ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ೬೪ ನೇ ಗಣರಾಜ್ಯ ದಿನಾಚರಣೆ ಆಚಚರಿಸಲಾಯಿತು. ಕಾರ್ಯಕ್ರಮದಲ್ಲಿ ೬೪ ನೆ ಗಣರಾಜ್ಯ ದಿನಾಚರಣೆಯ ಧಜಾರೋಹಣ ಕಾರ್ಯಕ್ರಮವನ್ನು ನೆರವೆರಿಸಿ ಆರ್. ಎಚ್. ಅತ್ತನೂರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಕೊಪ್ಪಳ ಇವರು ಗುಲಾಮಗಿರಿಯಲ್ಲಿ ಬೆಂದು ಹೋಗಿದ್ದ ಭಾರತೀಯರಿಗೆ ಸುವ್ಯವಸ್ಥಿತವಾದ ಒಂದು ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಿ ಪ್ರತಿಯೊಬ್ಬ ಭಾರತಿಯರಿಗೂ ಅವರದೆ ಆದ ಹಕ್ಕು ಮತ್ತು ಕರ್ತವ್ಯಗಳಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ನಾಗರಾಜ ಪಾಮೇಶ ಡಿ. ಕೊಟ್ರೇಶ ಕೆ. ರಾಘವ್ರೇಂದ್ರ ಜಿ. ಆಶಾ. ಖ ಅನಿತಾ ಎಸ್. ಅನ್ನಪೂರ್ಣ ಬಿ. ಹಾಗೂ ಮಕ್ಕಳು ಕಾರ್ಯಕ್ರಮವನ್ನು ಉದ್ದೆಶಿಸಿ ಮಾತನಾಡಿದರು. ಕಾರ್ಯಕ್ರಮದ ಮೊದಲಿಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ ಹಾಗೂ ಭಾರತ ಸ್ವಾತಂತ್ರ್ಯ ಚಳುವಳಿಯ ಅಗ್ರಗಣ್ಯನಾಯಕ ಮಹಾತ್ಮಗಾಂಧೀಜಿಯವರ ಭಾವಚಿತ್ರಕ್ಕೆ ಶಾಲೆಯ ಶಿಕ್ಷಕಿಯರಾದ ಆಶಾ ಡಿ. ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖೋಪಾಧ್ಯಾಯರಾದ ಶ್ರೀಮತಿ ರೇಣುಕಾ ಅತ್ತನೂರ ಹಾಗೂ ಶಿಕ್ಷಕ/ಕಿಯರು ಮಕ್ಕಳು ಉಪಸ್ಥಿತರಿದ್ದರು. ಜಯಶ್ರೀ ಕೆ. ವಂದಿಸಿದರು, ಕೊನೆಯಲ್ಲಿ ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು.
0 comments:
Post a Comment