PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ನಗರದ ಲಕ್ಷ್ಮೀ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ಶತದಿನವನ್ನು ಪೂರೈಸಿದ ನಿಮಿತ್ಯ ಚಿತ್ರದ ಮಾಲೀಕರು ಹಾಗೂ ವಿವಿಧ ಸಂಘಟನೆಗಳ ನೆತೃತ್ವದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.
      ಈ ಸಂದರ್ಭದಲ್ಲಿ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ಇತಿಹಾಸದ ಪುಟದಲ್ಲಿ ಯಾವ ರೀತಿಯಾಗಿ ಸಂಗೊಳ್ಳಿ ರಾಯಣ್ಣ ಚಿರಸ್ಮಣೆಯಾಗಿದ್ದಾರೋ ಅದೇ ರೀತಿಯಾಗಿ ಕನ್ನಡ ಚಿತ್ರರಂಗದಲ್ಲಿ ಸಂಗೊಳ್ಳಿ ರಾಯಣ್ಣ ಒಂದು ಇತಿಹಾಸ ಬರೆದ ಚಿತ್ರದ ಜೊತೆಗೆ ದಾಖಲೆ ನಿರ್ಮಿಸಿದ ಚಿತ್ರವಾಗಿದೆ.ಚಿತ್ರ ಉತ್ತಮ ರೀತಿಯಲ್ಲಿದರೆ ಪ್ರಕ್ಷಕರು ಖಂಡಿತವಾಗಿ ಪ್ರೋತ್ಸಾಹಿಸುತ್ತಾರೆ ಎಂದರು.
     ನಂತರ ಇನ್ನೂರ್ವ ಸಾಹಿತಿಗಳಾದ ಮಾಹಾಂತೇಶ ಮಲ್ಲನಗೌಡರ ಮಾತನಾಡುತ್ತ ಸಂಗೊಳ್ಳಿ ರಾಯಣ್ಣ ಚಿತ್ರ ಕನ್ನಡ ಚಿತ್ರರಂಗದ ಗತವೈಭವವನ್ನ ಮರುಕಳಿಸಿದೆ.ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಬಹಳ ಹೆಮ್ಮೆಯಿಂದ ನೊಡುವ ಸಂದರ್ಭವಿತ್ತು.ಆದರೆ ಇಂದು ಪರಿಸ್ಥಿತಿ ಬದಲಾಗಿದೆ.ರಾಜಕುಮಾರನ ಕಾಲದಲ್ಲಿ ಒಂದು ವರ್ಷದಲ್ಲಿ ಕೇವಲ ೧೧ಚಿತ್ರಗಳು ಮಾತ್ರ ಬಿಡುಗಡೆಗೊಳ್ಳೂತ್ತಿದವು ಆದರೆ ಇಂದು ವರ್ಷಕ್ಕೆ ೧೨೦ಚಿತ್ರಗಳು ಬಿಡುಗಡೆಗೊಂಡು ಒಂದು ಕನ್ನಡ ಚಿತ್ರ ಮತ್ತೊಂದು ಕನ್ನಡ ಚಿತ್ರಕ್ಕೆ ಪ್ರತಿಸ್ಪರ್ಧಿಯನ್ನು ಒಡ್ಡುತ್ತಿವೆ ಇಂಥಹ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರ ನೂರು ದಿನ ಪೂರೈಸಿರುವುದು ಸಂತಸದ ಸಂಗತಿಯಾಗಿದೆ ಎಂದರು.
          ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷರಾದ ಶಿವಾನಂದ ಹೊದ್ಲೂರು ಮಾತನಾಡಿ.ಕನ್ನಡ ಚಿತ್ರರಂದಲ್ಲಿ ಇಂಥಹ ಇನ್ನೂ ಅನೇಕ ಐತಿಹಾಸಿಕ ಚಿತ್ರಗಳು ಬರಲಿ,ಎಲ್ಲಾ ಕನ್ನಡಿಗರು ಇಂಥಹ ಚಿತ್ರಗಳನ್ನು ವಿಕ್ಷೀಸಿ ಕನ್ನಡ ಚಿತ್ರರಂಗವನ್ನು ಬೆಳೆಸಲು ಎಲ್ಲರೂ ಸಹಕರಿಸುವಂತೆ ಹೇಳಿದರು.
   ಚಿತ್ರಮಂದಿರದ ಮಾಲೀಕರಾದ ವೀರೇಶ ಮಾಹಾಂತಯ್ಯಮಠರವರಿಗೆ ಹಾರ ಹಾಕಿ ಅಭಿನಂದನೆ ಸಲ್ಲಿಸಲಾಯಿತು.
      ಚಿತ್ರಮಂದಿರದ ಮಾಲೀಕರು ಹಾಗೂ ಕಾಳಿದಾಸ ಯುವಕ ಸಂಘದ ಅಧ್ಯಕ್ಷರಾದ ಅಂದಪ್ಪ ಚಿಲಗೂಡ್ರು ಪ್ರಕ್ಷಕರಿಗೆ ಸಿಹಿ ಹಂಚಿದರು.
    ಈ ಸಂದರ್ಭದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಪ್ಪ ದೇವನಾಳ,ಕನಕ ಯುವ ಸೇನೆಯ ಜಿಲ್ಲಾಧ್ಯಕ್ಷರಾದ ಕರಿಯಪ್ಪ ಬೇವಿನಹಳ್ಳಿ ಬೂದಗೂಂಪಾ,ಅಂದಾನಸ್ವಾಮಿ ಭೂತಣ್ಣನವರ,ಶಿವಾನಂದ ಯಲ್ಲಮ್ಮನವರ ಮುಂತಾದವರುಹಾಜರಿದ್ದರು.

Advertisement

0 comments:

Post a Comment

 
Top