PLEASE LOGIN TO KANNADANET.COM FOR REGULAR NEWS-UPDATES



-ಸುರೇಶ್ ಭಟ್, ಬಾಕ್ರಬೈಲು

ಎರಡನೆ ಮಹಾಯುದ್ಧದ ಕಾಲವದು. 1941 ರಲ್ಲಿ ಭಾಗಲ್ಪುರದಲ್ಲಿ ಜರುಗಿದ ಹಿಂದೂ ಮಹಾಸಭಾದ 23ನೆ ಅಧಿವೇಶನದಲ್ಲಿ ಮಾತ ನಾಡಿದ ಸಾವರ್ಕರ್ ಹಿಂದೂಗಳನ್ನು ಪ್ರವಾಹ ದೋಪಾದಿಯಲ್ಲಿ ಬ್ರಿಟಿಷ್ ಸೇನೆಗೆ ಸೇರಿಸುವ ಬಲವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳ ಬೇಕೆಂದು ಕರೆನೀಡಿದರು. ಅದರಂತೆ ಹಿಂದೂ ಮಹಾಸಭಾದ ವತಿಯಿಂದ ದೇಶದ ಹಲವಾರು ಕಡೆ ಸೇನಾ ನೇಮಕಾತಿ ಕೇಂದ್ರ ಗಳನ್ನು ತೆರೆಯಲಾಯಿತು. ಇವು ಬ್ರಿಟಿಷ್ ಸರಕಾರ ದೊಂದಿಗೆ ನೇರ ಸಂಪರ್ಕದಲ್ಲಿದ್ದವು. ಹೀಗೆ ಒಂದು ವರ್ಷದಲ್ಲಿ ಸುಮಾರು ಒಂದು ಲಕ್ಷ ಹಿಂದೂಗಳನ್ನು ಬ್ರಿಟಿಷ್ ಸೇನೆಗೆ ಭರ್ತಿ ಮಾಡಲಾಯಿತು.

ಕೇಂದ್ರ ಸರಕಾರ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲುದ್ದೇಶಿಸಿರುವ ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ಟಿಪ್ಪುಸುಲ್ತಾನ್ ಹೆಸರಿಡುವ ಪ್ರಸ್ತಾಪಕ್ಕೆ ಇಲ್ಲಿನ ಒಂದೆರಡು ಸಾಹಿತಿಗಳು, ಸಂಶೋಧಕರು ಮತ್ತು ರಾಜಕಾರಣಿಗಳು ಸೇರಿದಂತೆ ಒಂದು ಜನವರ್ಗದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ದೇಶಪ್ರೇಮದ ಭವ್ಯ ಇತಿಹಾಸವೇ ಇರುವವರಂತೆ ಆಡುತ್ತಿರುವ ಈ ಮಂದಿ ಟಿಪ್ಪು ದೇಶಪ್ರೇಮಿ ಅಲ್ಲ, ಬ್ರಿಟಿಷರ ವಿರುದ್ಧ ಹೋರಾಡಿದ ಎಲ್ಲರನ್ನೂ ದೇಶಪ್ರೇಮಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಹೀಗೆ ಆಕಾಶ ಪಾತಾಳ ಒಂದು ಮಾಡುತ್ತಿರುವ ಈ ಜನವರ್ಗದ ಚರಿತ್ರೆಯನ್ನು ಸ್ವಲ್ಪಕೆದಕಿದರೆ ಮೂಗಿಗೆ ಬಡಿಯು ವುದು ದೇಶಪ್ರೇಮದ ಕಂಪಲ್ಲ, ದುರ್ನಾತ.
ದೇಶಭಕ್ತರ ಈ ಗಡಣ ಯಾರನ್ನು ಓರ್ವ ಮಹಾನ್ ದೇಶಭಕ್ತನೆಂದು ಆರಾಧಿಸುತ್ತದೋ ಆ ವೀರ ಸಾವರ್ಕರ್‌ರನ್ನು ತೆಗೆದುಕೊಳ್ಳಿ. ಈತ ಬ್ರಿಟಿಷ್ ಭಕ್ತನಾಗಿ ಮತಾಂತರಗೊಂಡ ವೃತ್ತಾಂತ ಎಷ್ಟು ಜನರಿಗೆ ತಿಳಿದಿದೆ? ಭಾರತದ ಸ್ವಾತಂತ್ರ ಹೋರಾಟದ ಚರಿತ್ರೆಯಲ್ಲಿ ಅಸಹಕಾರ, ಖಿಲಾಫತ್ ಮತ್ತು ಕ್ವಿಟ್ ಇಂಡಿಯ ಚಳವಳಿ ಗಳು ಪ್ರಮುಖ ಮಜಲುಗಳೆಂದು ಗುರುತಿಸಲ್ಪ ಟ್ಟಿವೆ. ಗಾಂಧೀಜಿ ಹಿಂದೂ ಮತ್ತು ಮುಸ್ಲಿಮರನ್ನು ಒಂದುಗೂಡಿಸಿ ಅಸಹಕಾರ ಚಳವಳಿ ಆರಂಭಿಸಿ ದಾಗ ಬ್ರಿಟಿಷರು ವಿಚಲಿತರಾದರು. ಈ ಏಕತೆ ಸ್ವಾತಂತ್ರ ಹೋರಾಟಕ್ಕೆ ಎಲ್ಲಿಲ್ಲದ ಶಕ್ತಿಯನ್ನು ತಂದುಕೊಟ್ಟು ಕೊನೆಗೆ ತಮ್ಮ ಆಳ್ವಿಕೆಯ ಬುಡ ವನ್ನೇ ಅಲುಗಾಡಿಸಲಿದೆ ಎಂಬುದನ್ನು ಮನಗಂಡರು. ಈ ಏಕತೆಯನ್ನು ಹೇಗಾದರೂ ಮಾಡಿ ಒಡೆಯಬೇಕೆಂದು ನಿರ್ಧರಿಸಿ ದಾರಿಗಾಗಿ ಹುಡುಕಾಡುತ್ತಿದ್ದಾಗ ಅವರ ನೆರವಿಗೆ ಬಂದವರು ಇದೇ ಸಾವರ್ಕರ್! ವಾಸ್ತವದಲ್ಲಿ ಸಾವರ್ಕರ್ ಮೊದಲು ಹೀಗಿರಲಿಲ್ಲ. ಆತ ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸಿದ್ದರು. ಫ್ರೀ ಇಂಡಿಯ ಸೊಸೈಟಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಹೋರಾಟವನ್ನೂ ಆರಂಭಿಸಿದ್ದರು. ಇದರ ಸದಸ್ಯನೊಬ್ಬ ಬ್ರಿಟಿಷ್ ಅಧಿಕಾರಿಯೊಬ್ಬನನ್ನು ಹತ್ಯೆ ಮಾಡಿದಾಗ ಬ್ರಿಟಿಷ್ ಸರಕಾರ ಸಾವರ್ಕರ್‌ಗೆ 50 ವರ್ಷಗಳ ಕರಿ ನೀರಿನ ಶಿಕ್ಷೆಯನ್ನೂ ವಿಧಿಸಿತ್ತು. ಆದರೆ ಒಂದೆರಡೇ ವರ್ಷಗಳ ಜೈಲುವಾಸ ಸಾವರ್ಕರ್ ಓರ್ವ ಅವಕಾಶವಾದಿ ಎನ್ನುವ ಸತ್ಯವನ್ನು ವಿಷದ ಪಡಿಸಿತು. ಬಿಡುಗಡೆಯ ಹಪಾಹಪಿ ಸಾವರ್ಕರ್ ರನ್ನು ಬ್ರಿಟಿಷರ ಗುಲಾಮನನ್ನಾಗಿ ಪರಿವರ್ತಿಸಿತು. ಆತ ಬ್ರಿಟಿಷರೊಂದಿಗೆ ಸಹಕರಿಸುತ್ತಾ ಅವರ ಒಡೆದು ಆಳುವ ನೀತಿಗೆ ಸಹಾಯ ಮಾಡ ತೊಡಗಿದರು. ಬ್ರಿಟಿಷರೊಂದಿಗೆ ಒಪ್ಪಂದ ವೊಂದನ್ನು ಮಾಡಿಕೊಂಡ ಸಾವರ್ಕರ್ ಜೈಲಿನೊಳಗಡೆ ಒಂದು ಮುಸ್ಲಿಂ ವಿರೋಧಿ ಗುಂಪನ್ನು ಕೂಡ ಸ್ಥಾಪಿಸಿದರು. ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಗುರಿಯುಳ್ಳ ಹಿಂದೂತ್ವ ಸಿದ್ಧಾಂತವನ್ನು ಹುಟ್ಟುಹಾಕಿ ಅದೇ ಹೆಸರಿನ ಪುಸ್ತಕವನ್ನು ಜೈಲಿನಿಂದಲೆ ಬರೆದು ಪ್ರಕಟಿಸಿದರು. ಇದಕ್ಕೆ ಬ್ರಿಟಿಷರ ಪರೋಕ್ಷ ಸಹಕಾರವಿತ್ತು. ಕೊನೆಗೆ ಸಾವರ್ಕರ್‌ರ ಶಿಕ್ಷೆಯ ಅವಧಿಯನ್ನು 13 ವರ್ಷಕ್ಕಿಳಿಸಿದ ಬ್ರಿಟಿಷ್ ಸರಕಾರ 1924ರಲ್ಲಿ ಅವರನ್ನು ಶರತ್ತುಬದ್ಧವಾಗಿ ಬಿಡುಗಡೆಗೊಳಿಸಿತು. ಬಿಡುಗಡೆಯ ನಂತರ ಸಾವರ್ಕರ್ ಹಿಂದೂ ಮಹಾಸಭಾದ ಚಟುವಟಿಕೆಗಳನ್ನೂ ಮುಸ್ಲಿಂ, ಕ್ರಿಶ್ಚಿಯನ್ ವಿರೋಧಿ ಚಟುವಟಿಕೆಗಳನ್ನೂ ಆರಂಭಿಸಿದಾಗ ಸರಕಾರ ನೋಡಿಯೂ ನೋಡದಂತಿತ್ತು. ಸರಕಾರದ ಸಹಕಾರದೊಂದಿಗೆ ರತ್ನಗಿರಿ ಜಿಲ್ಲೆಯ ಹಲವಾರು ಊರುಗಳಲ್ಲಿ ಸುತ್ತಾಡಿದ ಸಾವರ್ಕರ್ ಹೋದಲ್ಲೆಲ್ಲಾ ಹಿಂದೂತ್ವ ಸಿದ್ಧಾಂತ ವನ್ನು ಪ್ರಚುರಪಡಿಸಿದರು. ಮಸೀದಿಗಳಲ್ಲಿ ಪ್ರಾರ್ಥನೆ ನಡೆಯುವ ವೇಳೆ ಅವುಗಳೆದುರು ಸಂಗೀತ ನುಡಿಸುವುದು ಮತ್ತು ಮರುಮತಾಂತರ ನಡೆಸುವುದು ಮೊದಲಾದ ಕಾರ್ಯಕ್ರಮ ಗಳನ್ನು ರತ್ನಗಿರಿಯ ಹಿಂದೂಸಭಾ ಆರಂಭಿಸಿದ್ದು ಸಾವರ್ಕರ್‌ರ ನಿರ್ದೇಶನದ ಮೇರೆಗೆ. ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧದ ಇಂತಹ ಕೃತ್ಯಗಳು ಸ್ವಾಭಾವಿಕವಾಗಿ ಬ್ರಿಟಿಷರಿಗೆ ಅನುಕೂಲಕರವಾಗಿ ಪರಿಣಮಿಸಿ ಅಂತಿಮವಾಗಿ ಅಸಹಕಾರ ಚಳವಳಿಯ ವೈಫಲ್ಯಕ್ಕೆ ಕಾರಣ ವಾಯಿತು. 1939ರಲ್ಲಿ ಮುಂಬೈನಲ್ಲಿ ವೈಸರಾಯ್ ಲಾರ್ಡ್ ಲಿನ್‌ಲಿತ್‌ಗ್ಲೊರನ್ನು ಭೇಟಿಯಾದ ಸಾವರ್ಕರ್, ......ಈಗ ನಮ್ಮ ಹಿತಾಸಕ್ತಿಗಳು ಪರಸ್ಪರ ಇಷ್ಟೊಂದು ನಿಕಟವಾಗಿ ಬೆಸೆದಿರುವಾಗ ಹಿಂದೂತ್ವ ಮತ್ತು ಬ್ರಿಟನ್‌ಗಳು ಸ್ನೇಹಿತ ರಾಗಬೇಕಿರುವುದು ಮುಖ್ಯ... ಹೀಗಾಗಿ ನಾವು ಜೊತೆಜೊತೆಯಾಗಿ ಕೆಲಸ ಮಾಡಬೇಕು... ಇನ್ನು ಮುಂದಕ್ಕೆ ಹಳೆಯ ವೈರತ್ವದ ಅಗತ್ಯವಿಲ್ಲ ಎಂದಿದ್ದರು. 1940ರಲ್ಲಿ ಮತ್ತೊಮ್ಮೆ ವೈಸರಾಯ್ ರನ್ನು ಶಿಮ್ಲಾದಲ್ಲಿ ಭೇಟಿಯಾಗಿ ಗುಟ್ಟಿನ ಮಾತುಕತೆ ನಡೆಸಿದರು.
ಎರಡನೆ ಮಹಾಯುದ್ಧದ ಕಾಲವದು. 1941ರಲ್ಲಿ ಭಾಗಲ್ಪುರದಲ್ಲಿ ಜರಗಿದ ಹಿಂದೂ ಮಹಾಸಭಾದ 23ನೆ ಅಧಿವೇಶನದಲ್ಲಿ ಮಾತನಾಡಿದ ಸಾವರ್ಕರ್ ಹಿಂದೂಗಳನ್ನು ಪ್ರವಾಹದೋಪಾದಿಯಲ್ಲಿ ಬ್ರಿಟಿಷ್ ಸೇನೆಗೆ ಸೇರಿಸುವ ಬಲವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕೆಂದು ಕರೆನೀಡಿದರು. ಅದರಂತೆ ಹಿಂದೂ ಮಹಾಸಭಾದ ವತಿಯಿಂದ ದೇಶದ ಹಲವಾರು ಕಡೆ ಸೇನಾ ನೇಮಕಾತಿ ಕೇಂದ್ರ ಗಳನ್ನು ತೆರೆಯಲಾಯಿತು. ಇವು ಬ್ರಿಟಿಷ್ ಸರಕಾರದೊಂದಿಗೆ ನೇರ ಸಂಪರ್ಕದಲ್ಲಿದ್ದವು. ಹೀಗೆ ಒಂದು ವರ್ಷದಲ್ಲಿ ಸುಮಾರು ಒಂದು ಲಕ್ಷ ಹಿಂದೂಗಳನ್ನು ಬ್ರಿಟಿಷ್ ಸೇನೆಗೆ ಭರ್ತಿ ಮಾಡಲಾಯಿತು. ಸಾವರ್ಕರ್ ಅಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಆಝಾದ್ ಹಿಂದ್ ಫೌಜ್ ಜೊತೆಗೂ ಸಹಕರಿಸಿರಲಿಲ್ಲ.
ಇತ್ತ ಹಿಂದೂ ಮಹಾಸಭಾ ಬ್ರಿಟಿಷರ ಪರವಾಗಿ ಕಾದಾಡಲು ಹಿಂದೂಗಳನ್ನು ಬ್ರಿಟಿಷ್ ಸೇನೆಗೆ ಸೇರಿಸುತ್ತಿದ್ದಾಗ ಅತ್ತ ಬ್ರಿಟಿಷರು ಆಝಾದ್ ಹಿಂದ್ ಫೌಜ್‌ನ ಸಾವಿರಾರು ಭಾರತೀಯ ಯೋಧರ ಮಾರಣಹೋಮ ನಡೆಸಿದರು.
ಲಕ್ಷಾಂತರ ಭಾರತೀಯರು ಪಾಲ್ಗೊಂಡಿದ್ದ 1942ರ ಕ್ವಿಟ್ ಇಂಡಿಯ ಚಳವಳಿಯ ಕಾಲದಲ್ಲಿ ಸಾವರ್ಕರ್ ಮತ್ತು ಆತನ ಅನುಯಾಯಿಗಳು ಬ್ರಿಟಿಷರಿಗೆ ಸಂಪೂರ್ಣ ಶರಣಾಗತರಾಗಿ, ಅವರೊಂದಿಗೆೆ ಸಹಕರಿಸಿ ಚಳವಳಿಗೆ ದ್ರೋಹ ಬಗೆದ ಕತೆ ರೋಚಕವಾಗಿದೆ. ಇತ್ತ ಗಾಂಧೀಜಿ ಚಳವಳಿ ಆರಂಭಿಸಿದರೆ ಅತ್ತ ಸಾವರ್ಕರ್ ಬ್ರಿಟಿಷರ ಬೆಂಬಲಕ್ಕೆ ನಿಂತರು. ಆ ಸಂದರ್ಭದಲ್ಲಿ ಆತ ಸೆಪ್ಟಂಬರ್ 1942ರಲ್ಲಿ ಹೊರಡಿಸಿದ ಕಟ್ಟಾಜ್ಞೆೆಯೊಂದು ಹೀಗಿದೆ: ಈ ಖಚಿತ ಆದೇಶವನ್ನು ನಿರ್ದಿಷ್ಟವಾಗಿ ಹಿಂದೂ ಮಹಾಸಭಾದ ಸದಸ್ಯರನ್ನು ಉದ್ದೇಶಿಸಿಯೂ ಸಾಮಾನ್ಯವಾಗಿ ಎಲ್ಲ ಹಿಂದೂ ಸಂಘಟನಾವಾದಿಗಳನ್ನು ಉದ್ದೇಶಿಸಿಯೂ ಹೊರಡಿಸುತ್ತಿದ್ದೇನೆ... ಸರಕಾರದ ಯಾವುದೇ ಮುಖ್ಯ ಸ್ಥಾನ ಅಥವಾ ಹುದ್ದೆಯಲ್ಲಿರುವವರು ಅದಕ್ಕೆ ಅಂಟಿಕೊಂಡು ತಮ್ಮ ನಿಯಮಿತ ಕರ್ತವ್ಯಗಳನ್ನು ಮಾಡುತ್ತಿರಬೇಕು.

1942ರಲ್ಲಿ ಸಿಂಧ್ ಮತ್ತು ಬಂಗಾಳ ಪ್ರಾಂತ್ಯಗಳಲ್ಲಿ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್‌ಗಳ ಸಮ್ಮಿಶ್ರ ಸರಕಾರಗಳಿದ್ದವು. ಸಿಂಧ್ ಶಾಸನಸಭೆಯು ಪಾಕಿಸ್ತಾನ ರಾಷ್ಟ್ರ ಸ್ಥಾಪನೆಯನ್ನು ಬೆಂಬಲಿಸುವ ಠರಾವನ್ನು ಹೊರಡಿಸಿದಾಗ ಹಿಂದೂ ಮಹಾಸಭಾದ ಸಚಿವರುಗಳು ರಾಜೀನಾಮೆ ನೀಡಲಿಲ್ಲ. ಬದಲಾಗಿ ಕೇವಲ ದಾಖಲೆಗೋಸ್ಕರ ಒಂದು ಪ್ರತಿಭಟನೆ ಮಾಡಿದರು. ಮುಂದೆ ಕ್ವಿಟ್ ಇಂಡಿಯ ಚಳವಳಿ ಆರಂಭವಾದಾಗ ಬಂಗಾಳದ ರಾಜ್ಯಪಾಲ ಫಜಲುಲ್ ಹಕ್, ಸಚಿವ ಸಂಪುಟವನ್ನು ಕರೆಸಿ ಅವರೆಲ್ಲರೂ ಸರಕಾರದ ದಮನಕಾರಿ ನೀತಿಯನ್ನು ಬೆಂಬಲಿಸಬೇಕು ಅಥವಾ ರಾಜೀನಾಮೆ ನೀಡಬೇಕೆಂದು ಹೇಳಿದರು. ಆದರೆ ಹಣಕಾಸು ಸಚಿವ ಶ್ಯಾಮಾ ಪ್ರಸಾದ್ ಮುಖರ್ಜಿಯಾದಿಯಾಗಿ ಯಾರೊಬ್ಬನೂ ರಾಜೀನಾಮೆ ನೀಡಲಿಲ್ಲ! ಹೇಗಿದೆ ದೇಶಭಕ್ತಿಯನ್ನು ಗುತ್ತಿಗೆಗೆ ತೆಗೆದುಕೊಂಡವರಂತೆ ವರ್ತಿಸುತ್ತಿರುವವರ ಈ ಹಿನ್ನೆಲೆ?  . 
varthabharati

Advertisement

0 comments:

Post a Comment

 
Top