PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ,೧೩-ಜೀತ ಪದ್ಧತಿ ನಿರ್ಮೂಲನಾ ಪದ್ಧತಿ ಕಾಯ್ದೆ ೧೯೭೬ ರಡಿ ಜಿಲ್ಲಾ ಮಟ್ಟದ ಜಾಗೃತಿ ಸಮಿತಿಯನ್ನು  ರಚಿಸಿ ಕರ್ನಾಟಕ ರಾಜ್ಯ ಸರಕಾರದ ಸಚಿವಾಲಯ ಆದೇಶ ಹೊರಡಿಸಿದೆ. ಈ ಸಮಿತಿಗೆ ಕೊಪ್ಪಳ ನಗರದ ಜಿ.ಎಸ್.ಗೋನಾಳ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಜೀತಗಾರಿಕೆಯನ್ನು ಸಂಪೂರ್ಣವಾಗಿ ನಿರ್ಮೂಲನೆ   ಮಾಡುವ ಉದ್ದೇಶದಿಂದ  ರಾಜ್ಯ ಸರಕಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜಿಕ ಕಾರ್ಯಕರ್ತರನ್ನೊಳಗೊಂಡ ೧೫ ಜನರ ಸಮಿತಿಯನ್ನು ರಚಿಸಿ ಆದೇಶ ನೀಡಿದೆ.
 ಈ ಸಮಿತಿಯಲ್ಲಿ ಜಿಲ್ಲಾ ನಾಗರಿಕ ವೇದಿಕೆಯ ಅಧ್ಯಕ್ಷ, ಕೊಪ್ಪಳ ಜಿಲ್ಲಾ ವಾರ್ತೆ ಪತ್ರಿಕೆಯ ಸಂಪಾದಕ ಹಾಗೂ ಮದ್ಯಪಾನ ವಿರೋಧಿ ಆಂದೋಲನದ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕಳೆದ ೨೦ ವರ್ಷಗಳಿಂದ ವಿದ್ಯಾರ್ಥಿ ದಿಸೆಯಿಂದಲೇ ಹೋರಾಟವನ್ನು ಮೈಗೂಡಿಸಿಕೊಂಡು ಬಂದಿರುವ ಗೋನಾಳ ಅವರ ಜನಪರವಾದ ಹೋರಾಟವನ್ನು ಗಮನಿಸಿ ರಾಜ್ಯ ಸರಕಾರ ಅವರನ್ನು ಜಾಗೃತಿ ಸಮಿತಿಗೆ ಆಯ್ಕೆ ಮಾಡಿದ್ದು ಅವರ ಸ್ನೇಹಿತ ಬಳಗ ಹರ್ಷ ವ್ಯಕ್ತಪಡಿಸಿದೆ.
ಕಳೆದ ಹಲವಾರು ದಶಕಗಳಿಂದ ಶಾಸ್ವತವಾಗಿ ಬೇರೂರಿರುವ ಜೀತ ಪದ್ಧತಿಯನ್ನು ಅಧಿಕಾರಗಳ ಸಹಯೋಗದಲ್ಲಿ ಮಿಂಚಿನ ತನಿಖೆ ನಡೆಸಿ ಅನಿಷ್ಠ ಪದ್ಧತಿಯಾಗಿರುವ ಜೀತ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿ ಬಾಲ ಕಾರ್ಮಿಕರನ್ನು ಮುಕ್ತಗೊಳಿಸಿ ಉತ್ತಮ ಶಿಕ್ಷಣ ಹಾಗೂ ಪುನರ್ ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟು ಸಕ್ರಿಂiiವಾಗಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಅವರ ಗೆಳೆಯರ ಬಳಗ ಆಶಿಸಿದೆ.

Advertisement

0 comments:

Post a Comment

 
Top