ಕೊಪ್ಪಳ ಜಿಲ್ಲೆಯಲ್ಲಿ ಕುಕನೂರು, ಕಾರಟಗಿ ಮತ್ತು ಕನಕಗಿರಿ ಸೇರಿ ೩ ನೂತನ ತಾಲೂಕುಗಳನ್ನು ಘೋಷಿಸುವ ಮೂಲಕ ಸರ್ಕಾರ ಜಿಲ್ಲೆಗೆ ಮಹತ್ವದ ಕೊಡುಗೆ ನೀಡಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಜಿಲ್ಲೆಯ ಪಾಲಿಗೆ ಮರೆಯಲಾಗದ ಮಾಹಾನ್ ವ್ಯಕ್ತಿಯಾಗಿ ಉಳಿಯಲಿದ್ದಾರೆ ಎಂದು ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್ ಅವರು ಬಣ್ಣಿಸಿದ್ದಾರೆ.
ಕುಕನೂರು ಸೇರಿದಂತೆ ವಿವಿಧ ನೂತನ ತಾಲೂಕುಗಳ ರಚನೆಯಾಗಬೇಕು ಎಂಬ ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಇದೀಗ ೨೦೧೩-೧೪ನೇ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಯಲ್ಲಿ ೩ ನೂತನ ತಾಲೂಕುಗಳ ರಚನೆಯನ್ನು ಘೋಷಿಸಲಾಗಿದೆ. ಕೊಪ್ಪಳ ಜಿಲ್ಲೆಯನ್ನು ರಚಿಸುವ ಮೂಲಕ ಮಾಜಿ ಮುಖ್ಯಮಂತ್ರಿ ದಿ. ಜೆ.ಹೆಚ್. ಪಟೇಲ್ ಅವರು ಜಿಲ್ಲೆಯ ಪಾಲಿಗೆ ಮರೆಯಲಾಗದ ಮಹಾನ್ ವ್ಯಕ್ತಿಯಾಗಿದ್ದಾರೆ. ಇದೀಗ ಜಿಲ್ಲೆಯಲ್ಲಿ ಮೂರು ನೂತನ ತಾಲೂಕುಗಳನ್ನು ರಚಿಸುವ ಮೂಲಕ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಜಿಲ್ಲೆಯ ಪಾಲಿಗೆ ಮರೆಯಲಾಗದ ಮಹಾನ್ ವ್ಯಕ್ತಿಯಾಗಿ ಉಳಿಯಲಿದ್ದಾರೆ. ಮುಖ್ಯಮಂತ್ರಿಗಳು ಮಂಡಿಸಿರುವ ನೂತನ ಬಜೆಟ್ ಅತ್ಯಂತ ಜನಪರ ಬಜೆಟ್ ಆಗಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆ ತಲುಪುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಘೋಷಿಸುವ ಮೂಲಕ ಸರ್ಕಾರ ರೈತರ ಪರವಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್ ಅವರು ಬಜೆಟ್ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
0 comments:
Post a Comment