ರಂಜಾನ್ ಪ್ರಯುಕ್ತ ತಳಕಲ್ಲ ವಸತಿ ಶಾಲೆ ವಿದ್ಯಾರ್ಥಿಗಳಿಗೆ
ಕೊಪ್ಪಳ. ಆ. ೧೩ : ಮುಸ್ಲಿಂ ಸಮಾಜದ ಪವಿತ್ರ ರಂಜಾನ್ ಮಾಸಾಚಾರಣೆ ಪ್ರಯುಕ್ತ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಳಕಲ್ಲ ಗ್ರಾಮದ ಹೊರವಲಯದಲ್ಲಿರುವ ಶ್ರೀ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ರೋಜಾ ಆಚರಣೆ ಮಾಡುತ್ತಿದ್ದು, ಅವರಿಗೆ ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್‌ರವರಿಂದ ಹಣ್ಣು ಹಂಪಲ ವಿತರಿಸಿ ಇಫ್ತಾರ್ ವ್ಯವಸ್ಥೆ ಮಾಡಿಸಿದರು.
ಏರ್ಪಡಿಸಿದ ಸರಳ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ರಂಜಾನ್ ಮಾಸಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ರೋಜಾ ಆಚರಣೆ ಮಾಡುವುದರ ಮೂಲಕ ಭಯ, ಭಕ್ತಿ, ದೇವನ ಆರಾಧನೆ ಕಲಿಯುವುದರ ಜೊತೆಗೆ ದೇಶಪ್ರೇಮ, ದೇಶಾಭೀಮಾನ ಬೆಳೆಸುವಂತಾಗಬೇಕು. ರಾಷ್ಟ್ರೀಯ ಭಾವೈಕ್ಯತೆಗೆ ಪಾತ್ರರಾಗಬೇಕೆಂದು ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿಷ್ಣುತೀರ್ಥ ಗುಬ್ಬಿ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹರೀಶ್ ಹೆಚ್. ಎಸ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಸಾದಿಕ್‌ಅಲಿ ಅಲ್ಲದೇ ವಸತಿ ಶಾಲೆಯ ಅಡುಗೆ ಸಹಾಯಕರಾದ ಗವಿಸಿದ್ದನಗೌಡ ಹಿರೇಗೌಡ, ರಜಿಯಾ ಬೇಗಂ, ಸುಜಾತಾ ಚಲವಾದಿ, ಅಕ್ಬರ್‌ಸಾಬ ನದಾಫ್, ಸಂಗಯ್ಯ ಶಾಸ್ತ್ರೀಮಠ ಮತ್ತಿತರರು ಉಪಸ್ಥೀತರಿದ್ದರು.
0 comments:
Post a Comment