ಕೊಪ್ಪಳ: ನಗರದ ಜನತಾದಳ (ಜಾತ್ಯಾತೀತ) ಕಛೇರಿಯಲ್ಲಿ ಮಾನ್ಯ ಇಕ್ಬಾಲ್ ಅನ್ಸಾರಿ ಅವರ ಆದೇಶದಮೇರಿಗೆ ಸ್ಥಳಿಯ ಚುನಾವಣಾ ಪ್ರಯುಕ್ತ ಅಂದಪ್ಪ ಮರೆಬಾಳ ಇವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಸ್ಥಳಿಯ ಚುನಾವಣೆಯಲ್ಲಿ ಸ್ಪರ್ದಿಸಲಿಚ್ಚಿಸುವ ಆಕಾಂಕ್ಷಿಗಳಿಗೆ ಅರ್ಜಿ ಫಾರ್ಮನ್ನು ಕಾರ್ಯಾಲಯದಿಂದ ಪಡೆದು ಅದನ್ನು ಭರ್ತಿಮಾಡಿ ದಿನಾಂಕ ೧೮/೦೨/೨೦೧೩ ರ ಸಾಯಂಕಾಲದೊಳಗೆ ಸುರೇಶ ಭೂಮರಡ್ಡಿ ಸತ್ಯದ್ಯಾನಪುರ ಬಡಾವಣೆ ಕಿನ್ನಾಳ ರಸ್ತೆ ಕೊಪ್ಪಳ, ಕಾರ್ಯಾಲಯಕ್ಕೆ ಸಲ್ಲಿಸಲು ತಿಳಿಸಲಾಯಿತು. ಎಲ್ಲಾ ೩೧ ವಾರ್ಡಗಳಲ್ಲಿ ಜಾತ್ಯಾತೀತ ಜನತಾದಳದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಿರ್ಮಾನವನ್ನು ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸುರೇಶ ಭೂಮರಡ್ಡಿಯವರು ಮಾತನಾಡಿ ಜೆ.ಡಿಎಸ್. ಪಕ್ಷವನ್ನು ಎಲ್ಲಾ ೩೧ ವಾರ್ಡಗಳಲ್ಲಿ ಗೆಲ್ಲಿಸುವ ಮೂಲಕ ಪಕ್ಷವನ್ನು ಬಲಪಡಿಸಲು ಎಲ್ಲಾ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷರಾದ ಚಂದ್ರಶೇಖರ ಕವಲೂರ, ನಗರ ಘಟಕದ ಅಧ್ಯಕ್ಷರಾದ ಗವಿಶಿದ್ದಪ್ಪ ಮುಂಡರಗಿ ಅಜ್ಜು ಖಾದ್ರಿ, ಮಲ್ಲಪ್ಪ ಬೆಲೇರಿ, ರಮೇಶ ಸಿ. ಹೆಚ್, ವಿರೇಶ ಮಾಂತಯ್ಯನಮಠ, ನೀಲಕಂಠಪ್ಪ, ಹಾಗೂ ಎಲ್ಲಾ ವಾರ್ಡಗಳ ಮುಖಂಡರು ಉಪಸ್ಥಿತರಿದ್ದು ಸಭೆಯನ್ನು ಯಶಸ್ವಿಗೊಳಿಸಿದರು.
Home
»
»Unlabelled
» ಎಲ್ಲಾ ೩೧ ವಾರ್ಡಗಳಲ್ಲಿ ಜನತಾದಳದ ಅಭ್ಯರ್ಥಿಗಳು ಕಣಕ್ಕೆ
Subscribe to:
Post Comments (Atom)
0 comments:
Post a Comment