PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ೨೦೧೨ -೧೩ ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷೆಗಳು ಡಿ : ೨೮ರಿಂದ ೩೦ ರ ವರೆಗೆ ನಗರದ ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ಜರುಗುವವು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ   ತಿಳಿಸಿದ್ದಾರೆ.
    ಡಿ: ೨೮ ರಂದು ಬೆಳಗ್ಗೆ ೧೦:೦೦ ಘಂಟೆಗೆ ಕನ್ನಡ ರತ್ನ ಪತ್ರಿಕೆ -೧, ಹಳಗನ್ನಡ ಸಾಹಿತ್ಯ, ಕನ್ನಡ ಜಾಣ ಪತ್ರಿಕೆ-೧ ನಡುಗನ್ನಡ ಸಾಹಿತ್ಯ: ಮಧ್ಯಾಹ್ನ ೨ ರಿಂದ ಕನ್ನಡ ರತ್ನ ಪತ್ರಿಕೆ - ೨, ಹೊಸಗನ್ನಡ ಸಾಹಿತ್ಯ (ಕಾವ್ಯ ಮತ್ತು ಸಣ್ಣಕತೆ), ಕನ್ನಡ ಜಾಣ ಪತ್ರಿಕೆ -೨, ನಾಟಕ ಮತ್ತು ಪ್ರಬಂಧ ಸಾಹಿತ್ಯ ಪರೀಕ್ಷೆಗಳು ನಡೆಯಲಿವೆ.
    ಡಿ :೨೯ ರಂದು ಬೆಳಗ್ಗೆ ೧೦:೦೦ ಘಂಟೆಗೆ ಕನ್ನಡ ಕಾವ ಪತ್ರಿಕೆ-೧ ಕನ್ನಡ ಗದ್ಯ, ಪದ್ಯ, ಸಾಹಿತ್ಯ, ಕನ್ನಡ ಜಾಣ ಪತ್ರಿಕೆ -೩, ಕನ್ನಡ ಸಾಹಿತ್ಯ ಚರಿತ್ರೆ: ಕನ್ನಡ ರತ್ನ ಪತ್ರಿಕೆ -೩ ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ: ಮಧ್ಯಾಹ್ನ ೨:೦೦ ರಿಂದ ಕನ್ನಡ ಕಾವ ಪತ್ರಿಕೆ -೨ ವ್ಯವಹಾರಿಕ ಕನ್ನಡ ಮತ್ತು ಸಂವಹನ ಕನ್ನಡ: ಕನ್ನಡ ಜಾಣ ಪತ್ರಿಕೆ-೪ ಹೊಸ ಗನ್ನಡ ವ್ಯಾಕರಣ ಮತ್ತು ಛಂದಸ್ಸು: ಕನ್ನಡ ರತ್ನ ಪತ್ರಿಕೆ - ೪ ಭಾಷಾ ವಿಜ್ಞಾನ ಪರೀಕ್ಷೆಗಳು ಜರುಗಲಿವೆ.
    ಡಿ:೩೦ ರಂದು ಬೆಳಗ್ಗೆ ೧೦:೦೦ ಘಂಟೆಗೆ ಕನ್ನಡ ಪ್ರವೇಶ ಪತ್ರಿಕೆ -೧ ಅಕ್ಷರ, ಪದ, ವಾಕ್ಯ ರಚನೆ: ಕನ್ನಡ ರತ್ನ ಪತ್ರಿಕೆ -೫ ಜಾನಪದ ಸ್ವರೂಪ, ಕನ್ನಡ ಸಂಸ್ಕೃತಿ, ಕನ್ನಡ ಕಾವ ಹಾಗೂ ಕನ್ನಡ ಜಾಣ ಮೌಖಿಕ ಪರೀಕ್ಷೆಗಳು: ಮಧ್ಯಾಹ್ನ ೨:೦೦ ರಿಂದ ಕನ್ನಡ ಪ್ರವೇಶ ಪತ್ರಿಕೆ -೨ ಭಾಷೆ ಮತ್ತು ಸಾಹಿತ್ಯ ಪರಿಚಯ, ಕನ್ನಡ ಕಾವ ಮೌಖಿಕ ಪರೀಕ್ಷೆ (ಮುಂದುವರಿಕೆ) ಗಳು ಜರುಗಲಿವೆ.
    ಪರೀಕ್ಷಾರ್ಥಿಗಳಿಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸನಿಹವಾಣಿ ೯೦೦೮೫೮೫೪೮೨ ಕ್ಕೆ ಸಂಪರ್ಕಿಸಲು ಜಿಲ್ಲಾ ಕಸಾಪ ಕೋರಿದೆ.

Advertisement

0 comments:

Post a Comment

 
Top