PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ. ಎನ್.ಎಸ್.ಎಸ್ ಪ್ರತಿಭಾ ಪ್ರದರ್ಶನಕ್ಕೆ ಒಂದು ವೇದಿಕೆಯಾಗಿದ್ದು ಅದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ  .ಎಚ್.ಪರೀಕ್ಷಿತರಾಜ ನುಡಿದರು. ಅವರು ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಆಶ್ರಯ ಕಾಲೋನಿಯಲ್ಲಿ ನಡೆದ ೨೦೧೨-೧೩ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಂದುವರೆದು ಸೇವೆಯಿಂದ ಸಿಗುವ ತೃಪ್ತಿಯು ಎಲ್ಲವುಗಳಿಗಿಂತ ಮಿಗಿಲಾಗಿದ್ದು ಶಿಬಿರಗಳು ನೆಲ್ಲಿಸುವ ಭಾವನೆಯನ್ನು ನಿರ್ಮಿಸುತ್ತವೆ ಎಂದು ನುಡಿದರು. ಶಿಬಿರವನ್ನು ಉದ್ಘಾಟಿಸಿದ ಆಶ್ರಯ ಕಾಲೋನಿಯ ಸ.ಕಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಬಾಲನಾಗಮ್ಮರವರು ಶಿಬಿರಗಳಿಂದ ಅನೇಕ ಜ್ಞಾನಗಳು ಲಭಿಸುತ್ತಿದ್ದು ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಿವಿಮಾತು ನುಡಿದರು.  ಅತಿಥಿಗಳಾಗಿ ಭಾಗವಹಿಸಿದ್ದ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ  ಶರಣಬಸಪ್ಪ ಬಿಳಿಎಲೆಯವರು ಶಿಬಿರಗಳು ಬದಲಾವಣೆಯನ್ನು ತರುತ್ತವೆ, ನಾಯಕತ್ವದ ಗುಣಗಳನ್ನು ಬೆಳೆಸಿ ಒಬ್ಬ ಸತ್‌ಪ್ರಜೆಯನ್ನಾಗಿ ಮಾಡುತ್ತವೆ ಎಂದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಶಿಕ್ಷಕರಾದ ಶ್ರೀಮತಿ ಗೌರಿ ಎಸ್ ಬಿಜ್ಜಾಳ, ಶ್ರೀಮತಿ ಉಷಾರಾಣಿ ಎಸ್. ಪ್ರಾಧ್ಯಾಪಕರಾದ ಬಿ.ಶ್ರೀನಿವಾಸ ಉಪಸ್ಥಿತರಿದ್ದರು.    

ರುದ್ರೇಶರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ನಿಂಗಜ್ಜ ಅಳ್ಳಳ್ಳಿ ಸ್ವಾಗತಿಸಿದರೆ ಕೊನೆಗೆ ವಿರುಪಾಕ್ಷಿ ಬಿ ಕಾಮನೂರ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ವಿರುಪಾಕ್ಷಿ.ಎಸ್.ಗೌರಿಪುರ ನೆರವೇರಿದರು.  

Advertisement

0 comments:

Post a Comment

 
Top