PLEASE LOGIN TO KANNADANET.COM FOR REGULAR NEWS-UPDATES










ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ  ಜಾತ್ರೆಯ ಅಂಗವಾಗಿ ಎರಡನೆಯ ದಿನ ಶ್ರೀಶಿವಶಾಂತವೀರ ಶರಣರ ಧೀರ್ಘದಂಡ ನಮಸ್ಕಾರದ ಕಾರ್ಯಕ್ರಮ ವಿಶೇಷವಾದುದಾಗಿತ್ತು. ಪ್ರತಿವರ್ಷದ ಸಂಪ್ರದಾಯದಂತೆ ಈ ಸಾರೆಯೂ ಬಳಗಾನೂರಿನ ಶ್ರೀಶಿವಶಾಂತವೀರ ಶರಣರು ಶ್ರೀಮಠದ ದ್ವಾರಭಾಗಿಲಿನ ಗೇಟಿನಿಂದ ಹಿಡಿದು ಶ್ರೀ.ಮ.ನಿ.ಪ್ರ.ಜ.ಲಿಂ ಮರಿಶಾಂತವೀರ ಶಿವಯೋಗಿಗಳ ಗದ್ದೂಗೆಯ ತನಕ  ಹೂವಿನ ಹಾಸಿಗೆಯ ಮೇಲೆ ಭಾವಾವೇಷವಾಗಿ ಧೀರ್ಘದಂಡ ನಮಸ್ಕಾರ ಹಾಕಿದರು. ಶರಣರ ಹಿಂದೆ ಹರಕೆ ಹೊತ್ತುಕೊಂಡ ಅಪಾರ ಭಕ್ತಸಮೂಹವೇ  ದೀರ್ಘದಂಡ ನಮಸ್ಕಾರ ಹಾಕುವ ದೃಶ್ಯ ರೋಚಕವಾಗಿತ್ತು. ಶ್ರೀಶಿವಶಾಂತವೀರ ಶರಣರ ಗುರುಗಳಾದ  ಚಿಕ್ಕೇನಕೊಪ್ಪದ ಶ್ರೀಚನ್ನವೀರ ಶರಣರು ಪ್ರತಿ ವರ್ಷ ಈ ಸೇವೆ ಸಲ್ಲಿಸುತ್ತಿದ್ದರು. ಇವರ ನಂತರ ಬಳಗಾನೂರಿನ ಶರಣಾದ ಶ್ರೀ ಶಿವಶಾಂತವೀರ ಶರಣರು  ಅವರ ಪರಂಪರೆಯನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ.  ಈ ಕಾರ್ಯಕ್ರಮವನ್ನು ನೋಡಲು ಜಾತ್ರೆಯಷ್ಟೇ ಜನರು ಆಗಮಿಸಿದ್ದರು
ಮೈನವಿರೇಳಿಸುವಂತಹ ಸ್ಥಿರ ಮಲ್ಲಗಂಬ ಮತ್ತು ರೋಪ್ ಮಲ್ಲಗಂಬ ಸಾಹಸ ಪ್ರದರ್ಶನ 
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಅಂಗವಾಗಿ  ಎರಡನೆಯ ದಿನದಂದು  ಶ್ರೀಮಠದ ಆವರಣದಲ್ಲಿ ಹಠಯೋಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ನರೆಗಲ್ ಇವರು ಮೈನವಿರೇಳಿಸುವಂತಹ ಸ್ಥಿರ ಮಲ್ಲಗಂಬ ಮತ್ತು ರೋಪ್ ಮಲ್ಲಗಂಬ ಸಾಹಸ ಪ್ರದರ್ಶನವನ್ನು ನಡೆಸಿಕೊಟ್ಟರು. ಸುಮಾರು ೩೦ ಜನಕ್ಕಿಂತ ಹೆಚ್ಚೂ ಸದಸ್ಯರ ತಂಡ ದೇಸಿಯಕಲೆಗಳನ್ನು ಉಳಿಸಿಕೊಂಡು ಮುನ್ನೆಡಿಸಿಕೊಂಡು ಹೋಗುತ್ತಿದ್ದೂದು ಶ್ಲಾಘನೀಯ. ಚಿಕ್ಕವರು ಹಾಗೂ ದೊಡ್ಡವರು  ಸಂಪೂರ್ಣ ತರಬೇತಿ ಪಡೆದುಕೊಂಡು ನಿಪುಣರಾಗಿರುವದು ಅವರು ತೋರಿಸಿದ ಅಪಾಯಕಾರಿ ಸಾಹಸ ಪ್ರದರ್ಶನವೇ ಅದಕ್ಕೆ  ಸಾಕ್ಷಿಯಾಗಿತ್ತು. .ಆರಂಭದಲ್ಲಿ  ಭೀಮಸೇನ ಚಳಗೇರಿ ಪತ್ರಕರ್ತರು ಈ ಕಾರ್ಯಕ್ರಮ ಉದ್ಘಾಟಿಸಿದರು.  ವಿಜಯಕುಮಾರ ಕವಲೂರ ಅವರ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. 
ಶ್ರೀಗವಿಮಠದ ಹಳೆಯ ವಿದ್ಯಾರ್ಥಿ ಬಳಗದ ನೊಂದಣಿಗೆ ಮನವಿ
ಕೊಪ್ಪಳ: ಸಂಸ್ಥಾನ  ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಶ್ರೀಗವಿಮಠದ ಶ್ರೀಗವಿಸಿದ್ಧೇಶ್ವರ ಕೃಪಾ ಪೋಷಿತ ಉಚಿತ ಪ್ರಸಾದ ನಿಲಯzಲ್ಲಿ  ಅಭ್ಯಾಸ ಮಾಡಿದ  ಹಳೆಯ ವಿದ್ಯಾರ್ಥಿಗಳ ಬಳಗವನ್ನು ಶ್ರೀಮಠದಲ್ಲಿ ರಚಿಸಲಾಗುತ್ತದೆ. ಆದ್ದರಿಂದ ತಮ್ಮ ಹೆಸರುಗಳನ್ನು ಶ್ರೀಮಠದಲ್ಲಿ ಶಿವನಗೌಡ ಪೋಲಿಸ್ ಪಾಟೀಲ ಇವರಲ್ಲಿ ಹೆಸರನ್ನು ಉಚಿತವಾಗಿ ನೊಂದಾಯಿಸಬೇಕು. ಈಗಾಗಲೇ ದಾಸೋಹ ಮಂಟಪದಲ್ಲಿ ಇದರ ಕೌಂಟರ್ ತೆರೆಯಲಾಗಿದೆ.  ಹೆಚ್ಚಿನ ಮಾಹಿತಿಗಾಗಿ  ಸಂಚಾಲಕರಾದ   ಶಿವನಗೌಡ ಪೋಲಿಸ್ ಪಾಟೀಲ ಅವರ ಮೊಬೈಲ್ ಸಂಖ್ಯೆ ೯೮೪೫೬೪೬೩೭೦ ಸಂಪರ್ಕಿಸಬೇಕೆಂದು ಗವಿಮಠದ ಪ್ರಕಟಣೆಯಲ್ಲಿ  ತಿಳಿಸಲಾಗಿದೆ.

ದಾಸೋಹದಲ್ಲಿಂದು
ಕೊಪ್ಪಳ :  ಶ್ರೀಗವಿಮಠದ ರಥೋತ್ಸವದ ಎರಡನೆಯ ದಿನದಲ್ಲಿ ದಾಸೋಹದ ಪ್ರಸಾದ ಸವಿಯಲು ಸಹಸ್ರಾರು ಭಕ್ತರು ಸಾಲು ಸಾಲಾಗಿ ನಿಂತು ಶಿಸ್ತು ಸಂಯಮ ದಿಂದ ಅಜ್ಜನ ಪ್ರಸಾದ ಸಚವಿಒದರು. ಇಂದಿನ ಮಹಾಪ್ರಸಾದದಲ್ಲಿ ರೊಟ್ಟಿ,ಬದನೆ,ಕಾಳು,ಶೇಂಗಾಚಟ್ನಿ,ಮಾದಲಿ,  ಹಾಲುತುಪ್ಪ ಹೀಗೆ ಹಲವಾರು ವೈವುಧ್ಯಮಯವಾದ ಪ್ರಸಾದವನ್ನು ಭಕ್ತರು ಸ್ವೀಕರಿಸಿದರು.  ಇಂದಿನ ಪ್ರಸಾದ ಸೇವೆಯನ್ನು ಬನ್ನಿಕೊಪ್ಪ ಗ್ರಾಮದ ಸದ್ಭಕ್ತರು ವಹಿಸಿದ್ದರು.  

Advertisement

0 comments:

Post a Comment

 
Top