ಮನೆ ಮಂದಿ ನೋಡಲು ಮುಜುಗರ "ಅಡ್ಡ" ಬರುತ್ತೆ
ತರಹೇವಾರಿ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡು ಸಿನಿಮಾ ಗೆಲ್ಲಿಸಲು ಮಾಡಿರುವ ಎಲ್ಲ ಗಿಮಿಕ್‌ಗಳು ಪ್ರೇಮ್‌ಗೆ "ಅಡ್ಡ" ಪರಿಣಾಮ ಬೀರಿವೆ. ಸಿನಿಮಾದ ಮೊದಲರ್ಧ ಕತೆಗೆ ನೋಡಿಸಿಕೊಂಡು, ನಗಿಸಿಕೊಂಡು ಹೋಗುವ ಗುಣವಿದ್ದರೆ ಎರಡನೇ ಆರ್ಧ ಭಾಗದ ಕತೆಯಲ್ಲಿ ಉರುಳುವ ತಲೆಗಳು, ರಕ್ತ-ಕಣ್ಣೀರು "ಅಡ್ಡ" ಹಾದಿ ಹಿಡಿದಂತೆ ಭಾಸವಾಗಿ, ಮನೆ ಮಂದಿ ನೋಡಲು ಮುಜುಗರ ಬೇಡವೆಂದರೂ "ಅಡ್ಡ" ಬರುತ್ತದೆ.
ಸಾಕಷ್ಟು ವಿವಾದಗಳಿಗೆ ಈಡಾಗಿದ್ದ ಹಾಡುಗಳನ್ನೇ ನೋಡಲೆಂದು ಥೇಟರ್‌ಗೆ ಧಾವಿಸುವ ಪಡ್ಡೆಗಳಿಗೆ ಮೋಸವಿಲ್ಲ. ಚಿತ್ರ ಶುರುವಾಗುತ್ತಿದ್ದಂತೆ "ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು" ಹಾಡಿಗೆ ಸೊಂಟ ಬಳುಕಿಸಿ ಚಿತ್ರದ ಆರಂಭಕ್ಕೆ ಪವರ್ ಒದಗಿಸಿ ಮರೆಯಾಗುವ ಐಂದ್ರಿತಾ ಕಣ್ಣು ಮಿಟುಕಿಸದಂತೆ ನೋಡುವ ಮೋಡಿ ಮಾಡಿದ್ದಾರೆ. ಹಾಗೆಯೇ "ಏಳುಕೋಟೆ ಹುಡುಗಿಯೊಬ್ಳು" ಐಟಂ ಹಾಡು ಶಿಳ್ಳೆ ಗಿಟ್ಟಿಸುತ್ತದೆ.
ಪಡುವಾರಳ್ಳಿಯ ಮಾಜಿ ಅಧ್ಯಕ್ಷನ ಮನೆಯ ಹುಡುಗಿ ಗಿರಿಜಾ (ಕೃತಿ ಖರಬಂಧ)ಳಿಗೆ ರಂಗ (ಪ್ರೇಮ್) ಕಾಳು ಹಾಕ್ತಾನೆ. ಗಿರಿಜಾ ಕೂಡ ಚಿಕ್ಕವಯಸ್ಸಿನಲ್ಲಿಯೇ ರಂಗನಿಗೆ ಮನಸು ಕೊಟ್ಟಿರುತ್ತಾಳೆ. ಭಯಂಕರ ಭಂಡರ ಗ್ಯಾಂಗ್‌ನ ರಂಗ ಪ್ರೀತಿಗೆ ಪ್ರಾಣ ಕೊಡೋಕು ಸೈ, ಆಭಿಮಾನಕ್ಕೆ ಪ್ರಾಣ ತೆಗೆಯೋಕು ಸೈ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದ್ದು ಅಮಾಯಕ ಎಂದು ಬಿಂಬಿಸಲು ಹೋಗಿ ಕೊನೆಗೆ ನಿರ್ದೆಶಕರೇ ಕನ್‌ಫ್ಯೂಸ್ ಆದಂಗೆ ಕಾಣುತ್ತೆ.
ನಂಜುಂಡ ಹಾಗೂ ಅವರಣ್ಣನಿಗೆ ಹೇಗಾದರೂ ಸರಿ, ಹಳ್ಳಿಯಲ್ಲಿ ದರ್ಬಾರು ಮಾಡುವ ಶೋಕಿ. ಒಮ್ಮೆ ಆಧಿಕಾರ ಅನುಭವಿಸಿ ನಂತರ ಕಳೆದುಕೊಂಡ ಅವರಿಗೆ ಹಳ್ಳಿಯಲ್ಲಿ ಗೌರವವೇ ಇಲ್ಲ ಎಂದನಿಸುತ್ತದೆ. ಮನೆಯ ಹೆಣ್ಣುಮಕ್ಕಳು ಕೂಡ ಈ ವಿಷಯದಲ್ಲಿ ಅವರನ್ನು ಕೆಣಕುತ್ತಾರೆ. ಅದಕ್ಕೆ ತಮ್ಮ ಪ್ರಗತಿಗೆ ಅಡ್ಡವಾಗಿದ್ದ ಅಧ್ಯಕ್ಷ ಕೃಷ್ಣಪ್ಪನನ್ನು ರಂಗ, ಶೀನ ಹಾಗೂ ಮಂಟೇ ಕೈಯಿಂದ ಕೊಲೆ ಮಾಡಿಸುತ್ತಾರೆ.
ಪ್ರೀತಿಸುವ ಹುಡುಗಿಯ ಚಿಕ್ಕಪ್ಪ (ನಂಜುಂಡ)ನನ್ನು ಒಲಿಸಿಕೊಳ್ಳುವ ಭರದಲ್ಲಿ ಹಾಗೂ ನಂಜುಂಡನ ಸೆಂಟಿಮೆಂಟ್ ಡೈಲಾಗ್‌ಗೆ ಫೀದಾ ಅಗುವ ರಂಗ ಮತ್ತು ಸಂಗಡಿಗರು ಕೃಷ್ಣಪ್ಪನನ್ನ ಕೊಲೆ ಮಾಡುತ್ತಾರೆ. ನಂತರ ಜೈಲಿಂದ ಬಿಡಿಸುವುದಾಗಿ ಮಾತು ಕೊಟ್ಟಿದ್ದ ನಂಜುಂಡ ರಂಗ, ಶೀನನಿಗೆ ಕೈ ಕೊಡುತ್ತಾನೆ. ಜೈಲಹಕ್ಕಿ ಕೋತಿ ಚಂದ್ರ ಇವರನ್ನು ಹೊರಗೆ ಬರುವಂತೆ ಮಾಡುತ್ತಾನೆ. ಕೋತಿ ಚಂದ್ರನ ಋಣ ತೀರಿಸಲು ಮತ್ತೊಂದು ಕೊಲೆ ಈ ಹುಡುಗರಿಂದ ನಡೆದುಹೋಗುತ್ತದೆ. ಕೊನೆಗೆ ಕತ್ತರಿಸುವದನ್ನೇ ಕಾಯಕ ಮಾಡಿಕೊಂಡು ಕೊನೆಗೆ ಶತ್ರುಗಳ ಕೈಯಲ್ಲೆ ಈ ಹುಡುಗರು ಕೊನೆಯುಸಿರೆಳೆಯುತ್ತಾರೆ.
ಪ್ರೀತಿಸುವ ಹುಡುಗಿ ಕ್ಲೈಮ್ಯಾಕ್ಸನಲ್ಲಿ ನಾಯಕನ ಬಳಿ ಬಂದು ಅಳುವಾಗ ನನ್ನನ್ನ ಮರೆತು ಬಿಡು, ಹೋಗು ಬೇರೆಯವನನ್ನ ಮದುವೆಯಾಗಿ ಜೀವನದಲ್ಲಿ ಚೆನ್ನಾಗಿರು ಎಂದು ನಾಯಕ ದಾನಶೂರ ಕರ್ಣನ ಸ್ಥಿತಿಯಲ್ಲಿರುವಾಗ ಬರುವ ಶತ್ರುಗಳನ್ನು ರಂಗ ಅಡ್ಡಡ್ಡ ಸೀಳುತ್ತಿರುವಾಗ ನಾಯಕಿಯ ತಂದೆ ಅಗಮಿಸಿ ಇವನನ್ನ ಹಿಡಿದುಕೊಟ್ಟು ಒಳ್ಳೇ ಕೆಲಸ ಮಾಡಿದೆ ಎನ್ನುವುದು ರಂಗನ ಕಿವಿಗೆ ಬೀಳುತ್ತಿದ್ದಂತೆ ರಂಗ ಹೋರಾಟದಿಂದ ವಿಮುಖನಾಗಿ ಸಾವಿಗೆ ಶರಣಾಗುತ್ತಾನೆ.
ಚಿತ್ರದ ಮೊದಲರ್ಧ ಜಾಲಿಯಾಗಿದ್ದರೆ, ದ್ವೀತಿಯಾರ್ಧ ಸೇಡು, ಕೊಲೆ, ರಕ್ತಪಾತ ತಾಯಿ ಸೆಂಟಿಮೆಂಟ್‌ನಲ್ಲಿ ಕತೆ ಕಳೆದು ಹೋಗುತ್ತದೆ. ಆಭಿನಯದಲ್ಲಿ ಪ್ರೇಮ್ ಇನ್ನೂ ಪಳಗಬೇಕಿದೆ. ಮೇಕ ಮುರುಳಿಕೃಷ್ಣ ಪ್ರೇಮ್‌ಗೆ ಸರಿ ಸಾಟಿಯಾಗಿ ನಟಿಸುವ ಮೂಲಕ ತಾವೂ ಈ ಚಿತ್ರದ ನಾಯಕ ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಕೃತಿ ಲಂಗ ದಾವಣಿಯಲ್ಲಿ ಮುದ್ದಾಗಿ ಕಾಣುತ್ತಾಳೆ. ನಟನೆಗೆ ಸಾಕಷ್ಟು ಸ್ಕೋಪ್ ಕೃತಿಗೆ ಸಿಕ್ಕಿಲ್ಲ. ಕುಂಟ, ಮಂಟೆ ಪಾತ್ರಗಳು ನೆನಪಲ್ಲುಳಿಯುತ್ತವೆ. ವಿ.ಮನೋಹರ್, ಸತ್ಯಜಿತ್ ಕಾಮಿಡಿ ಇಷ್ಟವಾಗುತ್ತದೆ.
ಮಳವಳ್ಳಿ ಸಾಯಿಕೃಷ್ಣ ಈ ಹಿಂದೆ ಜೋಗಿ ಸಿನಿಮಾಕ್ಕೂ ಸಂಭಾಷಣೆ ಬರೆದಿದ್ದರು. ಸಾಯಿಕೃಷ್ಣ ಕೂಡ ಮಂಡ್ಯ ಭಾಗದವರೇ ಆಗಿರುವುದರಿಂದ ಅಲ್ಲಿನ ಭಾಷೆಯ ಸೊಗಡನ್ನು ಹಿಡಿದಿಟ್ಟಿದ್ದಾರೆ. ಚಪ್ಪಲಿ ಕಿತ್ಹೋದ್ರೆ ಹೋಲಿಸಿಕೋಬೌದು, ಜೀವನ ಕಿತ್ತೊದ್ರೆ ಹೋಲಿಸಿಕೊಳ್ಳಕಯ್ತದಾ? ಎನ್ನುವಂಥ ಆರ್ಥ ಪೂರ್ಣ ಸಾಲುಗಳು ಅಡ್ಡದಲ್ಲಿ ಅಲ್ಲಲ್ಲಿ ಕೇಳಸಿಗುತ್ತವೆ.
ಅರುಣ ಪ್ರಸಾದ ಛಾಯಾಗ್ರಹಣದಲ್ಲಿ ಮಂಡ್ಯದ ಲೋಕೇಷನ್‌ಗಳು ಮನ ಸೆಳೆಯುತ್ತವೆ. ಹರಿಕೃಷ್ಣ ಸಂಗೀತದ ಬಗ್ಗೆ ಎರಡು ಮಾತಿಲ್ಲ. ಹಾಡುಗಳಂತು ಹಿಟ್ ಲಿಸ್ಟ್ ಸೇರಿವೆ. ತಮಿಳಿನ ಸುಬ್ರಮಣ್ಯಪುರಂ ಸಿನಿಮಾದ ಕತೆಯನ್ನು ಇಲ್ಲಿನ ನೆಟಿವಿಟಿಗೆ ತಕ್ಕಂತೆ ತಯಾರಿಸಲು ಶ್ರಮಿಸಿರುವ ನಿರ್ದೇಶಕ ಮಹೇಶ ಬಾಬು ಚಿತ್ರದ ಕೊನೆಯ ಆರ್ಧ ಗಂಟೆ ಕುತೂಹಲ ಸೃಷ್ಟಿಸಬೇಕು ಎನ್ನುವ ಪೂರ್ವಾಗ್ರಹ ಪೀಡಿತರಂತೆ ತೋಚುತ್ತಾರೆ. ಚಿತ್ರದ ಕೊನೆಗೆ ಇದ್ದಕ್ಕಿದ್ದಂತೆ ಸೆಂಟಿಮೆಂಟ್ ದೃಶ್ಯಗಳನ್ನು ಅಳವಡಿಸಿ ಪ್ರೇಕ್ಷಕರನ್ನು ಅಳಿಸುವ ಅವರ ಆಲೋಚನೆ ಕೈ ಹಿಡಿದಿಲ್ಲ.
ಪಡ್ಡೆಗಳಿಗೆ ಹಬ್ಬದಂತೆ ಕಾಣುವ ಪ್ರೇಮ್ ಅಡ್ಡ ಮನೆ ಮಂದಿಗೆ ಇಷ್ಟವಾಗಲ್ಲ. "ಪ್ರೇಮ್, ಬೆಟರ್ ಲಕ್ ನೆಕ್ಸ್ಟ ಟೈಂ" ಎಂಬ ಹಾರೈಕೆ ಪ್ರೇಮ್ ಕಿವಿಗೆ ಬಿದ್ದಿದೆ.
-ಚಿತ್ರಪ್ರಿಯ ಸಂಭ್ರಮ್.
ತರಹೇವಾರಿ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡು ಸಿನಿಮಾ ಗೆಲ್ಲಿಸಲು ಮಾಡಿರುವ ಎಲ್ಲ ಗಿಮಿಕ್‌ಗಳು ಪ್ರೇಮ್‌ಗೆ "ಅಡ್ಡ" ಪರಿಣಾಮ ಬೀರಿವೆ. ಸಿನಿಮಾದ ಮೊದಲರ್ಧ ಕತೆಗೆ ನೋಡಿಸಿಕೊಂಡು, ನಗಿಸಿಕೊಂಡು ಹೋಗುವ ಗುಣವಿದ್ದರೆ ಎರಡನೇ ಆರ್ಧ ಭಾಗದ ಕತೆಯಲ್ಲಿ ಉರುಳುವ ತಲೆಗಳು, ರಕ್ತ-ಕಣ್ಣೀರು "ಅಡ್ಡ" ಹಾದಿ ಹಿಡಿದಂತೆ ಭಾಸವಾಗಿ, ಮನೆ ಮಂದಿ ನೋಡಲು ಮುಜುಗರ ಬೇಡವೆಂದರೂ "ಅಡ್ಡ" ಬರುತ್ತದೆ.
ಸಾಕಷ್ಟು ವಿವಾದಗಳಿಗೆ ಈಡಾಗಿದ್ದ ಹಾಡುಗಳನ್ನೇ ನೋಡಲೆಂದು ಥೇಟರ್‌ಗೆ ಧಾವಿಸುವ ಪಡ್ಡೆಗಳಿಗೆ ಮೋಸವಿಲ್ಲ. ಚಿತ್ರ ಶುರುವಾಗುತ್ತಿದ್ದಂತೆ "ಕೊಂಕಣ ಸುತ್ತಿ ಮೈಲಾರಕ್ಕೆ ಬಂದೆ ನಾನು" ಹಾಡಿಗೆ ಸೊಂಟ ಬಳುಕಿಸಿ ಚಿತ್ರದ ಆರಂಭಕ್ಕೆ ಪವರ್ ಒದಗಿಸಿ ಮರೆಯಾಗುವ ಐಂದ್ರಿತಾ ಕಣ್ಣು ಮಿಟುಕಿಸದಂತೆ ನೋಡುವ ಮೋಡಿ ಮಾಡಿದ್ದಾರೆ. ಹಾಗೆಯೇ "ಏಳುಕೋಟೆ ಹುಡುಗಿಯೊಬ್ಳು" ಐಟಂ ಹಾಡು ಶಿಳ್ಳೆ ಗಿಟ್ಟಿಸುತ್ತದೆ.
ಪಡುವಾರಳ್ಳಿಯ ಮಾಜಿ ಅಧ್ಯಕ್ಷನ ಮನೆಯ ಹುಡುಗಿ ಗಿರಿಜಾ (ಕೃತಿ ಖರಬಂಧ)ಳಿಗೆ ರಂಗ (ಪ್ರೇಮ್) ಕಾಳು ಹಾಕ್ತಾನೆ. ಗಿರಿಜಾ ಕೂಡ ಚಿಕ್ಕವಯಸ್ಸಿನಲ್ಲಿಯೇ ರಂಗನಿಗೆ ಮನಸು ಕೊಟ್ಟಿರುತ್ತಾಳೆ. ಭಯಂಕರ ಭಂಡರ ಗ್ಯಾಂಗ್‌ನ ರಂಗ ಪ್ರೀತಿಗೆ ಪ್ರಾಣ ಕೊಡೋಕು ಸೈ, ಆಭಿಮಾನಕ್ಕೆ ಪ್ರಾಣ ತೆಗೆಯೋಕು ಸೈ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದ್ದು ಅಮಾಯಕ ಎಂದು ಬಿಂಬಿಸಲು ಹೋಗಿ ಕೊನೆಗೆ ನಿರ್ದೆಶಕರೇ ಕನ್‌ಫ್ಯೂಸ್ ಆದಂಗೆ ಕಾಣುತ್ತೆ.
ನಂಜುಂಡ ಹಾಗೂ ಅವರಣ್ಣನಿಗೆ ಹೇಗಾದರೂ ಸರಿ, ಹಳ್ಳಿಯಲ್ಲಿ ದರ್ಬಾರು ಮಾಡುವ ಶೋಕಿ. ಒಮ್ಮೆ ಆಧಿಕಾರ ಅನುಭವಿಸಿ ನಂತರ ಕಳೆದುಕೊಂಡ ಅವರಿಗೆ ಹಳ್ಳಿಯಲ್ಲಿ ಗೌರವವೇ ಇಲ್ಲ ಎಂದನಿಸುತ್ತದೆ. ಮನೆಯ ಹೆಣ್ಣುಮಕ್ಕಳು ಕೂಡ ಈ ವಿಷಯದಲ್ಲಿ ಅವರನ್ನು ಕೆಣಕುತ್ತಾರೆ. ಅದಕ್ಕೆ ತಮ್ಮ ಪ್ರಗತಿಗೆ ಅಡ್ಡವಾಗಿದ್ದ ಅಧ್ಯಕ್ಷ ಕೃಷ್ಣಪ್ಪನನ್ನು ರಂಗ, ಶೀನ ಹಾಗೂ ಮಂಟೇ ಕೈಯಿಂದ ಕೊಲೆ ಮಾಡಿಸುತ್ತಾರೆ.
ಪ್ರೀತಿಸುವ ಹುಡುಗಿಯ ಚಿಕ್ಕಪ್ಪ (ನಂಜುಂಡ)ನನ್ನು ಒಲಿಸಿಕೊಳ್ಳುವ ಭರದಲ್ಲಿ ಹಾಗೂ ನಂಜುಂಡನ ಸೆಂಟಿಮೆಂಟ್ ಡೈಲಾಗ್‌ಗೆ ಫೀದಾ ಅಗುವ ರಂಗ ಮತ್ತು ಸಂಗಡಿಗರು ಕೃಷ್ಣಪ್ಪನನ್ನ ಕೊಲೆ ಮಾಡುತ್ತಾರೆ. ನಂತರ ಜೈಲಿಂದ ಬಿಡಿಸುವುದಾಗಿ ಮಾತು ಕೊಟ್ಟಿದ್ದ ನಂಜುಂಡ ರಂಗ, ಶೀನನಿಗೆ ಕೈ ಕೊಡುತ್ತಾನೆ. ಜೈಲಹಕ್ಕಿ ಕೋತಿ ಚಂದ್ರ ಇವರನ್ನು ಹೊರಗೆ ಬರುವಂತೆ ಮಾಡುತ್ತಾನೆ. ಕೋತಿ ಚಂದ್ರನ ಋಣ ತೀರಿಸಲು ಮತ್ತೊಂದು ಕೊಲೆ ಈ ಹುಡುಗರಿಂದ ನಡೆದುಹೋಗುತ್ತದೆ. ಕೊನೆಗೆ ಕತ್ತರಿಸುವದನ್ನೇ ಕಾಯಕ ಮಾಡಿಕೊಂಡು ಕೊನೆಗೆ ಶತ್ರುಗಳ ಕೈಯಲ್ಲೆ ಈ ಹುಡುಗರು ಕೊನೆಯುಸಿರೆಳೆಯುತ್ತಾರೆ.
ಪ್ರೀತಿಸುವ ಹುಡುಗಿ ಕ್ಲೈಮ್ಯಾಕ್ಸನಲ್ಲಿ ನಾಯಕನ ಬಳಿ ಬಂದು ಅಳುವಾಗ ನನ್ನನ್ನ ಮರೆತು ಬಿಡು, ಹೋಗು ಬೇರೆಯವನನ್ನ ಮದುವೆಯಾಗಿ ಜೀವನದಲ್ಲಿ ಚೆನ್ನಾಗಿರು ಎಂದು ನಾಯಕ ದಾನಶೂರ ಕರ್ಣನ ಸ್ಥಿತಿಯಲ್ಲಿರುವಾಗ ಬರುವ ಶತ್ರುಗಳನ್ನು ರಂಗ ಅಡ್ಡಡ್ಡ ಸೀಳುತ್ತಿರುವಾಗ ನಾಯಕಿಯ ತಂದೆ ಅಗಮಿಸಿ ಇವನನ್ನ ಹಿಡಿದುಕೊಟ್ಟು ಒಳ್ಳೇ ಕೆಲಸ ಮಾಡಿದೆ ಎನ್ನುವುದು ರಂಗನ ಕಿವಿಗೆ ಬೀಳುತ್ತಿದ್ದಂತೆ ರಂಗ ಹೋರಾಟದಿಂದ ವಿಮುಖನಾಗಿ ಸಾವಿಗೆ ಶರಣಾಗುತ್ತಾನೆ.

ಮಳವಳ್ಳಿ ಸಾಯಿಕೃಷ್ಣ ಈ ಹಿಂದೆ ಜೋಗಿ ಸಿನಿಮಾಕ್ಕೂ ಸಂಭಾಷಣೆ ಬರೆದಿದ್ದರು. ಸಾಯಿಕೃಷ್ಣ ಕೂಡ ಮಂಡ್ಯ ಭಾಗದವರೇ ಆಗಿರುವುದರಿಂದ ಅಲ್ಲಿನ ಭಾಷೆಯ ಸೊಗಡನ್ನು ಹಿಡಿದಿಟ್ಟಿದ್ದಾರೆ. ಚಪ್ಪಲಿ ಕಿತ್ಹೋದ್ರೆ ಹೋಲಿಸಿಕೋಬೌದು, ಜೀವನ ಕಿತ್ತೊದ್ರೆ ಹೋಲಿಸಿಕೊಳ್ಳಕಯ್ತದಾ? ಎನ್ನುವಂಥ ಆರ್ಥ ಪೂರ್ಣ ಸಾಲುಗಳು ಅಡ್ಡದಲ್ಲಿ ಅಲ್ಲಲ್ಲಿ ಕೇಳಸಿಗುತ್ತವೆ.
ಅರುಣ ಪ್ರಸಾದ ಛಾಯಾಗ್ರಹಣದಲ್ಲಿ ಮಂಡ್ಯದ ಲೋಕೇಷನ್‌ಗಳು ಮನ ಸೆಳೆಯುತ್ತವೆ. ಹರಿಕೃಷ್ಣ ಸಂಗೀತದ ಬಗ್ಗೆ ಎರಡು ಮಾತಿಲ್ಲ. ಹಾಡುಗಳಂತು ಹಿಟ್ ಲಿಸ್ಟ್ ಸೇರಿವೆ. ತಮಿಳಿನ ಸುಬ್ರಮಣ್ಯಪುರಂ ಸಿನಿಮಾದ ಕತೆಯನ್ನು ಇಲ್ಲಿನ ನೆಟಿವಿಟಿಗೆ ತಕ್ಕಂತೆ ತಯಾರಿಸಲು ಶ್ರಮಿಸಿರುವ ನಿರ್ದೇಶಕ ಮಹೇಶ ಬಾಬು ಚಿತ್ರದ ಕೊನೆಯ ಆರ್ಧ ಗಂಟೆ ಕುತೂಹಲ ಸೃಷ್ಟಿಸಬೇಕು ಎನ್ನುವ ಪೂರ್ವಾಗ್ರಹ ಪೀಡಿತರಂತೆ ತೋಚುತ್ತಾರೆ. ಚಿತ್ರದ ಕೊನೆಗೆ ಇದ್ದಕ್ಕಿದ್ದಂತೆ ಸೆಂಟಿಮೆಂಟ್ ದೃಶ್ಯಗಳನ್ನು ಅಳವಡಿಸಿ ಪ್ರೇಕ್ಷಕರನ್ನು ಅಳಿಸುವ ಅವರ ಆಲೋಚನೆ ಕೈ ಹಿಡಿದಿಲ್ಲ.
ಪಡ್ಡೆಗಳಿಗೆ ಹಬ್ಬದಂತೆ ಕಾಣುವ ಪ್ರೇಮ್ ಅಡ್ಡ ಮನೆ ಮಂದಿಗೆ ಇಷ್ಟವಾಗಲ್ಲ. "ಪ್ರೇಮ್, ಬೆಟರ್ ಲಕ್ ನೆಕ್ಸ್ಟ ಟೈಂ" ಎಂಬ ಹಾರೈಕೆ ಪ್ರೇಮ್ ಕಿವಿಗೆ ಬಿದ್ದಿದೆ.
-ಚಿತ್ರಪ್ರಿಯ ಸಂಭ್ರಮ್.
0 comments:
Post a Comment