ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷದ ಮುಖಂಡರು ಸಭೆ ನಡೆಸಲು ಪರವಾನಿಗೆ ಪಡೆಯುವುದು ಅಗತ್ಯವಾಗಿದ್ದು, ಪರವಾನಿಗೆಯನ್ನು ಆಯಾ ತಹಸಿಲ್ದಾರರಿಂದ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
ಚುನಾವಣಾ ಬಹಿರಂಗ ಪ್ರಚಾರವು ಶಾಲಾ, ಕಾಲೇಜು ಮೈದಾನದಲ್ಲಿ ಅಥವಾ ರಸ್ತೆಯ ಅಕ್ಕ-ಪಕ್ಕ, ಪಬ್ಲಿಕ್ ಸರ್ಕಲ್‌ಗಳಲ್ಲಿ ನಡೆಸುವುದನ್ನು ನಿಷೇಧಿಸಲಾಗಿದೆ. ರಾಜಕೀಯ ಪಕ್ಷದ ಮುಖಂಡರು, ಸ್ಟಾರ್ ಪ್ರಚಾರಕರು ಹೆಲಿಕಾಪ್ಟರ್ ಬಳಸುವುದಕ್ಕೂ ಮುನ್ನ ಜಿಲ್ಲಾಧಿಕಾರಿಗಳಿಂದ ಪರವಾನಿಗೆ ಪಡೆಯಬೇಕು. ಚುನಾವಣಾ ಪ್ರಚಾರವು ಕೇವಲ ವಾರ್ಡಿನ ವ್ಯಾಪ್ತಿಗೊಳಪಡುವಂತಿದ್ದರೆ ಆಯಾ ಚುನಾವಣಾಧಿಕಾರಿಯಿಂದ ಪರವಾನಿಗೆ ಪಡೆಯಬಹುದು. ಚುನಾವಣಾ ಪ್ರಚಾರವು ನಗರ ಸ್ಥಳೀಯ ಸಂಸ್ಥೆಯ ಸಂಪೂರ್ಣ ವ್ಯಾಪ್ತಿಗೆ ಒಳಪಡುವಂತಿದ್ದರೆ, ಸಂಬಂಧಪಟ್ಟ ತಹಸಿಲ್ದಾರರಿಂದ ಪರವಾನಿಗೆ ಪಡೆಯಬೇಕು. ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಗೆ ಒಳಪಡುವಂತಿದ್ದರೆ ಅಪರ ಜಿಲ್ಲಾಧಿಕಾರಿಗಳಿಂದ ಪರವಾನಿಗೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.
0 comments:
Post a Comment