PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಜ.   ಇಟಗಿ ಉತ್ಸವ ಕಳೆದ ೮ ವರ್ಷಗಳಿಂದ ಆಚರಿಸುತ್ತಾ ಬಂದಿರುವ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಜನತೆಗೆ ಕ್ಷೇತ್ರದ ಇತಿಹಾಸ ಉಣಬಡಿಸುತ್ತಾ ಬಂದಿರುವುದು ಅತ್ಯಂತ ಮಹತ್ತರ ಕಾರ್ಯ ಶ್ಲಾಘನೀಯವಾದದು ಎಂದು ಸೈಯದ್ ಫೌಡೆಂಷನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಎಸ್‌ಎರ್ ಕಾಂಗ್ರೆಸ್ ಮುಖಂಡ ಕೆ.ಎಂ. ಸೈಯದ್ ಹೇಳಿದರು.
ಅವರು ಶುಕ್ರವಾರ ಸಮೀಪದ ಇಟಗಿ ಗ್ರಾಮದ ಐತಿಹಾಸಿಕ ದೇವಾಲಯಗಳ ಚಕ್ರವರ್ತಿ ಮಹದೇವ ದೇವಾಲಯದಲ್ಲಿ ನಡೆದ ಇಟಗಿ ಉತ್ಸವ ಸಮಾರೋಪ ಸಮಾರಂಭ ಉದ್ಘಾಟನೆಯನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ದೇವಾಲಯಗಳ ಚಕ್ರವರ್ತಿ ಎಂದೇ ಪ್ರಸಿದ್ಧವಾಗಿರುವ ಹಾಗೂ ಸುಮಾರು ೯೦೦ ವರ್ಷಗಳ ಆಚರಣೆಯಲ್ಲಿರುವ ಪುರಾತನ ದೇವಸ್ಥಾನಳಲ್ಲೊಂದಾದ ಇಟಗಿ ಮಹದೇವ ದೇವಾಲಯ ಉತ್ತರ ಕರ್ನಾಟಕದ ಪ್ರಸಿದ್ಧ ಪ್ರವಾಸಿತಾಣಗಳಲ್ಲೊಂದಾಗಿ ಹೋರಹೊಮ್ಮಬೇಕಿದೆ. ಇದೊಂದು ಐತಿಹಾಸಿಕ ಜನಮಾನಸದಲ್ಲಿ ಉಳಿಯುವಂತ ಕಾರ್ಯಕ್ರಮ ಇದಾಗಿದೆ. ಸರಕಾರ ನಿರ್ಲಕ್ಷಿಸಿದರು ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ ನಿರಂತರವಾಗಿ ಕಳೆದ ೮ ವರ್ಷಗಳಿಂದ ಈ ಇಟಗಿ ಉತ್ಸವ ಆಚರಣೆ ನಡೆಸುತ್ತಾ ಬಂದು ಇಂದೂ ಈ ಕ್ಷೇತ್ರದ ವೈಭವವನ್ನು ನಾಡಿನೆಲ್ಲೆಡೆ ಹಬ್ಬಿದೆ ಅದೇ ರೀತಿ ಈ ಕ್ಷೇತ್ರವು ಈ ಭಾಗದ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿಸುವ ಮಹತ್ತರ ಕಾರ್ಯ ಸರಕಾರದಿಂದ ಸಕಾರಗೊಳ್ಳಬೇಕಿದೆ. ಇದಕ್ಕೆ ಹೋರಟದ ಅಗತ್ಯತೆಯೂ ಕೂಡ ಇದೇ ಯುವಶಕ್ತಿ ಇದರ ಮುಂದಾಳತ್ವ ವಹಿಸಿಕೊಳ್ಳಬೇಕಿದೆ ಎಂದರು.
  ತಮ್ಮ ಸೈಯದ್ ಫೌಡೆಂಷನ್ ಚಾರಿಟೇಬಲ್ ಟ್ರಸ್ಟ್ ಇಗಾಗಲೇ ಕೊಪ್ಪಳ ನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಜನಪರ ಹಾಗೂ ಜನಸೇವಾ ಕಾರ್ಯಗಳನ್ನು ನಡೆಸಿದೆ. ಉಚಿತ ಕುಡಿಯುವ ನೀರು ಸರಬರಾಜು, ಬಡ ಜನತೆಗೆ ವಿಮಾ ಸೌಲಭ್ಯ, ಪ್ರತಿ ಗ್ರಾಮಕ್ಕೊಂದು ಉಚಿತ ಬೋರವೇಲ್, ಸಾಂಸ್ಕೃತಿಕ ಕಾರ್ಯಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಿ ಶ್ರಮಿಕರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಅದೇ ರೀತಿ ಮುಂದಿನ ದಿನಮಾನಗಳಲ್ಲಿ ಇಂತಹ ಕಾರ್ಯಗಳನ್ನು ಜಿಲ್ಲೆಯಾಧ್ಯಂತ ವಿಸ್ತರಿಸುವ ಮಹತ್ವಕಾಂಕ್ಷೆ ಸಂಸ್ಥೆ ಹೊಂದಿದೆ ಎಂದು ಸೈಯದ್ ಫೌಡೆಂಷನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಎಸ್‌ಎರ್ ಕಾಂಗ್ರೆಸ್ ಮುಖಂಡ ಕೆ.ಎಂ. ಸೈಯದ್ ತಮ್ಮ ಮನದಾಳದ ಅಭಿಲಾಷೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಿಕ ವೇದಿಕೆ ರಾಜ್ಯಾಧ್ಯಕ್ಷ ಹಾಗೂ ಪತ್ರಕರ್ತ ಸಿದ್ದಪ್ಪ ಹಂಚಿನಾಳ ವಹಿಸಿದ್ದರು. ಯಲಬುರ್ಗಾ ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ನವೀನ ಗುಳಗಣ್ಣನವರ ಸಮಾರೋಪ ಭಾಷಣದರ ಮೂಲಕ ಉತ್ಸವಕ್ಕೆ ಅಚಿತಿಮ ತೆರೆ ಎಳೆದರು. ಉಪನ್ಯಾಸ ನೀಡಿದ ಪತ್ರಕರ್ತ ಅಲ್ಲಾವುದ್ದೀನ್ ಎಮ್ಮಿ ಕ್ಷೇತ್ರದ ಐತಿಹಾಸಿಕ ಹಿರಿಮೆ ಎತ್ತಿಹಿಡಿದರು. ಚುಸಾಪ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಂಡಗಿ, ಬೀರಪ್ಪ ಅಂಡಗಿ, ಜಿಲ್ಲಾ ನಾಗರಿಕ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ ಪತ್ರಕರ್ತ ಎಂ. ಸಾದೀಕ್ ಅಲಿ, ನಾಗರಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತ ಹನುಮಂತ ಹಳ್ಳಿಕೇರಿ, ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಮಾರುತಿರಾವ್ ಸುರ್ವೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಸುಣಗಾರ, ಪತ್ರಕರ್ತರಾದ ಎಸ್.ಜಿ. ಕಟ್ಟಿಮನಿ, ಮಂಜುನಾಥ ಕೊಳುರು, ಶಿಕ್ಷಕರಾದ ಬಿ.ಎಂ. ಹಳ್ಳಿ, ಕುಕನೂರು ಪ್ರರ್ತಕರ್ತರಾದ ಕಳಕಪ್ಪ ಚಿಕ್ಕಗಡಾದ, ಸುಭಾಶ್ ಭಜಂತ್ರಿ, ಬಸವರಾಜ ಕೊನ್ನಾರಿ, ವಿಜಯ ಕರ್ನಾಟಕ ವರದಿಗಾರ ಮಹೇಶಗೌಡ, ಜಿಲ್ಲಾ ನಾಗರಿಕ ವೇದಿಕೆ ರಾಜ್ಯಾಧ್ಯಕ್ಷ ಮಹೇಶ ಬಾಬು ಸುರ್ವೆ ಸೇರಿದಂತೆ ಅನೇಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.

Advertisement

0 comments:

Post a Comment

 
Top