ಕೊಪ್ಪಳ ೧೩ : ನಗರದಲ್ಲಿ ಪ್ರತಿವರ್ಷ ಜರುಗುವ ಮಳೆಮಲ್ಲೇಶ್ವರ ಜಾತ್ರೆ ಬಾವೈಕ್ಯದ ಸಂಕೇತವಾಗಿದೆ ಎಂದು ಸಯ್ಯದ್ ಪೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಪಕ್ಷದ ಮುಖಂಡ ಕೆಎಂ ಸಯ್ಯದ್ ಹೇಳಿದರು.
ಅವರು ನಗರದ ಹೊರವಲಯದಲ್ಲಿ ಜರುಗಿದ ಮಳೆಮಲ್ಲೇಶ್ವರ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿ ಭಾನುವಾರ ಮಾತನಾಡಿದರು. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಜರುಗುವ ಈ ಜಾತ್ರೆ ತನ್ನದೇ ಆದ ವಿಶಿಷ್ಟ ಆಚರಣೆ ಹೊಂದಿದೆ. ಗವಿಮಠದ ಜಾತ್ರೆಯಂತೆಯೇ ಈ ಜಾತ್ರೆಗೂ ಕೂಡ ಜಾತಿ ಮತ ತೊರೆದು ಜಾತ್ರೆಯಲ್ಲಿ ಎಲ್ಲರೂ ಬಾಗವಹಿಸುವುದು ಸಂತಸದ ವಿಷಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿವಣ್ಣ ಹಡಗಲಿ, ಮಿಶ್ರಮಲ್ ಪುರೋಹಿತ್, ಸಿದ್ದಯ್ಯ ಹಿರೇಮಠ, ಶಿವು ಕೋಡಂಗಿ ಲಕ್ಷ್ಮಣ ಕಲ್ಲನವರ್ ಸೇರಿದಂತೆ ಗಣ್ಯರು ಹಾಗೂ ಮಳೆಮಲ್ಲೇಶ್ವರ ಕಮೀಟಿಯ ಸದಸ್ಯರು ಪಾಲ್ಗೊಂಡಿದ್ದರು.
0 comments:
Post a Comment