PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಡಿ. : ಮಕ್ಕಳ ಮನೋವಿಕಾಸ ಮತ್ತು ಬೌದ್ಧಿಕ ವಿಕಾಸಕ್ಕೆ ಶೈಕ್ಷಣಿಕ ಪ್ರವಾಸಗಳು ಸಹಕಾರಿಯಾಗಲಿವೆ ಎಂದು ಸಮಾಜ ಕಲ್ಯಾಣ ಅಧಿಕಾರಿ ಮಂಜೂರ್ ಹುಸೇನ್ ಅವರು ಅಭಿಪ್ರಾಯಪಟ್ಟರು.
  ವಾರ್ತಾ ಇಲಾಖೆಯು ಜಿಲ್ಲೆಯ ಪರಿಶಿಷ್ಟ ಪಂಗಡದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ನಾಲ್ಕು ದಿನಗಳ ಶೈಕ್ಷಣಿಕ ಪ್ರವಾಸಕ್ಕೆ ಜಿಲ್ಲಾಡಳಿತ ಭವನ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
  ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ನಾಣ್ಣುಡಿಯಂತೆ, ಐತಿಹಾಸಿಕ ಮತ್ತು ಪ್ರವಾಸಿ ತಾಣಗಳ ಪರಿಚಯ ಮಾಡಿಸುವುದರಿಂದ ಮಕ್ಕಳಲ್ಲಿನ ಜ್ಞಾನ ಜಾಗೃತಿಗೊಳ್ಳಲಿದೆ.  ಬಡ ಮಕ್ಕಳಿಗೆ, ಅದರಲ್ಲೂ ಪರಿಶಿಷ್ಟ ಪಂಗಡದ ಮಕ್ಕಳಿಗೆ ರಾಜ್ಯದ ಐತಿಹಾಸಿಕ ತಾಣಗಳು ಹಾಗೂ ಪ್ರವಾಸಿ ತಾಣಗಳನ್ನು ಭೇಟಿ ಮಾಡಿಸಲು ವಾರ್ತಾ ಇಲಾಖೆ ಹಮ್ಮಿಕೊಂಡಿರುವ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ ಶ್ಲಾಘನೀಯವಾಗಿದೆ.  ಶೈಕ್ಷಣಿಕ ಪ್ರವಾಸ ಯಶಸ್ವಿಗೊಳ್ಳಲಿ ಎಂದು ಸಮಾಜ ಕಲ್ಯಾಣ ಅಧಿಕಾರಿ ಮಂಜೂರ್ ಹುಸೇನ್ ಅವರು ಹೇಳಿದರು.
  ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ., ವಸತಿ ನಿಲಯಗಳ ಮೇಲ್ವಿಚಾರಕಾರದ ಫಕೀರಪ್ಪ, ತುಗ್ಗಲಪ್ಪ, ದ್ರಾಕ್ಷಾಯಿಣಿ, ಸುಮಂಗಲ, ವಾರ್ತಾ ಇಲಾಖೆಯ ಸಿಬ್ಬಂದಿಗಳಾದ ಅವಿನಾಶ್ ಅವರು ಉಪಸ್ಥಿತರಿದ್ದರು,  ಶೈಕ್ಷಣಿಕ ಪ್ರವಾಸದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರವಾಸಕ್ಕೆ ಅಗತ್ಯವಿರುವ ಸಾಮಗ್ರಿಗಳ ಕಿಟ್‌ಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.



Advertisement

0 comments:

Post a Comment

 
Top