- ಶೇಖರಗೌಡಮಾಲಿಪಾಟೀಲ
ಕೊಪ್ಪಳ :- ೨೩-೦೨-೨೦೧೩ ತಾಲೂಕ ಪಂಚಾಯತ ಸಭಾಂಗಣದಲ್ಲಿ ವಿಶಾಲ ಪ್ರಕಾಶನ, ಶ್ರೀ ವರಸಿದ್ದಿವಿನಾಯಕ ಗ್ರಾಮೀಣ ಶಿಕ್ಷಣಾಭಿವೃದ್ದಿ ಮತ್ತು ಕಲ್ಯಾಣ ಸಂಸ್ಥೆ (ರಿ) ಮಾದಿನೂರು, ತಿರಳ್ಗನ್ನಡ ಕ್ರೀಯಾ ಸಮಿತಿ, ಸಿರಿಗನ್ನಡ ವೇದಿಕೆ ಶ್ರೀ ನಿಮಿಷಾಂಬ ಪ್ರಕಾಶನ ಕೊಪ್ಪಳ ಈ ಎಲ್ಲಾ ಸಂಘಟನೆಗಳು ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಗಣೇಶ.ಕೆ.ಹೊಸೂರು ವಿರಚಿತ ಕಣ್ಣಿರಾಯಿತು ಕಥೆ ನಾಟಕ ಪುಸ್ತಕ ಬಿಡುಗಡೆ ಕವಿಗೋಷ್ಠಿ ಸನ್ಮಾನ ಹಾಗೂ ಸಾಹಿತ್ಯ ಸಂಗಮ ವೇದಿಕೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಸಿದ್ದ ನಿಕಟ ಪೂರ್ವ ಕ.ಸಾ.ಪ ಅಧ್ಯಕ್ಷರಾದ ಶೇಖರಗೌಡ ಮಾಲೀಪಾಟೀಲರು ಮೇಲಿನಂತೆ ಮಾತನಾಡಿದರು
ಉದ್ಘಾಟಕರಾಗಿ ಆಗಮಿಸಿದ್ದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಟಿ.ಕೃಷ್ಣಮೂರ್ತಿಯವರು ಮಾತನಾಡುತ್ತಾ "ಕೋಪಣ ತಿಲಕ" ಪ್ರಶಸ್ತಿ ವಿಜೇತರಿಗೆ ಶುಭ ಹಾರೈಸಿದರು ಸನ್ಮಾನವೆಂಬುದು ಧನಾತ್ಮಕ ಪ್ರೋತ್ಸಾಹವಿದ್ದಂತೆ ಎಲ್ಲವನ್ನೂ ಸರಕಾರ ಮಾಡಲು ಸಾಧ್ಯವಿಲ್ಲ ಅಂತ ಸಮಯದಲ್ಲಿ ಇಂತಹ ಗುರುತಿಸುವ ಕೆಲಸ ಮಾಡುತ್ತಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು
ಸಾಹಿತ್ಯ ಸಂಗಮ ವೇಧಿಕೆ ಉದ್ಘಾಟಿಸಿ ಮಾತನಾಡಿದ ಸರಕಾರಿ ಅಭಿಯೋಜಕರಾದ ಬಿ.ಎಸ್.ಪಾಟೀಲರು ಮಾತನಾಡುತ್ತಾ ಸಂಘಟನೆಗಳು ವೇದಿಕೆಗಳು ತುಂಬಾ ಹರಿತವಾಗಿರಬೇಕು ದಿನ ನಿತ್ಯ ನಮ್ಮ ಸುತ್ತಮುತ್ತ ನಡೆಯುತ್ತಲಿರುವ ಅನ್ಯಾಯ ಅಕ್ರಮಗಳನ್ನು ಆಗಿಂದಾಗ್ಗೆ ಖಂಡಿಸಿ ಅನಗತ್ಯವಾದುದ್ದನ್ನು ತಕ್ಷಣ ಕತ್ತ್ತರಿಸಿ ಒಗೆಯುವ ಮೂಲಕ ಸಮಾಜದ ಏಳಿಗೆಗೆ ದುಡಿಯಬೇಕೆಂದರು
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಶರಣಪ್ಪ ಬಾಚಲಾಪೂರರು ರಂಗಭೂಮಿ ಇಂದಿಗೂ ಜೀವಂತವಾಗಿ ಉಳಿಯಲು ಸಹೃದಯರ ಸೇವೆ ಪ್ರೋತ್ಸಾಹಗಳೆ ಕಾರಣ ದ್ವಂದ್ವಾರ್ಥ ಸಂಭಾಷಣೆ ಕಡಿಮೆ ಮಾಡಿದಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡಲ್ಲಿ ಇಂದಿಗೂ ಎಂದೆದಿಗೂ ತನ್ನ ಮೇಲ್ಮಟ್ಟವನ್ನು ಕಾಪಾಡಿಕೊಳ್ಳುತ್ತದೆ. ಎಂದರು.
ಈ ಸಂದರ್ಬದಲ್ಲಿ ಆಯ್ದ ೧೫ ಕವಿಗಳಿಂದ ಕವನ ವಾಚನ ಮಾಡಲಾಯಿತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ವೀರಣ್ಣ ವಾಲಿ ವಹಿಸಿಕೊಂಡಿದ್ದರು . ವೇದಿಕೆಯ ಮೇಲೆ ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ, ಡಾ. ವಿ.ಬಿ.ರಡ್ಡೇರ್, ಡಾ.ಮಹಾಂತೇಶ ಮಲ್ಲನಗೌಡ, ಗಿರೀಶ ಪಾನಘಂಟಿ, ಗಣೇಶ.ಕೆ. ಹೊಸೂರು ಉಪಸ್ಥಿತರಿದ್ದರು ಮತ್ತು ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ ವೇದಮೂರ್ತಿ ಷಡಕ್ಷರಯ್ಯ ಡಾ. .ಎಸ್. ಹೆಚ್.ಅಂಗಡಿ , ಯಂಕಪ್ಪ ಕವಲೂರು, ಟಿ.ಕೃಷ್ಣಮೂರ್ತಿ, ನಾರಾಯಣಾಚಾರ್ಯ ಜೋಷಿ, ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಮಂಜುನಾಥ ಡೊಳ್ಳಿನ, ರುದ್ರಪ್ಪ ಬಂಡಾರಿ, ಬಸವರಾಜ ಬಿನ್ನಾಳ, ಎಂ.ಸಾದಿಕ್.ಅಲಿ, ಮಂಜುನಾಥ ಗೊಂಡಬಾಳ, ಶಿವಾನಂದ ಹೊದ್ಲೂರು, ಶಾರದಾ ಕೆಳಗಿನಗೌಡರ, ಕಾಳಮ್ಮ ಪತ್ತಾರ, ವಾದಿರಾಜ ಪಾಟೀಲ, ಗಣೇಶ.ಕೆ.ಹೊಸೂರು, ಫಕೀರಪ್ಪ ವಜ್ರಬಂಡಿ , ರಾಮಚಂದ್ರಗೌಡ ಗೊಂಡಬಾಳ,.ರಾಜಶೇಖರ ಮುಳಗುಂದ, ಇವರಿಗೆ ಕೋಪಣ ತಿಲಕ ಪ್ರಶಸ್ತಿಯ್ನು ನೀಡಿ ಗೌರವಿಸಲಾಯಿತು.
ರಾಜಶೇಖರ ಅಂಗಡಿಯವರು ಸ್ವಾಗತ ಕೋರಿದರು, ಲಚ್ಚಪ್ಪ ಹಳೆಪೇಟೆ ಅವರು ಪ್ರಾರ್ಥಿಸಿದರು, ಜಿ.ಎಸ್.ಗೋನಾಳರವರು ಪ್ರಾಸ್ತಾವಿಕವಾಗಿ ಮಾತನಾಡಿದರು ಶ್ರೀನಿವಾಸ ಚಿತ್ರಗಾರರು ವಂದನಾರ್ಪಣೆ ಮಾಡಿದರು, ಬಸಪ್ಪ ದೇಸಾಯಿರವರು ಕಾರ್ಯಕ್ರಮ ನಿರೂಪಣೆ ಮಾಡಿದರು.
0 comments:
Post a Comment