- ಮುಖ್ಯಮಂತ್ರಿ ಜಗದೀಶ್ ಶೆಟ್ಟರ್
ಕೊಪ್ಪಳ ಫೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೊಪ್ಪಳಕ್ಕೆ ಬೈಪಾಸ್ ರಸ್ತೆಯನ್ನು ನಿರ್ಮಿಸುವ ಯೋಜನೆ ಇದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಿಳಿಸಿದ್ದಾರೆ.
ಈಶಾನ್ಯ ಪದವೀಧರ ಕ್ಷೇತ್ರದ ಶಾಸಕ (ವಿಧಾನಪರಿಷತ್) ಅಮರನಾಥ ಪಾಟೀಲ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಮುಖ್ಯಮಂತ್ರಿಗಳು, ಕೊಪ್ಪಳ ನಗರದ ಮಧ್ಯಭಾಗದಲ್ಲಿ ಅಂಕೋಲ-ಗುತ್ತಿ ರಾಷ್ಟ್ರೀಯ ಹೆದ್ದಾರಿ-೬೩ ಹಾದು ಹೋಗಿದ್ದು, ನಗರದ ಮುಖ್ಯ ರಸ್ತೆಯು ಇದೇ ಆಗಿರುವುದರಿಂದ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ NHDP- IV B ೋಜನೆಯಡಿ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದ್ದು, ಆ ಪ್ರಸ್ತಾವನೆಯಲ್ಲಿ ಕೊಪ್ಪಳ ನಗರಕ್ಕೆ ರಿಂಗ್‌ರೋಡ್ ಬದಲಿಗೆ ಬೈಪಾಸ್ ನಿರ್ಮಿಸುವ ಯೋಜನೆ ಸೇರ್ಪಡೆಯಾಗಿದೆ ಎಂಬುದಾಗಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಶಾಸಕ ಅಮರನಾಥ ಪಾಟೀಲ್ ತಿಳಿಸಿದ್ದಾರೆ.
0 comments:
Post a Comment