ಪಕ್ಷದಿಂದ ಟಿಕೇಟ್
ಕೊಪ್ಪಳ, ಫೆ. ೨೩: ಇಲ್ಲಿನ ನಗರಸಭೆ ಚುನಾವಣೆಗೆ ಅತ್ಯಂತ ಬಿರುಸಿನ ಪೈಪೋಟಿಯ ರಾಜಕೀಯ ವಿದ್ಯಾಮಾನಗಳ ಗೊಂದಲಗಳ ನಡುವೆ ಬಿಜೆಪಿ ಮುಖಂಡ ನಗರಸಭೆ ಸದಸ್ಯ ಈರಣ್ಣ ಹಂಚಿನಾಳ ಹಾಗೂ ಜೆಡಿಎಸ್ ಮುಖಂಡ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಹಿಬೂಬಸಾಬ ನಾಲಬಂದ್ ಇಂದೇ ಬಿಎಸ್‌ಆರ್ ಪಕ್ಷ ಸೇರ್ಪಡೆಗೊಳ್ಳುವ ಮೂಲಕ ಪಕ್ಷದಿಂದ ಚುನಾವಣೆಗೆ ಟಿಕೇಟ್ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಯ್ಯದ್ ಫೌಂಡೇಶನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಕೆ.ಎಂ.ಸಯ್ಯದ್, ಬಿಎಸ್‌ಆರ್ ಕಾಂಗ್ರೆಸ್ ಮುಖಂಡರಾದ ಪ್ರಭುಗೌಡ ಪಾಟೀಲ್, ಇಮಾಮ್ ಸಾಬ ಬಿಜಾಪುರ, ಗೌಸ್‌ಸಾಬ ನೀರಲಗಿ, ಶ್ಯಾಮೀದಸಾಬ ಕಿಲ್ಲೇದಾರ, ಲಕ್ಷ್ಮಿ ಪ್ರೀಯಾ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು, ವಾರ್ಡ್‌ನ ಮುಖ್ಯಸ್ಥರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
0 comments:
Post a Comment