ಕೊಪ್ಪಳ ಜ. : ಜಿಲ್ಲಾಡಳಿತ, ಜಿ.ಪಂ. ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕನಕಗಿರಿ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಫೆ.೦೨ ರಂದು ಸಂಜೆ ೬.೦೦ ಗಂಟೆಗೆ ಕನಕಗಿರಿಯ ಕನಕರಾಯ ವೇದಿಕೆಯಲ್ಲಿ ಜರುಗಲಿದೆ.
ಉತ್ಸವದ ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ಕನಕಗಿರಿ ಶಾಸಕ ಶಿವರಾಜ ಎಸ್. ತಂಗಡಗಿ ಅವರು ವಹಿಸುವರು. ಸಮಾರಂಭದ ದಿವ್ಯ ಸಾನಿಧ್ಯವನ್ನು ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕನಕಗಿರಿ ಸಂಸ್ಥಾನ ಮಠದ ಶ್ರೀ ಚನ್ನಮಲ್ಲ ಮಹಾಸ್ವಾಮಿಜಿ ಸ್ವರ್ಣಗಿರಿ, ಸುಳೆಕಲ್ಲ ಬೃಹನ್ಮಠದ ಶ್ರೀ ಭುವನೇಶ್ವರ ತಾತನವರು, ಅರಳಿಹಳ್ಳಿಯ ಬೃಹನ್ಮಠದ ಶ್ರೀ ಗವಿಸಿದ್ದೇಶ್ವರ ತಾತನವರು ಸಾನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ರುದ್ರಪ್ಪ ನಿರಾಣಿ, ರಾಜ್ಯ ಸಣ್ಣ ನೀರಾವರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ, ವಸತಿ ಸಚಿವ ವಿ.ಸೋಮಣ್ಣ, ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಬಾಲಚಂದ್ರ ಜಾರಕಿಹೊಳಿ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಸಣ್ಣ ಕೈಗಾರಿಕೆ ಸಚಿವ ನರಸಿಂಹ ನಾಯಕ್ (ರಾಜೂಗೌಡ) ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ.ರಾಘವೇಂದ್ರ ಹಿಟ್ನಾಳ, ಸಂಸದ ಶಿವರಾಮಗೌಡ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಪರಣ್ಣ ಮುನವಳ್ಳಿ, ಸಂಗಣ್ಣ ಕರಡಿ, ಈಶಣ್ಣ ಗುಳಗಣ್ಣವರ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಹಾಲಪ್ಪ ಆಚಾರ, ಅಮರನಾಥ ಪಾಟೀಲ್, ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಮಹಾಂತಗೌಡ ಪಾಟೀಲ್, ಕಾಡಾ ಅಧ್ಯಕ್ಷ ಹೆಚ್. ಗಿರೇಗೌಡ, ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ಗಂಗಾವತಿ ತಾ.ಪಂ. ಅಧ್ಯಕ್ಷ ಕೆ. ಬಸವರಾಜ ಹುಲಿಯಪ್ಪ, ಜಿ.ಪಂ. ಸದಸ್ಯ ಗಂಗಣ್ಣ ಎಂ.ಸಮಗಂಡಿ, ತಾ.ಪಂ.ಸದಸ್ಯರಾದ ಹೊನ್ನೂರಸಾಬ ಮೇಸ್ತ್ರಿ, ಸರ್ವಮಂಗಳ ಎಮ್.ಭೂಸನೂರಮಠ, ಕನಕಗಿರಿ ಗ್ರಾ.ಪಂ. ಅಧ್ಯಕ್ಷೆ ರಂಗಮ್ಮ ಆಂಜನೇಯ, ಗಂಗಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಹೆಚ್.ಎಮ್. ತಿಪ್ಪೇರುದ್ರಸ್ವಾಮಿ ಸೇರಿದಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಸೇರಿದಂತೆ ಜಿ.ಪಂ., ತಾ.ಪಂ., ಗ್ರಾ.ಪಂ. ಸರ್ವ ಸದಸ್ಯರು ಭಾಗವಹಿಸುವರು.
ಫೆ. ೦೩ ರಂದು ಸಮಾರೋಪ : ಕನಕಗಿರಿ ಉತ್ಸವದ ಸಮಾರೋಪ ಸಮಾರಂಭ ಫೆ. ೦೩ ರಂದು ರಾತ್ರಿ ೯.೩೦ ಗಂಟೆಗೆ ಕನಕಗಿರಿಯ ಕನಕರಾಯ ವೇದಿಕೆಯಲ್ಲಿ ಜರುಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ರುದ್ರಪ್ಪ ನಿರಾಣಿ ಅವರು ಸಮಾರೋಪ ಭಾಷಣ ಮಾಡುವರು. ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸುವರು. ಅಧ್ಯಕ್ಷತೆಯನ್ನು ಶಾಸಕ ಶಿವರಾಜ ಎಸ್.ತಂಗಡಗಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷೆ ರಂಗಮ್ಮ ಆಂಜನೇಯ, ಜಿ.ಪಂ.ಸದಸ್ಯ ಗಂಗಣ್ಣ ಎಮ್.ಸಮಗಂಡಿ, ತಾ.ಪಂ.ಸದಸ್ಯರಾದ ಹೊನ್ನೂರಸಾಬ ಮೇಸ್ತ್ರಿ, ಸರ್ವಮಂಗಳ ಎಮ್.ಭೂಸನೂರಮಠ ಸೇರಿದಂತೆ ಗ್ರಾ.ಪಂ.ಸರ್ವ ಸದಸ್ಯರು ಭಾಗವಹಿಸುವರು.
ಕನಕಗಿರಿ ಉತ್ಸವ : ವಿವಿಧ ಕಲಾ ತಂಡಗಳಿಂದ ಜಾನಪದ ಕಲಾವಾಹಿನಿ
: ಐತಿಹಾಸಿಕ ಪ್ರಸಿದ್ಧ ಕನಕಗಿರಿ ಉತ್ಸವ ಅಂಗವಾಗಿ ವಿವಿಧ ಕಲಾ ತಂಡಗಳಿಂದ ಜಾನಪದ ಕಲಾವಾಹಿನಿ ಫೆ.೦೨ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಿಂದ ಶ್ರೀ ಕನಕರಾಯ ವೇದಿಕೆಯವರೆಗೆ ಸಾಗಿ ಬರಲಿದೆ.
ಜಾನಪದ ಕಲಾವಾಹಿನಿಯ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ರುದ್ರಪ್ಪ ನಿರಾಣಿ ಅವರು ನೆರವೇರಿಸುವರು.
ಜಾನಪದ ಕಲಾವಾಹಿನಿ ಭಾಗವಹಿಸುವ ಕಲಾ ತಂಡಗಳ ವಿವರ ಇಂತಿದೆ. ಕೊಪ್ಪಳದ ಪ್ಯಾಟಿ ಬಸವೇಶ್ವರ ಜಾನಪದ ಕಲಾ ಸಂಘ ಇವರಿಂದ ಕರಡಿ ಮಜಲು, ಯಲಬುರ್ಗಾದ ಬೀರಲಿಂಗೇಶ್ವರ ಜನಪದ ಕಲಾ ಸಂಘದಿಂದ ಡೊಳ್ಳು ಕುಣಿತ, ಯಲಬುರ್ಗಾದ ಮಾರುತೇಶ್ವರ ಷಹನಾಹಿ ಕಲಾಮೇಳ ಇವರಿಂದ ಹಲಿಗೆ ಮಜಲು, ಗಂಗಾವತಿ ತಾಲೂಕಿನ ಸಿದ್ದಾಪೂರ ಗ್ರಾಮದ ದುರ್ಗಾದೇವಿ ಹಗಲು ವೇಷ ಕಲಾ ಸಂಘದಿಂದ ಹಗಲು ವೇಷ, ಕುಷ್ಟಗಿಯ ದೇವಪ್ಪ ಭಜಂತ್ರಿ ಮತ್ತು ತಂಡದಿಂದ ಕಣಿಹಲಗೆ ವಾದನ, ಕೊಪ್ಪಳದ ಶಿವಮೂರ್ತಿ ಮೇಟಿ ಹಾಗೂ ತಂಡದಿಂದ ಕೋಲಾಟ ತಂಡ, ಬಳ್ಳಾರಿಯ ಹನುಮಂತಪ್ಪ ಹಂಪಾಪಟ್ಟಣ ಇವರಿಂದ ಕೀಲು ಕುದುರೆ, ಬಳ್ಳಾರಿಯ ಮೋಹನ ಮತ್ತು ತಂಡದಿಂದ ತಾಷರಂಡೋಲ, ಚಿತ್ರದುರ್ಗದ ಮೆಹಬೂಬ ಸುಬಾನ್ ಮತ್ತು ತಂಡದಿಂದ ಗಾರುಡಿ ಗೊಂಬೆ, ಮಂಡ್ಯದ ಕೆ.ಬಿ.ಸ್ವಾಮಿ ಮತ್ತು ತಂಡದಿಂದ ನಂದಿ ಧ್ವಜ, ಧಾರವಾಡದ ಶಿವಾನಂದ ಆರ್.ಮೇಲಿನಮನಿ ಮತ್ತು ತಂಡದಿಂದ ಜಗ್ಗಲಿಗೆ ಮೇಳ, ಮಂಡ್ಯದ ಲೋಕೇಶ ಮತ್ತು ತಂಡದಿಂದ ಪೂಜಾ ಕುಣಿತ ಒಳಗೊಂಡ ಜಾನಪದ ತಂಡಗಳು ಜಾನಪದ ಕಲಾ ವಾಹಿನಿಗೆ ಮೆರಗು ತುಂಬಲಿವೆ.
ಕನಕಗಿರಿ ಉತ್ಸವದಲ್ಲಿ ಗಂಗಾವತಿ ಪ್ರಾಣೇಶ್, ಹಂಸಲೇಖ, ರಾಜೇಶ್‌ಕೃಷ್ಣನ್
ಕನಕಗಿರಿ ಉತ್ಸವ ಅಂಗವಾಗಿ ಫೆ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ಖ್ಯಾತ ಚಲನಚಿತ್ರ ಗಾಯಕ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಹಂಸಲೇಖ, ಗಂಗಾವತಿಯ ಪ್ರಾಣೇಶ್ ಮುಂತಾದ ಖ್ಯಾತ ಕಲಾವಿದರಿಂದ ವಿವಿಧ ಸಂಗೀತ, ನೃತ್ಯ ಮೊದಲಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಫೆ. ೦೨ ರಂದು ಸಂಜೆ ೫.೩೦ ಕ್ಕೆ ಕನಕಗಿರಿಯ ಡಿ.ಮಾರುತಿ ಬಿನ್ನಾಳ ಇವರಿಂದ ಹಿಂದೂಸ್ತಾನಿ ಸಂಗೀತ, ಗಂಗಾವತಿಯ ಸುನೀತ ರಾಮಕೃಷ್ಣ ಇವರಿಂದ ಜಾನಪದ ಸಂಗೀತ ಹಾಗೂ ಕನಕಗಿರಿಯ ಕಿರಣ್ ಬೊಂದಡೆ ಇವರಿಂದ ತಬಲಾ ಜರುಗಲಿದೆ. ಸಂಜೆ ೦೬ ರಿಂದ ೭-೩೦ ರವರೆಗೆ ಉತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ. ಅಂದು ರಾತ್ರಿ ೭.೩೦ ರಿಂದ ೯.೦೦ ರವರೆಗೆ ಬೆಂಗಳೂರಿನ ಪ್ರಭಾತ್ ಕಲಾವಿದ ರಿಂದ ಧರ್ಮಭೂಮಿ ನೃತ್ಯ ರೂಪಕ, ನಂತರ ಬೆಂಗಳೂರಿನ ರಾಜೇಶ ಕೃಷ್ಣನ್ ಮತ್ತು ತಂಡದಿಂದ ಚಲನಚಿತ್ರಗೀತೆಗಳು, ಕೊಪ್ಪಳದ ಶಂಕ್ರಪ್ಪ ಮೋರನಾಳ ಇವರಿಂದ ಬಯಲಾಟ, ಕನಕಗಿರಿಯ ಮಲ್ಕೇಶ್ ಕೋಟೆ ಮತ್ತು ತಂಡದಿಂದ ನಾಟಕ-ರಾಜಾ ಉಡಚಪ್ಪ ನಾಯಕ ಪ್ರದರ್ಶನಗೊಳ್ಳಲಿದೆ.
ಫೆ. ೦೩ ರಂದು ಸಂಜೆ ೫.೦೦ ಗಂಟೆಗೆ ಕನಕಗಿರಿಯ ಛತ್ರಪ್ಪ ತಂಬೂರಿ ಇವರಿಂದ ವಚನ ಗಾಯನ, ಗಂಗಾವತಿಯ ವೀರೇಶ ಕುಮಾರ್ ಆರ್. ಭಜಂತ್ರಿ ಇವರಿಂದ ತಬಲಾ ವಾದನ, ಯಲಬುರ್ಗಾದ ಜೀವನಸಾಬ ವಾಲಿಕಾರ ಬಿನ್ನಾಳ ಇವರಿಂದ ಲಾವಣಿ, ಕನಕಗಿರಿಯ ಕನಕಗೌಡ ಪೊಲೀಸ್ ಪಾಟೀಲ್ ಇವರಿಂದ ತತ್ವಪದ, ಗಂಗಾವತಿಯ ಕಾಳಿದಾಸ ಜಾನಪದ ಕಲಾ ತಂಡದಿಂದ ಜಾನಪದ ಗೀತೆ, ಕುಷ್ಟಗಿಯ ಬಸಪ್ಪ ಚೌಡಕಿ ಇವರಿಂದ ಚೌಡಕಿ ಪದ, ಗಂಗಾವತಿಯ ಮಹಾಬಳೇಶ್ವರ ಲಕ್ಷ್ಮಣಗೌಡ ಇವರಿಂದ ಜಾನಪದ ಗೀತೆ, ಗಂಗಾವತಿಯ ಮಹಮ್ಮದ್ ಹುಸೇನ್ ಬಿ.ಕೇಸರಟ್ಟಿ ಇವರಿಂದ ರಂಗಗೀತೆ, ಕುಷ್ಟಗಿಯ ಶರಣಪ್ಪ ವಡಿಗೇರಿ ಹಾಗೂ ತಂಡದಿಂದ ಜಾನಪದ ಗೀತೆ, ಕುಷ್ಟಗಿಯ ಎಸ್.ಎಸ್. ಹಿರೇಮಠ ಇವರಿಂದ ತಬಲಾ ಹಾಗೂ ಕನಕಗಿರಿಯ ಶಂಕರ ಬಿನ್ನಾಳ ಇವರಿಂದ ಹಾರ್ಮೋನಿಯಂ ಜುಗಲ್‌ಬಂದಿ, ಭೂಮಿಕಾ, ಪ್ರತಿಭಾ ಹೆಚ್.ಎಂ.ಐಶ್ವರ್ಯ ಇವರಿಂದ ಭರತನಾಟ್ಯ, ಗಂಗಾವತಿಯ ಪ್ರಾಣೇಶ ಇವರಿಂದ ಹಾಸ್ಯ ಸಂಜೆ, ಬೆಂಗಳೂರಿನ ವೈಜಯಂತಿ ಕಾಶಿ ಮತ್ತು ತಂಡದಿಂದ ರಾಜಾ ಉಡಚಪ್ಪ ನಾಯಕ-ನೃತ್ಯ ರೂಪಕ, ಬೆಂಗಳೂರಿನ ಹಂಸಲೇಖ ಮತ್ತು ತಂಡದಿಂದ ಸಿನಿಮಾ ಲಾಹಿರಿ, ಕೊಪ್ಪಳ ಶಿಕ್ಷಕರ ಕಲಾವೃಂದದಿಂದ ಸಂಗೊಳ್ಳಿ ರಾಯಣ್ಣ ನಾಟಕ, ಗಂಗಾವತಿಯ ಹೆಜ್ಜೆ ಗೆಜ್ಜೆ ಜಾನಪದ ಕಲಾ ಸಾಂಸ್ಕೃತಿಕ ಗ್ರಾಮೀಣಾಭಿವೃದ್ದಿ ಸಂಘ ಇವರಿಂದ ರಕ್ತ ರಾತ್ರಿ ನಾಟಕ ಪ್ರದರ್ಶನಗೊಳ್ಳಲಿದೆ.
0 comments:
Post a Comment