PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆ ಆರಂಭಗೊಂಡು  ೧೨ ದಿವಸಗಳು ಮುಗಿದರು ಭಕ್ತರಲ್ಲಿ ಹುರುಪು, ಹುಮ್ಮಸ್ಸು, ಉತ್ಸಾಹ ಕುಗ್ಗಿಲ್ಲ. ೧೩ ನೇಯದಿನದ ವಿಶೇಷತೆ ಅವರಾತ್ರಿ ಅಮವಾಸ್ಯೆ. ಈ  ದಿನದಂದು ಮತ್ತೊಂದು ಮರಿ ಜಾತ್ರೆಯನ್ನು ನೆನಪಿಸುವಷ್ಟು ಜನರು  ಸೇರಿದ್ದರು.ಬೆಳಿಗ್ಗೆಯಿಂದ ಜಿಲ್ಲೆಯಾಧ್ಯಾಂತಹ ಭಕ್ತರು ಶ್ರೀಮಠದ ಕರ್ತೃ ಗದ್ದೂಗೆಯ ದರ್ಶನ ಮಾಡಿ ಕಾಯಿಕರ್ಪೂರ ಸಲ್ಲಿಸಿ ತಮ್ಮ ಧನ್ಯತಾ ಭಾವ ಮೆರದರು.  ಶ್ರೀಮಠದ ಆವರಣವೆಲ್ಲ ಎಲ್ಲಿ ನೋಡಿದರಲ್ಲಿ ಭಕ್ತರ ಮಹಾಪೂರವೇ ಕಂಡುಬಂದಿತು. ಎಂದಿನಂತೆಯೇ ಇಂದು ಕೂಡಾ ಬೆಳಿಗ್ಗೆಯಿಂದಲೂ ಮಹಾದಾಸೋಹ  ಆರಂಭಗೊಂಡು ಲಕ್ಷಾಂತರ ಭಕ್ತರು ಪ್ರಸಾದ ಸವಿದರು. ಇಂದಿನ ದಾಸೋಹದಲ್ಲಿ ವಿಶೇಷವಾಗಿ ಗೋಧಿ ಹುಗ್ಗಿ, ಹಾಲು, ಬದನೆಪಲ್ಲೆ, ಅನ್ನ, ಸಾಂಬಾರ, ಉಪ್ಪಿನಕಾಯಿ ಚಟ್ನಿ, ಕಡ್ಲಿಚಟ್ನಿ, ಮೊದಲಾದವುಗಳು ಭಕ್ತಾಧಿಗಳಿಗೆ ದೊರೆತವು.  ಇಂದಿನ ದಾಸೋಹದಲ್ಲಿ ಒಟ್ಟು ೬೦ ಕ್ವಿಂಟಾಲ್ ಅಕ್ಕಿ, ೫೫ ಕ್ವಿಂಟಾಲ್ ಗೋಧಿಹುಗ್ಗಿ ಮಹಾದಾಸೋಹದಲ್ಲಿ ಸಮರ್ಪಣೆಯಾದವು.  ಕಾತರಕಿ,ಮೈನಳ್ಳಿ,ಗುಡ್ಲಾನೂರ, ಹಾದರಮಗ್ಗಿ,ಕವಲೂರು,ಬೇಳುರ, ಮಂಗಳೂರು ಗ್ರಾಮಗಳ ಭಕ್ತರು ಪ್ರಸಾದವನ್ನು  ತಯಾರಿಸುವ ಕಾರ್ಯ ನಿರ್ವಹಿಸಿದರು. ಪ್ರಸಾದ ಬಡಿಸುವ ಕೊಪ್ಪಳ ಜೈನ್ ಸಮುದಾಯ, ಕಿರ್ಲೋಸ್ಕರ ಸಿಬ್ಭಂಧಿ, ಶ್ರೀಮತಿ ಶಾರದಮ್ಮಾ ಕೊತಬಾಳ ಕಾಲೇಜಿನ ವಿದ್ಯಾರ್ಥಿಬಳಗ, ಶ್ರೀಗವಿಸಿದ್ಧೇಶ್ವರ ಪದವಿ, ಪದವಿಪೂರ್ವ, ಬಿ.ಇಡಿ ಮತ್ತು ಡಿ.ಇಡಿ ವಿದ್ಯಾರ್ಥಿಬಳಗ ಹಾಗೂ ಇನ್ನಿತರ ಸ್ವಯಂ ಸೇವಕರು ವಹಿಸಿದ್ದರು.

Advertisement

0 comments:

Post a Comment

 
Top