PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ:  ಉತ್ತರ ಕರ್ನಾಟಕದ ಸಿದ್ದಗಂಗೆ ಎಂದು ಕರೆಯಲಾಗುತ್ತಿರುವ ಶ್ರೀಗವಿಮಠದ ಜಾತ್ರೆಯ ವೈಶಿಷ್ಟ್ಯವೆಂದರೆ ಮಹಾದಾಸೋಹ. ದಾಸೋಹದಲ್ಲಿ ಪ್ರತಿನಿತ್ಯ ಸಹಸ್ರಾರು ಭಕ್ತರು ಜಾತ್ರೆಯ  ಮಹಾದಾಸೋಹದಲ್ಲಿ  ಮಾದಲಿ, ಹಾಲುತುಪ್ಪ, ರೊಟ್ಟಿ, ಬಾಜಿ, ಅನ್ನ, ಸಾಂಬಾರ ಸ್ವೀಕರಿಸುತ್ತಿರುವದು ವಿಶೇಷ. ರಥೋತ್ಸವದ ದಿನ ೪೫ ಕ್ವಿಂಟಾಲ್ ಹಾಗೂ ಎರಡನೆಯ ದಿನ ಬಳಗಾನೂನಿರಿನ ಶ್ರೀ ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ ಕಾರ್ಯಕ್ರಮದ ದಿನದಂದು  ೮೫  ಕ್ವಿಂಟಾಲ್ ಅಕ್ಕಿ  ದಾಸೋಹಕ್ಕೆ ಬಳಕೆಯಾಗಿದೆ. ನಂತರದ ದಿವಸಗಳಲ್ಲಿ  ಪ್ರತಿನಿತ್ಯಲೂ ೩೦ ರಿಂದ ೩೫ ಕ್ವಿಂಟಾಲ್ ಅಕ್ಕಿ  ಅನ್ನದಾಸೋಹಕ್ಕೆ ಬಳಕೆಯಾಗುತ್ತದೆಂದು ಮಹಾದಾಸೋಹದ ಪ್ರಧಾನ ಉಸ್ತುವಾರಿ ವಹಿಸಿಕೊಂಡಿರುವ   ಪ್ರಕಾಶ ಚಿನಿವಾಲರ  ಮಾಧ್ಯಮಕೇಂದ್ರಕ್ಕೆ ತಿಳಿಸಿದ್ದಾರೆ. 

Advertisement

0 comments:

Post a Comment

 
Top