: ಗ್ರಾಹಕರ ವೇದಿಕೆ ತೀರ್ಪು
ಕೊಪ್ಪಳ ಡಿ. : ದೂರಶಿಕ್ಷಣ ಪರೀಕ್ಷಾರ್ಥಿಗಳಿಗೆ ಸಕಾಲದಲ್ಲಿ ಪರೀಕ್ಷೆಯನ್ನು ನಡೆಸದಿರುವುದು ಬೆಂಗಳೂರು ವಿಶ್ವವಿದ್ಯಾಲಯದ ಸೇವಾ ನ್ಯೂನತೆ ಎಂದು ಪರಿಗಣಿಸಿರುವ ಕೊಪ್ಪಳ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಇದಕ್ಕಾಗಿ ದೂರು ಸಲ್ಲಿಸಿದ ಪ್ರತಿ ಅಭ್ಯರ್ಥಿಗೆ ತಲಾ ೩೦೦೦ ರೂ.ಗಳ ಪರಿಹಾರವನ್ನು ಪಾವತಿಸುವಂತೆ ತೀರ್ಪು ನೀಡಿದೆ.
ಹೊಸಪೇಟೆಯ ಸೈಯದ್ ಫಯಾಜ್ ಪಾಶಾ, ಸೈಯದ್ ಅಫ್ತಾಬ್ ಪೀರಾ, ಸೈಯದ್ ಅಜಂ ಪಾಶಾ ಹಾಗೂ ಸೈಯದ್ ಅಫ್ಜಲ್ ಪಾಶಾ ಎಂಬ ನಾಲ್ವರು ಅಭ್ಯರ್ಥಿಗಳು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ಸೌಲಭ್ಯದಡಿ ಪದವಿ ಪಡೆಯುವ ಉದ್ದೇಶದಿಂದ ಕೊಪ್ಪಳದ ಅಧ್ಯಯನ ಕೇಂದ್ರವಾಗಿರುವ ಶ್ರೀ ವಿರ್ಶವಭಾರತಿ ವಿದ್ಯಾಸಂಸ್ಥೆಯವರ ನ್ಯಾಷನಲ್ ಕರೆಸ್ಪಾಂಡೆನ್ಸ್ ಕಾಲೇಜು ಇವರಲ್ಲಿ ಪ್ರತಿ ಅಭ್ಯರ್ಥಿಯು ರೂ. ೫೫೦೦ ಗಳ ಶುಲ್ಕ ಪಾವತಿಸಿ ನೋಂದಣಿ ಮಾಡಿಸಿಕೊಂಡಿದ್ದರು. ಆದರೆ ಪದವಿಯ ಮೊದಲನೆ ವರ್ಷಕ್ಕೆ ಸಂಬಂಧಿಸಿದ ಪಠ್ಯ ಪುಸ್ತಕಗಳನ್ನು ಅಭ್ಯರ್ಥಿಗಳಿಗೆ ಇಂದು, ನಾಳೆ ಎನ್ನುತ್ತ ಪಠ್ಯಪುಸ್ತಕ ನೀಡಿರುವುದಿಲ್ಲ. ಕಳೆದ ೨೦೧೧ ರ ಆಗಸ್ಟ್ ೦೯ ರಂದು ಪದವಿಯ ಪ್ರಥಮ ವರ್ಷದ ವೇಳಾ ಪಟ್ಟಿ ಕಳುಹಿಸಿ, ಬಾಕಿ ಶುಲ್ಕ ರೂ. ೧೩೦೦ ಗಳನ್ನು ಪಾವತಿಸಿ, ಗುರುತಿನ ಚೀಟಿ ಮತ್ತು ಹಾಲ್ ಟಿಕೇಟ್ ಪಡೆಯುವಂತೆ ಶಿಕ್ಷಣ ಸಂಸ್ಥೆಯವರು ಅಭ್ಯರ್ಥಿಗಳಿಗೆ ಸೂಚಿಸಿದರು. ಅದರಂತೆ ಅಭ್ಯರ್ಥಿಗಳು ಶುಲ್ಕ ಪಾವತಿಸಲು ಹೋದಾಗ, 'ಕಾರಣಾಂತರಗಳಿಂದ ಪರೀಕ್ಷೆಗಳು ಮುಂದೂಡಲ್ಪಟ್ಟಿದ್ದು, ಮುಂದಿನ ಪರೀಕ್ಷಾ ವೇಳಾ ಪಟ್ಟಿ ಸೂಚನಾ ಪತ್ರ ತಿಳಿಸಲಾಗುವುದೆಂದು' ಎಂದು ಶಿಕ್ಷಣ ಸಂಸ್ಥೆಯವರು ಅಭ್ಯರ್ಥಿಗಳಿಗೆ ತಿಳಿಸಿದರು, ಅದೇ ರೀತಿ ಪದೇ ಪದೇ ಮುಂದೂಡಿ, ನಂತರ ಪರೀಕ್ಷಾ ವೇಳಾ ಪಟ್ಟಿ ಮತ್ತು ಸೂಚನಾ ಪತ್ರ ಕಳುಹಿಸಿರುವುದಿಲ್ಲ. ದೂರವಾಣಿ ಮುಖಾಂತರ ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ನೊಂದಣಿ ಶುಲ್ಕ ಪಾವತಿಸಿಕೊಂಡು, ಪಠ್ಯ ಪುಸ್ತಕ ನೀಡದೆ, ಪರೀಕ್ಷೆಗಳನ್ನು ಸಕಾಲದಲ್ಲಿ ನಡೆಸದೆ ಶಿಕ್ಷಣ ಸಂಸ್ಥೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದವರು ಸೇವಾ ನ್ಯೂನತೆ ಎಸಗಿದ್ದು, ಇದಕ್ಕಾಗಿ ಪ್ರಕರಣದ ಖರ್ಚು, ನೊಂದಣಿ ಶುಲ್ಕ, ಮಾನಸಿಕ ಹಿಂಸೆ ಹಾಗೂ ಸೇವಾ ನ್ಯೂನತೆಗೆ ಪರಿಹಾರ ಸೇರಿ ಒಟ್ಟು ರೂ. ೩೧೦೦೦೦ ಗಳನ್ನು ಕೊಡಿಸುವಂತೆ ಅಭ್ಯರ್ಥಿಗಳು ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು.
ಕೊಪ್ಪಳ ಗ್ರಾಹಕರ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಹಾಗೂ ಸದಸ್ಯೆ ವೇದಾ ಜೋಷಿ ಅವರು ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಿ ನಿಗದಿತ ಕಾಲಾವಧಿಯೊಳಗೆ ಪದವಿಯ ಪ್ರಥಮ ವರ್ಷಕ್ಕೆ ಸಂಬಂಧಿಸಿದ ಪಠ್ಯ-ಪುಸ್ತಕಗಳನ್ನು ಒದಗಿಸದೇ ಇರುವುದು, ಹಾಗೂ ಪರೀಕ್ಷೆಗಳನ್ನು ಸಕಾಲದಲ್ಲಿ ನಡೆಸದೇ ಇರುವುದು ಶಿಕ್ಷಣ ಸಂಸ್ಥೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದವರ ಸೇವಾ ನ್ಯೂನತೆಯಾಗಿದೆ ಎಂದು ಪರಿಗಣಿಸಿ, ಕೊಪ್ಪಳದ ನ್ಯಾಷನಲ್ ಕರೆಸ್ಪಾಂಡೆನ್ಸ್ ಕಾಲೇಜ್‌ನವರು ಪ್ರತಿ ಅಭ್ಯರ್ಥಿಗೆ ನೊಂದಣಿ ಶುಲ್ಕ ರೂ. ೫೫೦೦ ಹಾಗೂ ಪ್ರಕರಣದ ಖರ್ಚು ರೂ. ೧೦೦೦ ಗಳನ್ನು, ಹಾಗೂ ಬೆಂಗಳೂರು ವಿಶ್ವವಿದ್ಯಾಲಯದವರು ಸೇವಾ ನ್ಯೂನತೆಗೆ ಪರಿಹಾರವಾಗಿ ಪ್ರತಿ ಅಭ್ಯರ್ಥಿಗೆ ರೂ. ೩೦೦೦ ಮತ್ತು ಪ್ರಕರಣದ ಖರ್ಚು ರೂ. ೧೦೦೦ ಗಳನ್ನು ೯೦ ದಿನಗಳ ಒಳಗಾಗಿ ಪಾವತಿಸುವಂತೆ ಆದೇಶಿಸಿದೆ. ಇದಕ್ಕೆ ತಪ್ಪಿದಲ್ಲಿ ಸೂಚಿತ ಮೊತ್ತಕ್ಕೆ ವಾರ್ಷಿಕ ಶೇ. ೧೦ ರ ಬಡ್ಡಿಯನ್ನು ೯೦ ದಿನಗಳ ಕಾಲಾವಧಿ ಮುಗಿದ ದಿನಾಂಕದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಅಭ್ಯರ್ಥಿಗಳಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.

0 comments:
Post a Comment