ಸ್ಥಳೀಯ ಸಂಸ್ಥೆ ಚುನಾವಣೆ :
ಕೊಪ್ಪಳ ಫೆ.೨೩ : ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ನಗರಸಭೆ, ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಮತ್ತು ಯಲಬುರ್ಗಾ ಪಟ್ಟಣ ಪಂಚಾಯತಿಗಳ ಸದಸ್ಯ ಸ್ಥಾನಗಳಿಗಾಗಿ ಫೆ. ೧೬ ರಿಂದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಫೆ. ೨೩ ರವರೆಗೆ ವಿವಿಧ ಪಕ್ಷಗಳು ಹಾಗೂ ಪಕ್ಷೇತರರು ಸೇರಿದಂತೆ ಇದುವರೆಗೆ ಒಟ್ಟು ೭೬೨ ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಫೆ. ೨೩ ರಂದು ಒಂದೇ ದಿನ ಒಟ್ಟು ೪೩೨ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅಂದು ಕೊಪ್ಪಳ ನಗರಸಭೆ-೧೦೫, ಗಂಗಾವತಿ ನಗರಸಭೆ- ೧೮೬, ಕುಷ್ಟಗಿ ಪುರಸಭೆ- ೭೩ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿಗೆ- ೬೮ ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ.
ಫೆ. ೧೬ ರಿಂದ ೨೩ ರವರೆಗೆ ಕೊಪ್ಪಳ ನಗರಸಭೆಯ ೩೧ ಸದಸ್ಯ ಸ್ಥಾನಕ್ಕಾಗಿ ಕಾಂಗ್ರೆಸ್‌ನಿಂದ ೪೩, ಬಿಜೆಪಿ-೪೪, ಜೆಡಿಎಸ್-೩೯, ಸಿಪಿಐ(ಎಂ)-೦೨, ಸ್ವತಂತ್ರರು ೬೭, ಕೆ.ಜೆ.ಪಿ.-೦೫, ಬಿ.ಎಸ್.ಆರ್.-೨೮, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ-೦೮ ಸೇರಿದಂತೆ ಒಟ್ಟು ೨೩೬ ನಾಮಪತ್ರಗಳು ಸಲ್ಲಿಕೆಯಾಗಿವೆ. ಗಂಗಾವತಿ ನಗರಸಭೆಯ ೩೧ ಸದಸ್ಯ ಸ್ಥಾನಗಳಿಗಾಗಿ ಕಾಂಗ್ರೆಸ್-೪೦, ಬಿಜೆಪಿ-೪೧, ಜೆಡಿಎಸ್-೩೫, ಸಿಪಿಐ(ಎಂ)-೦೧, ಕೆಜೆಪಿ-೨೪, ಬಿ.ಎಸ್.ಆರ್- ೩೬, ಸ್ವತಂತ್ರರು- ೭೨ ಸೇರಿದಂತೆ ಒಟ್ಟು ೨೪೯ ನಾಮಪತ್ರಗಳು ಸಲ್ಲಿಕೆಯಾಗಿವೆ. ಕುಷ್ಟಗಿ ಪುರಸಭೆಯ ೨೩ ಸದಸ್ಯ ಸ್ಥಾನಗಳಿಗಾಗಿ ಕಾಂಗ್ರೆಸ್-೪೪, ಬಿಜೆಪಿ-೨೪, ಜೆಡಿಎಸ್-೩೨, ಬಿ.ಎಸ್.ಆರ್.-೨೩, ಕೆಜೆಪಿ- ೦೮ ಮತ್ತು ಸ್ವತಂತ್ರ ಅಭ್ಯರ್ಥಿಗಳ ೪೬ ಸೇರಿದಂತೆ ಒಟ್ಟು ೧೭೭ ನಾಮಪತ್ರಗಳು ಸಲ್ಲಿಕೆಯಾಗಿವೆ. ಯಲಬುರ್ಗಾ ಪಟ್ಟಣ ಪಂಚಾಯತಿಯ ೧೧ ಸದಸ್ಯ ಸ್ಥಾನಗಳಿಗಾಗಿ ಕಾಂಗ್ರೆಸ್- ೧೮, ಬಿಜೆಪಿ- ೧೭, ಜೆಡಿಎಸ್-೨೯, ಬಿ.ಎಸ್.ಆರ್-೧೬, ಕೆಜೆಪಿ- ೧೪ ಮತ್ತು ಸ್ವತಂತ್ರರು- ೦೬ ನಾಮಪತ್ರ ಸೇರಿದಂತೆ ಒಟ್ಟು ೧೦೦ ನಾಮಪತ್ರಗಳು ಸಲ್ಲಿಕೆಯಾಗಿವೆ. ಫೆ. ೨೫ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಫೆ. ೨೭ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
0 comments:
Post a Comment