ಕೊಪ್ಪಳ : ೧೬, ನಗರದ ವೀರಶೈವ ಕಲ್ಯಾಣ ಮಂಟಪದ ಕಟ್ಟಡದಲ್ಲಿ ನೂತನವಾಗಿ ಆದುನಿಕ ವೈಧ್ಯಕೀಯ ಉಪಕರಣಗಳ ಚಿಮ್ಮಲಗಿ ಆಸ್ಪತ್ರೆಯನ್ನು ದಿನಾಂಕ ೧೩-೦೨-೨೦೧೩ ರಂದು ಉದ್ಘಾಟಿಸಿ ಶ್ರೀ.ಮ.ನಿ.ಪ. ಶ್ರೀ ಗವಿಶಿದ್ದೆಶ್ವರ ಮಹಾಸ್ವಾಮಿಗಳು ಕೊಪ್ಪಳ ಶ್ರೀಗಳು ಕೊಪ್ಪಳ ಮಗರದ ಹಾಗೂ ಸುತ್ತಮುತ್ತಲಿನ ನಾಗರಿಕರಿಗೆ ಆಸ್ಪತ್ರೆಯ ಸೌಲಭ್ಯ ಪಡೆದುಕೊಲ್ಳಲು ಕರೆ ನೀಡಿದರು.
ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಅಮರೇಶ ಎನ್. ಚಿಮ್ಮಲಗಿ, ಎಂ.ಡಿ, ಜನರಲ್ ಮೆಡಿಶನ್, ಹೃದಯರೋಗ ಹಾಗೂ ಸಕ್ಕರೆ ಕಾಯಿಲೆ ರೋಗ ತಜ್ಞರಾದ ತಮ್ಮ ಆಸ್ಪತ್ರೆಯಲ್ಲಿ ಐ.ಸಿ.ಯು ವಿಭಾಗ, ಈ.ಸಿ.ಜಿ ಸೌಲಭ್ಯ, ತುರ್ತ ಚಿಕಿತ್ಸಾ ಸೌಲಭ್ಯ, ಸ್ಪೆಷಲ್ ಜನರಲ್ ವಾರ್ಡ, ಹಾಗೂ ಸ್ರ್ತೀಯರ ಪ್ರತ್ಯೇಕ ವಾರ್ಡ ಸೌಲಬ್ಯ ಮತ್ತು ಆಸ್ಪತ್ರೆಯಲ್ಲಿ ಆದುನಿಕ ಉಪಕರಣಗಳಬಗ್ಗೆ ಮಾಹಿತಿ ನೀಡಿದರು.
ಈ ಸಮಾರಂಬದಲ್ಲಿ ನಗರದ ಗವಿಶಿದ್ದೇಶ್ವರ ಅರ್ಭನ್ ಬ್ಯಾಂಕಿನ ಅಧ್ಯಕ್ಷರಾದ ಗವಿಶಿದ್ದಪ್ಪ ವಿ. ಮುದಗಲ್, ಹಾಗೂ ಶಿವಾನಂದ ಹೊದ್ಲೂರ, ವಾಹೀದ್ ಸಿದ್ದಿಕಿ, ಮಲ್ಲಿಕಾರ್ಜುನ ವಕೀಲ, ಡಾ. ರಾಂಪೂರ, ಡಾ. ಎಂ.ಎಸ್. ಗಾಯಕವಾಡ, ಡಾ. ಪಿ.ಹೆಚ್. ಮುಲ್ಲಾ, ಡಾ. ಶಿವನಗೌಡ ಪಾಟೀಲ, ಹಾಗೂ ನಗರದ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಪ್ರಾರ್ಥನೆ ಕುಮಾರಿ ನಿಷ್ಕಾ, ಸ್ವಾಗತ ಶ್ರೀಮತಿ ಸ್ವಾತಿ, ವಂದನಾರ್ಪಣೆ ಶ್ರೀಮತಿ ಭಾರತಿ ಚಿಮ್ಮಲಗಿ, ಕಾರ್ಯಕ್ರ ನಿರೂಪಣೆಯನ್ನು ಈರಣ್ಣ ಎಸ್. ಚಲ್ಮಿ, ನೆರವೆರಿಸಿದರು.

0 comments:
Post a Comment