್ಮ, ಭರಮಪ್ಪ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 
ವಿರೇಶ ಆಲಗುಂಡಿ  ನಿರೂಪಣೆಮಾಡಿದರು.  ಮಹಮ್ಮದ ಅನಿಫ್ ಸುಭಾಸಚಂದ್ರ ಸಂಘದ ಅಧ್ಯಕ್ಷರು ಇವರು ಸ್ವಾಗತಿಸಿದರು.  

Advertisement

0 comments:

Post a Comment

 
Top