PLEASE LOGIN TO KANNADANET.COM FOR REGULAR NEWS-UPDATES


ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ 
ಕೊಪ್ಪಳ ತಾಲ್ಲೂಕ ಫೋಟೋ ಮತ್ತು ವಿಡಿಯೋಗ್ರಾಫರ್‍ಸ್ ಅಸೋಶಿಯೇಶನ್ಸ್ (ರಿ)
ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ 
________________________________________________________________________

ಜನೇವರಿ ೨೯ರಂದು ಜರುಗಲಿರುವ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ

 ಪ್ರಥಮ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ 
ಹಾಗೂ ಪ್ರದರ್ಶನ
ಥೀಮ್ : ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ-೨೦೧೩

ಛಾಯಾಗ್ರಹಣ ಸ್ಪರ್ಧೆ ನಿಯಮ ಮತ್ತು ನಿಬಂಧನೆಗಳು ....
೧. ಜನೇವರಿ ೨೯,೩೦ ೨೦೧೩ರಂದು ನಡೆಯಲಿರುವ ಕೊಪ್ಪಳ ಶ್ರೀಗವಿಮಠದ ಜಾತ್ರಾ ಮಹೋತ್ಸವಕ್ಕೆ   
  ಸಂಬಂಧಿಸಿದಂತೆ ಯಾವುದೇ ಚಿತ್ರಗಳನ್ನು ತೆಗೆಯಬಹುದು.
೨ ಸ್ಪರ್ಧೆಯು ಮುಕ್ತವಾಗಿದೆ. ಆಸಕ್ತರು,ವೃತ್ತಿಪರರು,ಹವ್ಯಾಸಿ ಹಾಗೂ ಕುತೂಹಲಿ ಛಾಯಾಗ್ರಾಹಕರು 
  ಪಾಲ್ಗೊಳ್ಳಬಹುದು. 
೩. ಚಿತ್ರವು ಕಲಾತ್ಮಕವಾಗಿರಬೇಕು.
೪. ೧೮ ಇಂಚು ಉದ್ದ ಹಾಗೂ ೧೨ ಇಂಚು ಅಗಲದ  ನಾಲ್ಕು (೪) ಛಾಯಾಚಿತ್ರಗಳನ್ನು ಕೊಡಬೇಕು.
೫.. ಇಂಟರ್ನೆಟ್ ಡೌನ್ಲೋಡ್ ಚಿತ್ರಗಳನ್ನು, ನಕಲು ಛಾಯಾಚಿತ್ರಗಳು ಮತ್ತು (ಫೋಟೋಶಾಪ್ ಇತ್ಯಾದಿ) ಅತೀವವಾಗಿ ಪರಿಷ್ಕೃತಗೊಂಡ ಚಿತ್ರಗಳನ್ನು ಸ್ಪರ್ಧೆಯಲ್ಲಿ ಅನರ್ಹಗೊಳಿಸಲಾಗುವುದು ಮತ್ತು ಇಂಟರ್ನೆಟ್ ಡೌನ್ಲೋಡ್ ಚಿತ್ರಗಳನ್ನು ಪರಿಗಣಿಸಲಾಗುವುದಿಲ್ಲ.
೬.ಬಹುವರ್ಣ ಮತ್ತು ಕಪ್ಪು ಬಿಳುಪು ಎಂಬ ಪ್ರತ್ಯೇಕ ವಿಭಾಗಳಿಲ್ಲ. 
೭.ಚಿತ್ರದ ಹಿಂದೆ ಛಾಯಾಚಿತ್ರಗ್ರಾಹಕರ ಹೆಸರು, ವಿಳಾಸ, ಫೋನ್ ನಂಬರ್ ಪರ್ಮನೆಂಟ್ ಮಾರ್ಕರ್ ಪೆನ್‌ನಲ್ಲಿ ಬರೆದು ಕಳುಹಿಸಬೇಕು. ಚಿತ್ರದ ಮುಂಭಾಗದಲ್ಲಿ ಚಿತ್ರಗ್ರಾಹಕರ ಹೆಸರಿದ್ದರೆ ಅದನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. 
೮. ೨೯-೧-೨೦೧೩ ಬೆಳಿಗ್ಗೆ ೧೦ ಗಂಟೆಗೆ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು.
  ನೋಂದಾಯಿಸಬೇಕಾದ ವಿಳಾಸ : ವಸ್ತ್ರದ ಫೋಟೋ ಸ್ಟುಡಿಯೋ, 
  ಗವಿಮಠ ಕಾಂಪ್ಲೆಕ್ಸ್,ಕೊಪ್ಪಳ ಮೊ : ೯೮೪೫೨೧೬೩೫೫
೯. ಭಾಗವಹಿಸುವವರು ತಮ್ಮ ಇತ್ತೀಚಿನ ೨ ಪಾಸಪೋರ್ಟ ಸೈಜಿನ ಫೋಟೋಗಳನ್ನು ತರಬೇಕು.
ಎಲ್ಲ ಚಿತ್ರಗಳು ಫೆಬ್ರುವರಿ ೧೦ರೊಳಗೆ ಸಂಘದ ಅಧ್ಯಕ್ಷರಾದ 
ಸುರೇಶ ಪದಕಿ, (೯೨೪೨೧೩೪೫೨೩)  ಅಧ್ಯಕ್ಷರು ,ಪದಕಿ ಡಿಜಿಟಲ್ ಸ್ಟುಡಿಯೋ ,
ಜವಾಹರ್ ರೋಡ್ ಕೊಪ್ಪಳ-೫೮೩ ೨೩೧. ಇಲ್ಲಿಗೆ ಕಳುಹಿಸಬೇಕು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ
ಪ್ರಥಮ ಬಹುಮಾನ ೧೦,೦೦೦ ರೂ.
ದ್ವಿತೀಯ ಬಹುಮಾನ ೫,೦೦೦  ರೂ.
ತೃತೀಯ ಬಹುಮಾನ ೩,೦೦೦  ರೂ. 
    ಮೂರು ಸಮಾಧಾನಕರ ಬಹುಮಾನಗಳು     ೧,೦೦೦  ರೂ
( ನಗದು ಬಹುಮಾನ, ಪ್ರಮಾಣ ಪತ್ರ,ಸ್ಮರಣಿಕೆಯನ್ನು ನೀಡಲಾಗುವುದು.)

ಬಹುಮಾನಗಳ ಪ್ರಾಯೋಜಕರು :  ಶ್ರೀ ಗೊನಾಳ ರಾಜಶೇಖರಗೌಡ ಚಾರಿಟೇಬಲ್ ಟ್ರಸ್ಟ್,ಕುಷ್ಟಗಿ

ಬಹುಮಾನ ವಿತರಣೆ :
ದಿನಾಂಕ ೧೧-೩-೨೦೧೩ರಂದು ಗವಿಮಠದ ಆವರಣದಲ್ಲಿ ನಡೆಯಲಿರುವ ಬೆಳಕಿನೆಡೆಗೆ ಕಾರ್‍ಯಕ್ರಮದಲ್ಲಿ
ಸ್ಪರ್ಧೆಯ ಕುರಿತ ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಮೊಬೈಲ್ ಸಂಖ್ಯೆ ೯೮೪೫೨೧೬೩೫೫, ೯೪೪೮೮೬೧೦೧೬,೯೪೪೮೭೦೮೫೭೯ಗೆ ಸಂಪರ್ಕಿಸಬಹುದು.

* ಸ್ಪರ್ಧೆಗೆ ಬರುವ ಛಾಯಾಗ್ರಾಹಕರಿಗೆ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಲಾಗುವುದು.
* ಕೊಪ್ಪಳ ತಾಲೂಕಿನ ಛಾಯಾಗ್ರಾಹಕರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. 


Advertisement

0 comments:

Post a Comment

 
Top